ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯದಲ್ಲೇ ಸಿಹಿ ಸುದ್ದಿ ಹಂಚಲಿದ್ದಾರೆ…ಅಭಿಮಾನಿಗಳಿಗಿಗ ಸಂಭ್ರಮದ ಕಾಲ.. ನಟಿ, ರಚಿತಾ ರಾಮ್ ಕೈ ಹಿಡಿಯಲಿರುವ ವರ ಯಾರು ಗೊತ್ತಾ??

0

Rachita ram marraige : ‘ಬುಲ್ ಬುಲ್’ ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಚಿತಾ ರಾಮ್(Rachita Ram) , ಒಂದರ ಹಿಂದೊಂದು ಹಿಟ್ ಸಿನಿಮಾವನ್ನು 10 ವರ್ಷಗಳಿಂದಲೂ ನೀಡುತ್ತಲೇ ಬಂದಿದ್ದಾರೆ. ದಿಲ್ ರಂಗೀಲಾ, ರನ್ನ, ರತ್ನಾವರ, ಚಕ್ರವ್ಯೂಹ, ಜಗ್ಗು ದಾದಾ, ಅಯೋಗ್ಯ, ಸೀತಾರಾಮ ಕಲ್ಯಾಣ, ನಟಸಾರ್ವಭೌಮ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನಿಸುವಂತಹ ಸೌಂದರ್ಯ ರಚಿತರಾಮ್ ಅವರದ್ದು. ಚಂದನವನದ ಗುಳಿಕೆನ್ನೆ ಸುಂದರಿಯ(Dimple queen) ನಗುವನ್ನೊಮ್ಮೆ ನೋಡಿದರೆ ಸಾಕು, ನಾಚಿಕೊಳ್ಳುವ ಅಭಿಮಾನಿಗಳು ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿಯೂ ಕಾಣಸಿಗುತ್ತಾರೆ. ಇದೀಗ ರಚಿತಾ ರಾಮ್ ತನ್ನೆಲ್ಲಾ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ಹಂಚಲಿದ್ದಾರೆ ಎನ್ನಲಾಗುತ್ತಿದೆ.

Rachita ram marraige
Rachita ram marraige

ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ, ಹಿರಿತೆರೆಯ ಚಿತ್ರಗಳಲ್ಲಿ ಶ್ರಮಿಸಿರುವ ಅನೇಕ ಕಲಾವಿದರು ಹಸೆ ಮಣೆಯೇರಿ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ‘ಡಿಂಪಲ್ ಕ್ವೀನ್ ರಚಿತಾ ರಾಮ್ ಹೊಸ ವರ್ಷದಲ್ಲಿ ವಿವಾಹವಾಗಲಿದ್ದಾರಾ? ವರ ಯಾರು?’ ಎಂಬೆಲ್ಲಾ ವಿಚಾರವಾಗಿ ಗಾಂಧಿನಗರದಲ್ಲಿ ಸುದ್ದಿ ಎದ್ದಿದೆ.

ನಟಿ ಅದಿತಿ ಪ್ರಭುದೇವ(Adithi Prabhudev) ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ವಶಿಷ್ಟ ಸಿಂಹ ಮತ್ತು ಹರಿಪ್ರಿಯ(Vasista Simha and Hari priya), ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ(Abhishek Ambareesh and Aviva Bidappa) ಜೋಡಿಗಳು 2023ರ ಪ್ರಾರಂಭದಲ್ಲಿ ಮದುವೆಯಾಗುವ ಕನಸು ಕಂಡು ಭರ್ಜರಿ ತಯಾರಿಯಲ್ಲಿದ್ದಾರೆ. ಇದೇ ಸಾಲಿಗೆ ಗುಳಿಕೆನ್ನೆ ನಟಿ, ರಚಿತರಾಮ್ ಕೂಡ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಅಭಿಷೇಕ್ ಅಂಬರೀಶ್ ಮತ್ತು ಭಾವಿ ಪತ್ನಿ ಅವಿವ ನಡುವಿನ ವಯಸ್ಸಿನ ಅಂತರ ಕೇಳಿ ಆಶ್ಚರ್ಯಪಟ್ಟ ಅಂಬರೀಶ್ ಸಂಬಂಧಿಕರು

2019 ರಲ್ಲಿ ರಚಿತರಾಮ್ ಸಹೋದರಿಯಾದ ನಿತ್ಯ ರಾಮ್(Nitya Ram) ಅವರ ವಿವಾಹವು ಅದ್ದೂರಿಯಾಗಿ ನೆರವೇರಿತ್ತು. ಅದೇ ರೀತಿ ರಚಿತಾ ರಾಮ್ ಅವರಿಗೂ ಕೂಡ ಒಳ್ಳೆಯ ವರನನ್ನು ಹುಡುಕಿ foreign ನಲ್ಲಿ ಮದುವೆ ಮಾಡುವ ಆಲೋಚನೆಯನ್ನು ಕುಟುಂಬಸ್ಥರು ಮಾಡಿದ್ದಾರಂತೆ. ರಚಿತಾ ರಾಮ್ ಅವರಿಗೆ ಪದೇಪದೇ ಸಭೆ ಸಮಾರಂಭಗಳಲ್ಲಿ ಕೇಳಿದ ಪ್ರಶ್ನೆ ಎಂದರೆ ‘ನಿಮ್ಮ ಮದುವೆ ಯಾವಾಗ?’ ಎಂದು; ಇದಕ್ಕೆ ಉತ್ತರವೆಂಬಂತೆ ರಚಿತಾ ರಾಮ್ ಮನೆಯ ಕುಟುಂಬಸ್ಥರು, ಗೌಡ್ರ ಮನೆಯ ಉತ್ತಮ ಗುಣ ನಡತೆಯ ವರ ಸಿಕ್ಕಿದರೆ ಹಾರ ಬದಲಿಸುವ ಸಂಭ್ರಮವನ್ನು ನೆರವೇರಿಸಲು ನಿರ್ಧರಿಸಿದ್ದಾರಂತೆ. ಹೌದು. ರಚಿತಾ ರಾಮ್ ಮತ್ತು ಆಕೆಯ ಕುಟುಂಬಸ್ಥರು ಮೆಚ್ಚುವ ವರ ಸಿಕ್ಕಿ, ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಮದುವೆ ಸಮಾರಂಭವನ್ನು ಇಟ್ಟುಕೊಳ್ಳುತ್ತಾರಂತೆ.

Leave A Reply

Your email address will not be published.