‘ಅಣ್ಣಾವ್ರನ್ನು ಬಿಟ್ಟರೆ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿದವರು ನೀವೇ?’ ಎಂದು ಪ್ರಶ್ನಿಸಿದಾಗ ದರ್ಶನ್ ನೀಡಿದ ಖಡಕ್ ಉತ್ತರವೇನು ಗೊತ್ತಾ?ಕೇಳಿ ಚಂದನವನವೇ ಶಾಕ್ ಆಗಿದೆ.

0

Darshan about rajkumar :ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star Darshan) ಅವರು ಪ್ರೇಮಕಥೆ, ಆಕ್ಷನ್ ಮೂವಿ, ಐತಿಹಾಸಿಕ, ಪೌರಾಣಿಕ ಕಥೆಗಳ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಎಲ್ಲಾ ಪಾತ್ರಗಳಲ್ಲಿಯೂ ಸೈ ಎನಿಸಿಕೊಂಡು ಬಹು ಬೇಡಿಕೆಯ ನಟರಾಗಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದು, ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿಯೂ ಡಿ ಬಾಸ್ ಅಭಿಮಾನಿಗಳು ಸಿಕ್ಕೇ ಸಿಗುತ್ತಾರೆ.

ಇದೀಗ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ನಡೆಯುತ್ತಿದ್ದು, ಅನೇಕಾನೇಕ ಊರುಗಳಿಗೆ ತೆರಳಿದಾಗ ತಮ್ಮ ಅಭಿಮಾನಿಗಳಿಂದಲೇ ಪ್ರಮೋಷನ್ ಕಾರ್ಯ ನಡೆಸುತ್ತಿದ್ದು ಅಭಿಮಾನಿಗಳಿಗಿಗ ಹೆಚ್ಚಿನ ಸಂತಸ ನೀಡಿದೆ. Social mediaಗಳಲ್ಲಿ, You Tube ಚಾನೆಲ್ ಗಳಲ್ಲಿ ಡಿ ಬಾಸ್ ದರ್ಶನ್ ಅವರ ಸಂದರ್ಶನಗಳ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.

ಹೀಗೆ ಮಾಧ್ಯಮದವರೊಬ್ಬರು ‘ಡಾಕ್ಟರ್ ರಾಜಕುಮಾರ್ ಅವರನ್ನು ಬಿಟ್ಟರೆ ಕರ್ನಾಟಕದಲ್ಲಿ ನಟ, ದರ್ಶನ್ ಅವರಿಗೆ ಅತಿ ಹೆಚ್ಚು ಫ್ಯಾನ್ಸ್ ಇರುವುದು..ಈ ಬಗ್ಗೆ ನೀವೇನಂತೀರಾ?’ ಎಂದು ಕೇಳುತ್ತಿದ್ದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಶ್ನೆಯನ್ನು ಅರ್ಧಕ್ಕೆ ನಿಲ್ಲಿಸಿ ಖಡಕ್ ಉತ್ತರವನ್ನು ನೀಡಿದ್ದಾರೆ.

ಸ್ನೇಹಿತರೇ…ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್ ಅವರನ್ನು ಅವರ ಮಕ್ಕಳಷ್ಟೇ ಅಲ್ಲ; ಸಮಸ್ತ ಕರ್ನಾಟಕ ಜನತೆಯೇ ಅಪ್ಪಾಜಿ ಎಂದು ಗೌರವ ಪೂರ್ವಕವಾಗಿ ಕರೆಯುತ್ತದೆ. ಅಂದರೆ ಚಿತ್ರಗಳಲ್ಲಿನ ಅಭಿನಯ, ಸರಳ ಜೀವನದ ರೀತಿ, ಉತ್ತಮ ನಡತೆ ಡಾ. ರಾಜಕುಮಾರ್ ಅವರನ್ನು ಕನ್ನಡ ಲೋಕವೇ ಕೊಂಡಾಡುವ ಎತ್ತರಕ್ಕೇರಿಸಿದೆ. ಇಂದಿಗೂ ಡಾಕ್ಟರ್ ರಾಜಕುಮಾರ್ ಅವರಿಗೆ ಇಡೀ ಕರ್ನಾಟಕದ ಮಂದಿ ಎಲ್ಲರೂ ಅಭಿಮಾನಿಗಳೇ.

Darshan about rajkumar
Darshan about rajkumar

ಇದೇ ರೀತಿ ನಟ ದರ್ಶನ್ ಅವರಿಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು, ಸಂದರ್ಶನಕಾರರ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿದ್ದಾರೆ; “ಅಭಿಮಾನಿಗಳ ವಿಚಾರಕ್ಕೆ ಬಂದರೆ ದೊಡ್ಡ ಅಭಿಮಾನಿ ಬಳಗ, ಚಿಕ್ಕ ಅಭಿಮಾನಿ ಬಳಗ ಅವರ ಸಂಖ್ಯೆ ಅದು ಯಾವುದು ಲೆಕ್ಕಕ್ಕೆ ಬರುವುದಿಲ್ಲ..ಅಭಿಮಾನಿಗಳು ಎಷ್ಟೇ ಜನ ಇದ್ದರೂ ಕೂಡ ಅಭಿಮಾನಿಗಳೇ, ಒಬ್ಬ ಅಭಿಮಾನಿಯನ್ನು ಗಳಿಸುವುದು ಕೂಡ ಸುಲಭದ ಮಾತಲ್ಲ..ಕಷ್ಟಪಟ್ಟು ಅವರ ಪ್ರೀತಿಯನ್ನು ಸಂಪಾದಿಸಿ ಉಳಿಸಿಕೊಂಡು ಹೋಗಬೇಕು. ಅದಕ್ಕಾಗಿ ಅಭಿಮಾನಿಗಳೆಂಬುದೇ ಒಂದು ದೊಡ್ಡ ವಿಷಯ… ಹಾಗಾಗಿ ನಾನು ಸಹ ನನ್ನ ಜೀವನದಲ್ಲಿ ಅವರನ್ನು ಸೆಲೆಬ್ರಿಟಿಗಳೆಂದೇ ಕರೆಯುತ್ತೇನೆ. ಅವರ ಬಗ್ಗೆ ನನಗೂ ಪ್ರೀತಿ ಹಾಗೂ ಗೌರವಿದೆ..ನನ್ನಂತೆ ಎಲ್ಲಾ ನಟರಿಗೂ ಸಹ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ವಿಚಾರವಾಗಿ ಹೆಚ್ಚು ಕಡಿಮೆ ಎಂದು ಲೆಕ್ಕ ಹಾಕಿ, ತಾರತಮ್ಯ ಮಾಡುವುದು ತಪ್ಪು. ಅದಕ್ಕಾಗಿಯೇ ನಿಮ್ಮ ಪ್ರಶ್ನೆಯನ್ನು ಅರ್ಧಕ್ಕೆ ನಿಲ್ಲಿಸಿದೆ” ಎಂದಿದ್ದಾರೆ.

ಸಂದರ್ಶನದಲ್ಲಿ ನಟಿ ಆಶು ರೆಡ್ಡಿ ಪಾದವನ್ನು ನೆಕ್ಕೋದಕ್ಕೆ ಪ್ರಾರಂಭಿಸಿದ ಲಿಜೆಂಡರಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮ ಕಾರಣ ಏನು

ದರ್ಶನ್ ಅವರ ಈ ಮಾತನ್ನು ಕೇಳಿ ಅಭಿಮಾನಿಗಳು ಮತ್ತಷ್ಟು ಸಂತಸ ಹೊರಹಾಕಿದ್ದಾರೆ. ಎಲ್ಲಾ ಅಭಿಮಾನಿಗಳನ್ನು, ಚಿತ್ರರಂಗದ ಉಳಿದ ನಟರನ್ನು ಸಮಾನವಾಗಿ ಕಾಣುವ ದಚ್ಚು ಅವರಿಗೆ ‘ಕ್ರಾಂತಿ ಸಿನಿಮಾವು ಹೆಚ್ಚು ಖುಷಿಯನ್ನು ತಂದು ಕೊಡಲಿ’ ಎಂದು ಅಭಿಮಾನಿಗಳು ಹಾರೈಸಿದ್ದಾರಂತೆ.

Leave A Reply

Your email address will not be published.