ಡಾಕ್ಟರ್ ರಾಜಕುಮಾರ್ ವಿಷ್ಣು ದಾದಾ ರಿಜೆಕ್ಟ್ ಮಾಡಿದ ಸಿನಿಮಾವನ್ನು ರವಿಚಂದ್ರನ್ ಕೈಗೆತ್ತಿಕೊಂಡು ಬ್ಲಾಕ್ ಬಾಸ್ಟರ್ ಮಾಡಿದ ಆ ಸಿನಿಮಾ ಯಾವುದು ಗೊತ್ತಾ?

0

Vishnuvardhan and rajkumar rejected film : ಸಿನಿಮಾವನ್ನು ಎಲ್ಲರೂ ನೋಡುವ ದೃಷ್ಟಿ ಒಂದೇ ರೀತಿ ಇರೋದಿಲ್ಲ. ಕೆಲವು ನಟರಿಗೆ ಕೆಲವು ಸಿನಿಮಾಗಳ ಕಥೆ ಇಷ್ಟವಾಗುತ್ತೆ. ನಟಿಸುವುದಕ್ಕೆ ಒಪ್ಪುತ್ತಾರೆ. ಇನ್ನೂ ಕೆಲವರು ಅದೇ ಕಥೆಯನ್ನ ರಿಜೆಕ್ಟ್ ಮಾಡುತ್ತಾರೆ. ಹೀಗೆ ಕೆಲವೊಮ್ಮೆ ಒಬ್ಬ ನಟ ರಿಜೆಕ್ಟ್ ಮಾಡಿದ ಸಿನಿಮಾವನ್ನು ಇನ್ನೊಬ್ಬ ನಟ ಅಭಿನಯಿಸಿ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿರುವ ಕಥೆ ನಮ್ಮಲ್ಲಿದೆ. ಅಂತಹ ಒಂದು ಸಿನಿಮಾದ ಹಿಂದಿನ ಕಥೆಯನ್ನು ನಾವು ನಿಮಗೆ ಇಲ್ಲಿ ತಿಳಿಸಿ ಕೊಡ್ತೀವಿ ಮುಂದೆ ಓದಿ.

ಕ್ರೇಜಿಸ್ಟಾರ್ ರವಿಚಂದ್ರನ್ ಎಂತಹ ಅದ್ಭುತ ಕಲಾಕಾರ ಎಂಬುದು ಎಲ್ಲರಿಗೂ ಗೊತ್ತು. ಒಬ್ಬ ನಟನಾಗಿ ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಾಕಷ್ಟು ಸಿನಿಮಾಗಳನ್ನ ಮಾಡಿ ಗೆದ್ದಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಿನಿಮಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿ ಹಿಸ್ಟರಿ ಕ್ರಿಯೇಟ್ ಮಾಡಿದ ವ್ಯಕ್ತಿ ರವಿಚಂದ್ರನ್ ಅಂದರೆ ಅತಿಶೋಕ್ತಿ ಅಲ್ಲ. ರವಿಚಂದ್ರನ್ ಅವರು ಸಿನಿಮಾ ವನ್ನು ನೋಡುವ ರೀತಿಯೇ ಬೇರೆ. 80 -90ರ ದಶಕದಲ್ಲಿ ರವಿಚಂದ್ರನ್ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ ಇದಕ್ಕೆ ಕಾರಣ ಅವರಲ್ಲಿರುವ ಅದ್ಭುತ ಪ್ರತಿಭೆ. ಸಿನಿಮಾ ರಂಗದ ದಿಗ್ಗಜ ನಟರು ರಿಜೆಕ್ಟ್ ಮಾಡಿದ ಸ್ಟೋರಿ ಒಂದನ್ನು ಕೈ ಎತ್ತಿಕೊಂಡು ಆ ಸಿನಿಮಾವನ್ನು ಕನ್ನಡಿಗರು ಮೆಚ್ಚುವಂತೆ ನಿರ್ಮಿಸಿರುವ ಖ್ಯಾತಿ ರವಿ ಸರ್ ಅವರದು.

Vishnuvardhan and rajkumar rejected film

ಹೌದು, ಡಾ. ರಾಜಕುಮಾರ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಈ ಸಿನಿಮಾ ಕಥೆ ಕೇಳಿ ರಿಜೆಕ್ಟ್ ಮಾಡಿದರಂತೆ. ಕೊನೆಗೆ ಅದೇ ಸಿನಿಮಾ ಕಥೆ ರವಿಚಂದ್ರನ್ ಅವರ ಕಿವಿಗೂ ಬೀಳುತ್ತದೆ ಕೂಡಲೇ ತನಗೆ ಈ ಸಿನಿಮಾ ಕಥೆ ಇಷ್ಟ ಆಗಿದೆ ಎಂದು ಹೇಳಿದ ರವಿಚಂದ್ರನ್ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗುತ್ತಾರೆ. ಈ ಸಿನಿಮಾ ಕೈಗೆತ್ತಿಕೊಳ್ಳುತ್ತೇನೆ ಎಂದಾಗ ರವಿಚಂದ್ರನ್ ಅವರ ತಂದೆ ವೀರ ಸ್ವಾಮಿ ಕೂಡ ಬೇಡ ಎಂದಿದ್ದರಂತೆ. ಆದರೆ ನನಗೆ ಒಂದು ಚಾನ್ಸ್ ಕೊಡಿ ನಾನು ಈ ಸಿನಿಮಾ ಗೆದ್ದು ತೋರಿಸುತ್ತೇನೆ ಅಂತ ಹಠ ಹಿಡಿದು ರವಿಚಂದ್ರನ್ ಈ ಸಿನಿಮಾದ ನಿರ್ಮಾಣಕ್ಕೆ ಮುಂದಾಗುತ್ತಾರೆ. ಕೊನೆಗೆ ಆ ಸಿನಿಮಾ ಕನ್ನಡಿಗರ ಮನಸ್ಸನ್ನು ಗೆದ್ದು ಸೂಪರ್ ಡೂಪರ್ ಹಿಟ್ ಆಗುತ್ತೆ. ರವಿ ಸರ್ ಎಷ್ಟು ಬಂಡವಾಳ ಹೂಡಿದ್ರು ಅದರ ಎರಡು ಪಟ್ಟು ಲಾಭ ಗಳಿಸುತ್ತಾರೆ.

ಲೀಲಾವತಿ ವಿನೋದ್ ಅವರು ನಿಮ್ಮ ಮಗನೇ? ಎಂದು ಕೇಳಿದಾಗ ಡಾಕ್ಟರ್ ರಾಜಕುಮಾರ್ ಅವರು ನೀಡಿದ ಉತ್ತರವೇನಾಗಿತ್ತು ಗೊತ್ತಾ?

ಅದು ಬೇರೆ ಯಾವ ಸಿನಿಮಾವು ಅಲ್ಲ 1983ರಲ್ಲಿ ತನ್ನ ಹಾಡುಗಳಿಂದ ಜನರನ್ನ ಮೂಡಿ ಮಾಡಿದ ಚಕ್ರವ್ಯೂಹ ಎನ್ನುವ ಸಿನಿಮಾ. ರೆಬಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಅಂಬಿಕಾ ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಚಕ್ರವ್ಯೂಹ ಸಿನಿಮಾದಲ್ಲಿ ಸಾಕಷ್ಟು ಮೇರು ನಟರು ಅಭಿನಯಿಸಿದ್ದಾರೆ. ಸ್ಟಾರ್ ನಟರೆ ಬೇಡ ಎಂದು ರಿಜೆಕ್ಟ್ ಮಾಡಿದಂತಹ ಕಥೆ ಇದಾಗಿತ್ತು. ಇದನ್ನ ಕೈಗೆತ್ತಿಕೊಂಡ ರವಿಚಂದ್ರನ್ ಚಾಲೆಂಜ್ ಆಗಿ ತೆಗೆದುಕೊಂಡು ಈ ಸಿನಿಮಾವನ್ನು ಸೂಪರ್ ಸಕ್ಸಸ್ ಮಾಡುತ್ತಾರೆ. ಇಂದಿಗೂ ಜನ ರವಿಚಂದ್ರನ್ ಅವರ ಹೊಸ ರೀತಿಯ ಪ್ರಯೋಗಕ್ಕೆ ಪ್ರಯತ್ನಗಳಿಗೆ ತಲೆಬಾಗುತ್ತಾರೆ.

Leave A Reply

Your email address will not be published.