ದುಬಾರಿ ಕಾರುಗಳಿದ್ದರೂ ಕೂಡ ಆಟೋದಲ್ಲಿ ಪ್ರಯಾಣ ಮಾಡಿದ ದುನಿಯಾ ವಿಜಯ್ ಆಟೋ ಡ್ರೈವರ್ ಗೆ ಕೊಟ್ಟ ಹಣವೆಷ್ಟು ಗೊತ್ತಾ ನಿಜಕ್ಕೂ ನಂಬಕ್ಕಾಗಲ್ಲ

0

Duniya vijay travelling in auto : ನಮ್ಮ ಕನ್ನಡ ಚಿತ್ರರಂಗದಲ್ಲಿ ತೆರೆಯ ಮೇಲೆ ಮಾತ್ರವಲ್ಲದೆ ತೆರೆಯ ಹಿಂದೆ ನಿಜ ಜೀವನದಲ್ಲಿ ಕೂಡ ಹೀರೋ ಆದವರಿದ್ದಾರೆ. ಅವರುಗಳಲ್ಲಿ ನಟ ದುನಿಯಾ ವಿಜಯ್ ಕೂಡ ಒಬ್ಬರಾಗಿದ್ದಾರೆ. ದುನಿಯಾ ವಿಜಯ್ ನೋಡಲು ರಫ್ ಅಂಡ್ ಟಫ್ ಆಗಿದ್ದಾರೆ ಆದರೆ ಮಗುವಿನಂತಹ ಮನಸ್ಸು ಅವರದು. ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಕೋಬ್ರಾ ಎಂಬುದಾಗಿ ಗುರುತಿಸಿಕೊಂಡಿರುವ ದುನಿಯಾ ವಿಜಯ್ ಅವರು ಕೇವಲ ಸಿನಿಮಾ ವಿಚಾರವಾಗಿ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದಲ್ಲಿ ಬೇರೆಯವರಿಗೆ ಮಾಡಿರುವ ಸಹಾಯದಿಂದಲೂ ಕೂಡ ಗುರುತಿಸಿಕೊಳ್ಳುತ್ತಾರೆ.

ಚಿತ್ರರಂಗದಲ್ಲಿ ಯಶಸ್ವಿ ನಟನಾಗಿದ್ದರೂ ಕೂಡ ಎಲ್ಲಿಯೂ ಹಮ್ಮು ಅಹಂಕಾರಗಳನ್ನು ತೋರಿಸಿಕೊಳ್ಳದೆ ಎಲ್ಲರೊಳಗೆ ತಾನು ಕೂಡ ಒಬ್ಬ ಎಂಬ ವಿನಮ್ರತೆಯನ್ನು ತೋರಿಸಿಕೊಂಡು ಬಂದಂತವರು. ಚಿತ್ರರಂಗದಲ್ಲಿ ಯಾರಿಗೆ ಕಷ್ಟ ಬಂದರೂ ಕೂಡ ದುನಿಯಾ ವಿಜಯ್ ಅವರು ಅವರ ಕಷ್ಟದಲ್ಲಿ ಭಾಗಿಯಾಗಿ ಅವರಿಗೆ ಸಹಾಯ ಮಾಡುತ್ತಾರೆ. ಅದಕ್ಕೆ ಜೀವಂತ ಉದಾಹರಣೆ ಎಂದರೆ ಬುಲೆಟ್ ಪ್ರಕಾಶ್ ಅವರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕಾರ್ಯಗಳನ್ನು ಅವರ ಕುಟುಂಬದಲ್ಲಿ ಒಬ್ಬನಂತೆ ನಿಂತು ಮಾಡಿದ್ದರು. ಇತ್ತೀಚಿಗಷ್ಟೇ ಸಲಗ ಸಿನಿಮಾದ ಮೂಲಕ ನಿರ್ದೇಶಕನಾಗಿಯೂ ಕೂಡ ಚಿತ್ರರಂಗದಲ್ಲಿ ಯಶಸ್ಸನ್ನು ಪಡೆದಿದ್ದಾರೆ.

Duniya vijay travelling in auto
Duniya vijay travelling in auto

ಕನ್ನಡ ಚಿತ್ರರಂಗದ ಒಬ್ಬ ಸ್ಟಾರ್ ನಟನಾಗಿ ಅವರ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಾರ್ ಇದ್ದರೂ ಕೂಡ ಸಾಮಾನ್ಯ ಆಟೋರಿಕ್ಷಾದಲ್ಲಿ ಕೂಡ ದುನಿಯಾ ವಿಜಯ್ ಅವರು ಈಗಲೂ ಕೂಡ ಓಡಾಡುತ್ತಾರೆ. ಅದು ದುನಿಯಾ ವಿಜಯ್ ಅವರ ಸರಳತೆಗೆ ಸಾಕ್ಷಿ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಆಟೋ ರಿಕ್ಷಾದಲ್ಲಿ ಡ್ರಾಪ್ ಪಡೆದ ನಂತರ ಆಟೋರಿಕ್ಷದ ಚಾಲಕ ಹಣ ಪಡೆಯಲು ನಿರಾಕರಿಸುತ್ತಾನೆ ಆಗ ದುನಿಯಾ ವಿಜಯ್ ಅವರು ಮಾಡಿದ ಕಾರ್ಯ ನಿಜಕ್ಕೂ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲರೂ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ನಮ್ಮ ಸೌತ್ ಸೂಪರ್ನ ಸ್ಟಾರ್ಟ ಗಳ ವಿದ್ಯಾರ್ಹತೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ

Duniya vijay travelling in auto .. How much duniya vijay paid for auto drive ?

ಹೌದು ಗೆಳೆಯರೇ, ರಿಕ್ಷಾ ಚಾಲಕ ಹಣ ಬೇಡ ಎಂಬುದಾಗಿ ಹಠ ಹಿಡಿದು ನಿಂತಿದ್ದರು ಕೂಡ ಆತ ದುಡಿದ ಹಣವನ್ನು ಅದರಲ್ಲಿಯೂ ಆತ ನ್ಯಾಯವಾಗಿ ದುಡಿದಿರುವ ಹಣವನ್ನು ಆತನಿಗೆ ಸೇರಲೇಬೇಕು ಎಂಬುದಾಗಿ ದುನಿಯಾ ವಿಜಯ್ ಅವರು ಮೀಟರ್ ಆದಕ್ಕಿಂತಲೂ ಹೆಚ್ಚಿನ ಹಣವನ್ನು ಆತನ ಕೈಗೆ ನೀಡಿ ತಾವು ಹೋಗಬೇಕಾಗಿರುವ ಕೆಲಸದ ಕಡೆಗೆ ಹೋಗುತ್ತಾರೆ. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಕೂಡ ದುನಿಯಾ ವಿಜಯ್ ಅವರು ಮಾಡಿರುವ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.