ನಿಶ್ಚಿತಾರ್ಥದಲ್ಲಿ ಸಿಲ್ಕ್ ಸೀರೆ ಧರಿಸಿಕೊಂಡು ಮಿರ ಮಿರ ಅಂತ ಮಿಂಚಿದ ಹರಿಪ್ರಿಯಾ ಧರಿಸಿದ್ದ ಪ್ರೇಮಿಯಂ ಸಿಲ್ಕ್ ಸೀರೆಯ ಬೆಲೆ ಎಷ್ಟು ಗೊತ್ತಾ

0

haripriya engagement saree price :ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅನಿರೀಕ್ಷಿತವಾಗಿ ಹಲವಾರು ಸೆಲೆಬ್ರೆಟಿಗಳ ನಿಶ್ಚಿತಾರ್ಥ ಹಾಗೂ ಮದುವೆ ಸಮಾರಂಭಗಳು ಸತತವಾಗಿ ನಡೆಯುತ್ತಿರುವುದು ನಿಜಕ್ಕೂ ಕೂಡ ಆಶ್ಚರ್ಯ ತರಿಸುವಂತಹ ವಿಚಾರವಾಗಿದೆ. ನಾವು ಮಾತನಾಡುತ್ತಿರುವುದು ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥದ ಬಗ್ಗೆ ಅಲ್ಲ ಬದಲಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಅವರ ಎಂಗೇಜ್ಮೆಂಟ್ ಕುರಿತಂತೆ.

ನಟ ವಸಿಷ್ಠ ಸಿಂಹ ಅವರು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ತಮ್ಮ ಕಂಚಿನ ಕಂಠ ಹಾಗೂ ಮನೋಜ್ನ ಅಭಿನಯದ ಮೂಲಕ ದೊಡ್ಡ ಮಟ್ಟದ ಅಭಿಮಾನಿಗಳನ್ನು ತಮ್ಮ ಪ್ರತಿಭೆಯಿಂದ ಈಗಾಗಲೇ ಹೊಂದಿದ್ದಾರೆ. ನಾಯಕನ ಪಾತ್ರ ಪೋಷಕ ನಟನ ಪಾತ್ರ ಹಾಗೂ ಖಳನಾಯಕನ ಪಾತ್ರಕ್ಕೂ ಕೂಡ ಸಂಪೂರ್ಣ ನ್ಯಾಯವನ್ನು ಒದಗಿಸಬಲ್ಲಂತಹ ಕೆಲವೇ ಕೆಲವು ನಟರಲ್ಲಿ ವಶಿಷ್ಠ ಸಿಂಹ ಕೂಡ ಒಬ್ಬರು. ಇನ್ನು ನಟಿ ಹರಿಪ್ರಿಯಾ ಅವರು ಕೂಡ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಸೇರಿದಂತೆ ಪರಭಾಷೆಗಳಲ್ಲಿ ಕೂಡ ನಟಿಸಿ ಬಂದಿದ್ದಾರೆ.

haripriya engagement saree price

ಇನ್ನು ಮೊದಲಿಗೆ ಇವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿಯಂತೆ ವಿಚಾರ ಹರಿದು ಬಂದಿತ್ತು. ಆದರೆ ಮೊದಲಿಗೆ ಇದನ್ನು ಯಾರು ಕೂಡ ನಂಬಲು ಹೋಗಲಿಲ್ಲ. ಆದರೆ ಇವರಿಬ್ಬರೂ ದುಬೈನಲ್ಲಿ ಒಟ್ಟಿಗೆ ಕೈಕೈ ಹಿಡಿದುಕೊಂಡು ಶಾಪಿಂಗ್ ಮಾಡಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದ ಮೇಲಂತೂ ಈ ವಿಚಾರ ಗಾಳಿ ಸುದ್ದಿಯಿಂದ ನಂಬಿಕೆಯಾಗಿ ಬದಲಾಯಿತು. ಕೊನೆಗೂ ಇವರಿಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮುಗಿಸಿದ್ದಾರೆ.

ನಮ್ಮ ಸೌತ್ ಸೂಪರ್ನ ಸ್ಟಾರ್ಟ ಗಳ ವಿದ್ಯಾರ್ಹತೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ

haripriya engagement saree price :

ವಶಿಷ್ಠ ಹಾಗೂ ಹರಿಪ್ರಿಯಾ ಅವರು ಎಂಗೇಜ್ಮೆಂಟ್ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಶುಭ ಹಾರೈಸಿದ್ದಾರೆ. ಇನ್ನು ಹರಿಪ್ರಿಯಾ ಅವರು ಎಂಗೇಜ್ಮೆಂಟ್ ಸಂದರ್ಭದಲ್ಲಿ ಉಟ್ಟುಕೊಂಡಿದ್ದ ಹಳದಿ ಬಣ್ಣದ ಸರಳ ಡಿಸೈನ್ ಹೊಂದಿರುವ ದುಬಾರಿ ಬೆಲೆಯ ಸೀರೆಯ ಬೆಲೆ ಎಷ್ಟು ಎಂದು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಮಿತ್ರರೇ ನೋಡೋದಕ್ಕೆ ಸರಳವಾಗಿ ಶಾಸ್ತ್ರೋಕ್ತ ಸೀರೆಯ ರೀತಿಯಲ್ಲಿ ಇದ್ದರೂ ಕೂಡ ಇದರ ಬೆಲೆ ಮೂರುವರೆ ಲಕ್ಷ ರೂಪಾಯಿ ಎಂಬುದಾಗಿ ತಿಳಿದು ಬಂದಿದೆ. ಸೆಲೆಬ್ರಿಟಿಗಳ ನಿಶ್ಚಿತಾರ್ಥ ಕಾರ್ಯಕ್ರಮ ಎಂದ ಮೇಲೆ ಇಷ್ಟೊಂದು ದುಬಾರಿ ಇರೋದು ಸರ್ವೇಸಾಮಾನ್ಯ ಬಿಡಿ. ಅತೀ ಶೀಘ್ರದಲ್ಲಿ ಹಸೇಮಣೆ ಏರಲಿರುವ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಜೋಡಿಗೆ ಶುಭವಾಗಲಿ ಎಂಬುದಾಗಿ ಕಾಮೆಂಟ್ ಬಾಕ್ಸ್ ನಲ್ಲಿ ಹಾರೈಸೋಣ. ಈ ಅಪರೂಪದ ಜೋಡಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Leave A Reply

Your email address will not be published.