ಕೆಜಿಎಫ್ ತಾತ ಕೃಷ್ಣಾ ಜಿ ರಾವ್ ನಿಧನ. ಅವರ ಕುಟುಂಬಕ್ಕೆ ಯಶ್ ಮಾಡಿದ ಧನ ಸಹಾಯ ಎಷ್ಟು ಗೊತ್ತಾ?

0

Yash helps krishna rao family. ಸ್ನೇಹಿತರೇ ನಿಮಗೆ ತಿಳಿದಿರಬಹುದು ಇತ್ತೀಚಿಗಷ್ಟೇ ಕೆಜಿಎಫ್ ಸರಣಿ ಚಿತ್ರಗಳಲ್ಲಿ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೃಷ್ಣಾಜಿ ರಾವ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಉಳಿಸಿಕೊಳ್ಳುವಂತಹ ಎಲ್ಲಾ ಪ್ರಯತ್ನವನ್ನು ಕೂಡ ವೈದ್ಯರು ಮಾಡಿದ್ದರು ಆದರೆ ಕೊನೆಗೂ ಕೂಡ ಅದು ಫಲಿಸಲೇ ಇಲ್ಲ. ಹೌದು ಹಿರಿಯ ನಟ ಕೃಷ್ಣಾಜಿ ರಾವ್ (KGF Krishna g rao) ಅವರು ನಮ್ಮನ್ನು ಅಗಲಿ ಹೋಗಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಕೂಡ ಕನ್ನಡ ಚಿತ್ರರಂಗದಲ್ಲಿ ಒಂದು ಪಾತ್ರದ ಮೂಲಕ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದ್ದರು ಎಂದರೆ ತಪ್ಪಾಗಲಾರದು.

ಇನ್ನು ರಾಕಿಂಗ್ ಸ್ಟಾರ್ ಯಶ್ (khf yash) ಅವರಿಗೆ ಈ ವಿಚಾರ ತಿಳಿದು ಬಂದಿದ್ದು ಕೂಡಲೇ ಕೃಷ್ಣಾಜಿ ರಾವ್ ಅವರ ಕುಟುಂಬಕ್ಕೆ ಸಹಾಯ ಹಸ್ತವನ್ನು ಚಾಚಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕನ್ನಡ ಚಿತ್ರರಂಗ ಒಂದು ಕುಟುಂಬ. ಕುಟುಂಬದ ಸದಸ್ಯರಿಗೆ ಏನಾದರೂ ಆದಾಗ ಆ ಕುಟುಂಬಕ್ಕೆ ನೆರವಾಗುವುದು ನಮ್ಮ ಧರ್ಮ ಎಂಬುದನ್ನು ಪ್ರತಿಯೊಬ್ಬ ಕನ್ನಡ ಚಿತ್ರರಂಗದ ಸ್ಟಾರ್ ನಟರು ಮತ್ತೆ ಮತ್ತೆ ನಿರೂಪಿಸುತ್ತಿದ್ದಾರೆ. ಇಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಕೃಷ್ಣಾಜಿ ರಾವ್ ಅವರ ಮರಣದ ಸಂದರ್ಭದಲ್ಲಿ ಇದೇ ರೀತಿ ಕೃಷ್ಣಾಜಿ ರಾವ್ ಅವರ ಕುಟುಂಬಕ್ಕೆ ನೆರವಾಗುವ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ ಎನ್ನಬಹುದಾಗಿದೆ.

Yash helps krishna rao family
Yash helps krishna rao family

ಇದನ್ನೂ ಓದಿ :ಲೀಲಾವತಿ ವಿನೋದ್ ಅವರು ನಿಮ್ಮ ಮಗನೇ? ಎಂದು ಕೇಳಿದಾಗ ಡಾಕ್ಟರ್ ರಾಜಕುಮಾರ್ ಅವರು ನೀಡಿದ ಉತ್ತರವೇನಾಗಿತ್ತು ಗೊತ್ತಾ?

ಹೌದು ಮಿತ್ರರೇ, ಮೂಲಗಳ ಪ್ರಕಾರ ತಿಳಿದು ಬಂದಿರುವುದು ಏನೆಂದರೆ ರಾಕಿಂಗ್ ಸ್ಟಾರ್ ಯಶ್ ಅವರು ಕೃಷ್ಣಾಜಿ ರಾವ್ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಹಣವನ್ನು ನೀಡಿ ಮುಂದೆ ನಿಮಗೆ ಏನೇ ಸಮಸ್ಯೆ ಬಂದರೂ ಕೂಡ ನಾನಿದ್ದೇನೆ ನಿಮ್ಮ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದೇನೆ ಎಂಬುದಾಗಿ ಅಭಯ ಹಸ್ತವನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಈ ಕೆಲಸ ಎನ್ನುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗದಲ್ಲಿ ವ್ಯಾಪಕವಾಗಿ ಮೆಚ್ಚುಗೆ ಒಳಗಾಗಿದೆ.

ಇನ್ನು ಕೇವಲ ರಾಕಿಂಗ್ ಸ್ಟಾರ್ ಯಶ್ ಅವರು ಮಾತ್ರವಲ್ಲದೆ ಕೆಜಿಎಫ್ ಚಿತ್ರದ ನಿರ್ಮಾಣ ಸಂಸ್ಥೆ ಆಗಿರುವ ಹೊಂಬಾಳೆ ಫಿಲಂಸ್ ಕೂಡ ಧನಸಹಾಯವನ್ನು ನೀಡಿ ಮುಂದಿನ ದಿನಗಳಲ್ಲಿ ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಜೊತೆಯಾಗಿ ನಾವಿದ್ದೇವೆ ಎನ್ನುವ ಭರವಸೆಯನ್ನು ಕೂಡ ನೀಡಿದ್ದಾರಂತೆ. ಕೃಷ್ಣಾಜಿ ರಾವ್ ಅವರು ಕೆಜಿಎಫ್ ಚಿತ್ರದಲ್ಲಿ ನಿರ್ವಹಿಸಿದ್ದು ಕೇವಲ ಚಿಕ್ಕ ಪಾತ್ರವಷ್ಟೇ ಆದರೆ ಆ ಪಾತ್ರದ ಮೂಲಕ ಅವರು ಚಿತ್ರರಂಗದಲ್ಲಿ ಸಂಪಾದಿಸಿದ್ದು ಮಾತ್ರ ಬಹಳಷ್ಟು ದೊಡ್ಡದು ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಕೃಷ್ಣಾಜಿ ರಾವ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂಬುದಾಗಿ ಹಾರೈಸೋಣ.

Leave A Reply

Your email address will not be published.