ನಮ್ಮ ಸೌತ್ ಸೂಪರ್ನ ಸ್ಟಾರ್ಟ ಗಳ ವಿದ್ಯಾರ್ಹತೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ

0

South indian actors education : ನಮ್ಮ ದಕ್ಷಿಣ ಭಾರತ ಚಿತ್ರರಂಗದ ನಟರು ಜನಪ್ರಿಯತೆ ಹಾಗೂ ಶ್ರೀಮಂತಿಕೆ ಮತ್ತು ನಟನೆಯ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಆದರೆ ಅವರ ವಿದ್ಯಾರ್ಹತೆ ಏನು ಎಂಬುದರ ಕುರಿತಂತೆ ಅವರ ಅಭಿಮಾನಿಗಳಲ್ಲಿ ಕುತೂಹಲ ಸಾಕಷ್ಟಿರುತ್ತದೆ. ಹಾಗಿದ್ದರೆ ಬನ್ನಿ ಗೆಳೆಯರೇ ನಮ್ಮ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟರ ವಿದ್ಯಾರ್ಹತೆ ಎಷ್ಟಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಬಿಕಾಂ ಪದವಿಯನ್ನು ಮಾಡಿದ್ದಾರೆ. ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ರವರು ಬಿಬಿಎ ಪದವಿಯನ್ನು ಪೂರೈಸಿದ್ದಾರೆ.

ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ ಶಿವಣ್ಣ ಅವರು ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪೂರೈಸಿದ್ದಾರೆ. ಭಾರತೀಯ ಚಿತ್ರರಂಗದ ಪರ್ಫೆಕ್ಟ್ ಪ್ಯಾನ್ ಇಂಡಿಯನ್ ಸ್ಟಾರ್ ಆಗಿರುವ ರೆಬೆಲ್ ಸ್ಟಾರ್ ಪ್ರಭಾಸ್ ರವರು ಬಿ ಟೆಕ್ ಅನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗದ ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಅವರು ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಶನ್ ನಲ್ಲಿ ಡಿಪ್ಲೋಮವನ್ನು ಪೂರೈಸಿದ್ದಾರೆ. ಭಾರತೀಯ ಚಿತ್ರರಂಗದ ಯೂಥ್ ಐಕಾನ್ ಗಳಲ್ಲಿ ಒಬ್ಬರಾಗಿರುವ ವಿಜಯ್ ದೇವರಕೊಂಡ ಬಿಕಾಂ ಪೂರೈಸಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್ ನಟ ಆಗಿರುವ ಸೂರ್ಯ ಅವರು ಕೂಡ ಬಿಕಾಂ ಮುಗಿಸಿದ್ದಾರೆ.

South indian actors

ಕನ್ನಡಿಗರ ನೆಚ್ಚಿನ ತೆಲುಗು ನಟ ಆಗಿರುವ ಜೂನಿಯರ್ ಎನ್ಟಿಆರ್ ಅವರು 12ನೇ ತರಗತಿ ಪಾಸ್ ಆಗಿದ್ದಾರೆ. ಕನ್ನಡ ಚಿತ್ರರಂಗದ ಸರ್ವಶ್ರೇಷ್ಠ ನಿರ್ದೇಶಕ ಹಾಗೂ ನಾಯಕ ನಟರಲ್ಲಿ ಒಬ್ಬರಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಬಿಕಾಂ ಪೂರೈಸಿದ್ದಾರೆ. ಕೆಲವೇ ಕೆಲವು ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಮಾಸ್ ಅಭಿಮಾನಿಗಳನ್ನು ಹೊಂದಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (dhruva sarja) ಹತ್ತನೇ ತರಗತಿ ಪಾಸ್ ಆಗಿದ್ದಾರೆ. ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮಚರಣ್ ಅವರು ಬಿಕಾಂ ಮಾಡಿದ್ದಾರೆ. ತೆಲುಗು ಚಿತ್ರರಂಗದ ಯುವ ನಟ ನಾಗ ಚೈತನ್ಯ (naga chaitanya) ಅವರು ಕೂಡ ಬಿಕಾಂ ಮಾಡಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ಇತ್ತೀಚಿನ ವರ್ಷಗಳಲ್ಲಿ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ (yash) ಅವರು 12ನೇ ತರಗತಿ ಪಾಸ್ ಆಗಿದ್ದಾರೆ.

ತಮಿಳುನಾಡಿನ ಚಿತ್ರರಂಗದ ತಳಪತಿ ವಿಜಯ್ ಅವರು ವಿಶ್ಯುವಲ್ ಕಮ್ಯುನಿಕೇಶನ್ ನಲ್ಲಿ ಪದವಿಯನ್ನು ಪಡೆದಿದ್ದಾರೆ. ಕಿಚ್ಚ ಸುದೀಪ್ ಅವರು ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಪೂರೈಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 10ನೇ ತರಗತಿ ಪಾಸ್ ಆಗಿದ್ದಾರೆ. ತಮಿಳು ಚಿತ್ರರಂಗದ ತಲಾ ಅಜಿತ್ ಅವರು ಕೂಡ 10ನೇ ತರಗತಿ ಪಾಸ್ ಆಗಿದ್ದಾರೆ. ಪವನ್ ಕಲ್ಯಾಣ್ ಕೂಡ 10ನೇ ತರಗತಿ ಪಾಸ್. ನಿಖಿಲ್ ಕುಮಾರಸ್ವಾಮಿ ಅವರು ಬಿಬಿಎ ಪದವಿಯನ್ನು ಪೂರೈಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneet rajkumar) ಅವರು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮವನ್ನು ಕರೆಸ್ಪಾಂಡೆನ್ಸಿಯಲ್ಲಿ ಮುಗಿಸಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ್ ಬಿಎ ಪದವಿಯನ್ನು ಪೂರೈಸಿದ್ದರೆ ನಮ್ಮನ್ನೆಲ್ಲ ಅಗಲಿರುವ ಚಿರು ಸರ್ಜಾ (chiru satja) ಅವರು ಬಿಕಾಂ ಪದವಿಯನ್ನು ಮಾಡಿದ್ದಾರೆ. ಇದೇ ಮಿತ್ರರೇ ನಮ್ಮ ಸ್ಟಾರ್ ನಟರ ವಿದ್ಯಾರ್ಹತೆಗಳು. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಶೇರ್ ಮಾಡಿಕೊಳ್ಳಿ.

Leave A Reply

Your email address will not be published.