ತಮಿಳಿನ ಖ್ಯಾತ ನಟರ ಜೊತೆ ಸಿನಿಮಾ ಮಾಡುತ್ತಿರುವ ಶಿವಣ್ಣ. ತಮಿಳಿನಲ್ಲಿ ಫುಲ್ ಬ್ಯೂಸಿ

0

ಕನ್ನಡ ಚಿತ್ರರಂಗದ ಬ್ರಾಂಡ್ ನೇಮ್ ಎಂದಾಗ ನಮಗೆ ಕೇಳಿ ಬರುವ ಮೊದಲ ಹೆಸರು ಅಣ್ಣಾವ್ರು. ಕನ್ನಡ ಚಿತ್ರರಂಗ ಎಂದರೆ ಅಣ್ಣಾವ್ರು ಅಣ್ಣಾವ್ರು ಎಂದರೆ ಕನ್ನಡ ಚಿತ್ರರಂಗ ಎಂಬ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ಅವರು ತಮ್ಮ ಪ್ರಭಾವವನ್ನು ಸಂಪಾದಿಸಿದ್ದರು. ಇನ್ನು ಕನ್ನಡ ಚಿತ್ರರಂಗಕ್ಕೆ ಮೂರು ರತ್ನಗಳನ್ನು ಕೂಡ ರಾಜ್ ಕುಮಾರ್ ಅವರು ನೀಡಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಶಿವಣ್ಣ ರಾಘಣ್ಣ ಹಾಗೂ ಅಪ್ಪು ಅವರ ಬಗ್ಗೆ. ಈಗಾಗಲೇ ಅಪ್ಪು ನಮ್ಮನ್ನೆಲ್ಲ ಬಿಟ್ಟು ಅಗಲಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ರಾಘಣ್ಣ ಆಗೊಮ್ಮೆ ಈಗೊಮ್ಮೆ ಸಿನಿಮಾ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ದೊಡ್ಮನೆಯಿಂದ ಕನ್ನಡ ಚಿತ್ರರಂಗದಲ್ಲಿ ಈಗ ಸಕ್ರಿಯ ರಾಗಿರುವ ನಟ ಎಂದರೆ ಅದು ಎಲ್ಲರ ಹಿರಿಯಣ್ಣ ಕರುನಾಡ ಚಕ್ರವರ್ತಿ ಶಿವಣ್ಣ. ಹೌದು ಮಿತ್ರರೇ ಶಿವಣ್ಣ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ಹಾಗೂ ಕೈಯಲ್ಲಿ ಹೆಚ್ಚು ಸಿನಿಮಾವನ್ನು ಹೊಂದಿರುವಂತಹ ನಟರಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿವಣ್ಣ ಕನ್ನಡ ಚಿತ್ರರಂಗವನ್ನು ಬಿಟ್ಟು ಪರ ಭಾಷೆಗಳತ್ತ ಅದರಲ್ಲೂ ವಿಶೇಷವಾಗಿ ತಮಿಳು ಚಿತ್ರರಂಗದತ್ತ ಒಲವು ತೋರಿಸಿದಂತೆ ಇದೆ.

Shivanna tamil movies
Shivanna tamil movies

ನಾವು ಹೀಗೆ ಹೇಳುವುದಕ್ಕೆ ಕೂಡ ಒಂದು ಸರಿಯಾದ ಕಾರಣವಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಧನುಷ್ ಅವರ ನಟನೆಯಲ್ಲಿ ಮೂಡಿ ಬರುತ್ತಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಅವರು ಅವರ ಸಹೋದರನ ಪಾತ್ರದಲ್ಲಿ ಅಂದರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೇವಲ ಇಷ್ಟಕ್ಕೆ ನಿಲ್ಲದೆ ಕರುನಾಡ ಚಕ್ರವರ್ತಿ ಶಿವಣ್ಣ ಧನುಷ್ ಅವರ ಮಾವನವರಾಗಿರುವ ಹಾಗೂ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ಅವರ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ.

ಗೆಳೆಯರೇ ಸೂಪರ್ ಸ್ಟಾರ್ ರಜನಿಕಾಂತ್ ( super star rajanikant) ನಟನೆಯಲ್ಲಿ ಮೂಡಿ ಬರುತ್ತಿರುವ ಜೈಲರ್ ಸಿನಿಮಾದಲ್ಲಿ ಕೂಡ ಕರುನಾಡ ಚಕ್ರವರ್ತಿ ಶಿವಣ್ಣ (shivarajkumar) ಪ್ರಮುಖ ಪಾತ್ರದಲ್ಲಿ ನಟಿಸುವುದು ಕನ್ಫರ್ಮ್ ಆಗಿದ್ದು ಚಿತ್ರದಂಡ ಅಧಿಕೃತವಾಗಿ ಘೋಷಣೆ ಕೂಡ ಮಾಡಿದೆ. ಹೀಗೆ ಸತತವಾಗಿ ಪರ ಭಾಷೆಗಳಲ್ಲಿ ಶಿವಣ್ಣ ನಟಿಸುತ್ತಿರುವುದು ಇದೇ ಮೊದಲ ಬಾರಿ ಆಗಿದ್ದು ಕನ್ನಡ ಚಿತ್ರರಂಗದಿಂದ ತಮ್ಮ ಒಲವನ್ನು ಶಿವಣ್ಣ ಪರಭಾಷೆಗಳತ್ತ ನೀಡುತ್ತಿದ್ದಾರೆ ಎಂಬುದಾಗಿ ಪ್ರೇಕ್ಷಕರಲ್ಲಿ ಅನುಮಾನ ಮೂಡಲು ಪ್ರಾರಂಭಿಸಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಮಾಡಿ ಹಂಚಿಕೊಳ್ಳಿ.

‘ಅಣ್ಣಾವ್ರನ್ನು ಬಿಟ್ಟರೆ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿದವರು ನೀವೇ?’ ಎಂದು ಪ್ರಶ್ನಿಸಿದಾಗ ದರ್ಶನ್ ನೀಡಿದ ಖಡಕ್ ಉತ್ತರವೇನು ಗೊತ್ತಾ?ಕೇಳಿ ಚಂದನವನವೇ ಶಾಕ್ ಆಗಿದೆ.

Leave A Reply

Your email address will not be published.