ಕಿರುತೆರೆಯಿಂದ ಬ್ಯಾನ್ ಆಗಿ ಮತ್ತೆ ವಾಪಸ್ಸು ಬಂದ ಅನಿರುದ್ಧ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ಕಿರುತೆರೆ ಲೋಕವೇ ಶಾಕ್

0

ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರವಾಹಿಯಲ್ಲಿ 40 ವರ್ಷದ ನಾಯಕ, ಆರ್ಯವರ್ಧನ್ ನ ಪಾತ್ರದಲ್ಲಿ ಕಾಣಿಸಿಕೊಂಡು, ತನ್ನದೇ ಆದ ಅದ್ಭುತ ನಟನೆ ಹಾಗೂ ವಾಕ್ಶೈಲಿಯ ಮೂಲಕ ಕರ್ನಾಟಕದ ಸಮಸ್ತ ಜನತೆಯ ಮನಸ್ಸನ್ನು ಗೆದ್ದು, ಕಾಲೇಜು ಹುಡುಗಿಯರಿಂದ ಹಿಡಿದು 80ರ ವಯಸ್ಸಿನ ಅಜ್ಜಿಯರೂ ಮೆಚ್ಚಿ, ಅನಿರುದ್ಧ್(Aniruddh) ಅವರನ್ನು ನೋಡಲೆಂದೇ ದಾರವಾಹಿಯನ್ನು ವೀಕ್ಷಿಸುವ ಅಭಿಮಾನಿಗಳನ್ನು ಕೂಡಾ ಗಳಿಸಿಕೊಂಡಿದ್ದರು.

ಆದರೆ ಎಲ್ಲವೂ ಸರಿಯಾಗಿ ಹೋಗುತ್ತಿರುವಾಗ ಕೆಲ ತಿಂಗಳ ಹಿಂದೆ ಜೊತೆ ಜೊತೆಯಲಿ ಧಾರವಾಹಿಯ ತಂಡದೊಂದಿಗೆ ಅನಿರುದ್ಧ ಅವರು ಮನಸ್ತಾಪ ಮಾಡಿಕೊಂಡು, ಶೂಟಿಂಗ್ ಸೆಟ್ನಿಂದ ಹೊರ ನಡೆದಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಜೊತೆ ಜೊತೆಯಲಿ ದಾರವಾಹಿಯಲ್ಲಿ ಅನಿರುದ್ಧ ಅವರ ಪಾತ್ರದಲ್ಲಿ ಬೇರೆ ಇನ್ನಾವ ನಟರನ್ನು ಕೂಡ ಊಹಿಸಿಕೊಳ್ಳಲಾಗದ ಅಭಿಮಾನಿಗಳು ಕಂಗಾಲಾಗಿದ್ದರು. ಅಷ್ಟೇ ಅಲ್ಲದೆ ಅನಿರುದ್ಧ ಅವರು ಕನ್ನಡ ಕಿರುತೆರೆಯ ಲೋಕದಿಂದಲೇ ಬ್ಯಾನ್ ಆಗುತ್ತಾರೆ ಎಂಬ ಮಾತುಗಳು ಸಹ ಕೇಳಿಬಂದಿತ್ತು.

‘ಬ್ಯಾನ್ ಆಗ್ತಿದ್ದಾರೆ’ ಎಂಬ ಸುದ್ದಿಯನ್ನು ಬದಿಗೊತ್ತುವಂತೆ ನಟ, ಅನಿರುದ್ಧ್ ಅವರು ಹೊಸದೊಂದು ಧಾರವಾಹಿಯ ಮೂಲಕ reentry ಕೊಟ್ಟಿದ್ದಾರೆ. ರಾತ್ರೋರಾತ್ರಿ ತಮ್ಮ ಅಭಿಮಾನಿ ಬಳಗಕ್ಕೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡು, ಅವರ ಶುಭ ಹಾರೈಕೆಗಳನ್ನು ಪಡೆದು ಸಂತಸಪಟ್ಟಿದ್ದಾರೆ.

Anirudh new serial
Anirudh new serial

ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರವಾಹಿ ಕನ್ನಡ ಕಿರುತೆರೆಯ ಟಾಪ್ ಧಾರವಾಹಿಗಳ ಪಟ್ಟಿಯಲ್ಲಿ ಮಿಂಚಿದ್ದು, ರೇಟಿಂಗ್ಸ್ ಕೂಡ ಉತ್ತಮವಾಗಿಯೇ ದೊರಕಿದ್ದು, ಇದಕ್ಕೆ ಆರ್ಯವರ್ಧನ್ ಹಾಗೂ ಅನು ಜೋಡಿಯ chemistry ಯೇ ಮೋಡಿ ಮಾಡಿದೆ ಎನ್ನಬಹುದು. ಇನ್ನು ಅನಿರುದ್ಧವರು ಕಂಬ್ಯಾಕ್ ಮಾಡಿದ ಧಾರವಾಹಿ, ಜೊತೆ ಜೊತೆಯಲಿ ದಾರವಾಹಿಗೆ ಸೆಡ್ಡು ಹೊಡೆದು ನಿಲ್ಲುವ ಎಲ್ಲ ಸೂಚನೆಗಳು ಕಾಣಿಸುತ್ತಿವೆ..

ಸ್ನೇಹಿತರೇ…. ಅನಿರುದ್ಧ್ ಅವರು ಉದಯ ವಾಹಿನಿಯಲ್ಲಿ ಮೂಡಿ ಬರುವ ‘ಸೂರ್ಯವಂಶ’ ಧಾರವಾಹಿಯ ಮೂಲಕ come back ಮಾಡಿದ್ದಾರೆ. ಧಾರವಾಹಿಯ ಹೆಸರಲ್ಲೇ ಶಕ್ತಿ ಇದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ blockbuster ಮೂವಿಯಲ್ಲಿ ಇದು ಕೂಡ ಒಂದು. ಇನ್ನು ಈ ಧಾರಾವಾಹಿಯಲ್ಲಿ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಸೂರ್ಯವಂಶ ಚಿತ್ರದ ನಿರ್ದೇಶಕರೇ ಆದ ಎಸ್ ನಾರಾಯಣ್ ಅವರೇ ನಿರ್ದೇಶಕರಾಗಿದ್ದು, ಎಸ್ ನಾರಾಯಣ್ ಅವರು ಕೂಡ ಕಿರುತೆರೆಯ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Anirudh new serial

ನಟ ದರ್ಶನ್ ವಿಷ್ಣು ದಾದಾ ಅವರನ್ನ ಕಂಡ್ರೆ ಹೆದರುತ್ತಿದ್ದರಂತೆ ಯಾವ ವಿಷಯಕ್ಕೆ ಗೊತ್ತಾ?

ಅನಿರುದ್ಧ್ (Aniruddh) ಹಾಗೂ ಎಸ್ ನಾರಾಯಣ್( S. Narayan) ಜೋಡಿಯು ಧಾರವಾಹಿಯಲ್ಲಿ ಮೋಡಿ ಮಾಡಲಿದ್ದು ಇನ್ನೂ ಉದಯ ವಾಹಿನಿಯು ಈ ಧಾರಾವಾಹಿಯ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತದೆ ಎಂದರೆ ತಪ್ಪಾಗಲಾರದು. ಇನ್ನು ಅನಿರುದ್ಧ ಅವರ ಸಂಭಾವನೆ ವಿಷಯಕ್ಕೆ ಬಂದರೆ.. ಈ ಹೊಸ ಧಾರಾವಾಹಿಗೆ ಅನಿರುದ್ಧ ಅವರು ಭರ್ಜರಿ ಮೊತ್ತದ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಪ್ರತಿ episdoe ಗೆ anirudh ಅವರು ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕಿರುತೆರೆ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಒಬ್ಬ ನಟ ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರೆ. ಒಟ್ಟಾರೆ ಅನಿರುದ್ಧ ಅವರ come back ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ಧಾರವಾಹಿಯನ್ನು ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದು, ಇನ್ನು ಕೆಲವೇ ವಾರಗಳಲ್ಲಿ ಉದಯವಾಹಿನಿಯಲ್ಲಿ ‘ಸೂರ್ಯವಂಶ’ ಧಾರವಾಹಿಯು ರಾತ್ರಿ 8:30ಕ್ಕೆ ಪ್ರಸಾರವಾಗಲಿದೆ.

Leave A Reply

Your email address will not be published.