ಲೀಲಾವತಿ ವಿನೋದ್ ಅವರು ನಿಮ್ಮ ಮಗನೇ? ಎಂದು ಕೇಳಿದಾಗ ಡಾಕ್ಟರ್ ರಾಜಕುಮಾರ್ ಅವರು ನೀಡಿದ ಉತ್ತರವೇನಾಗಿತ್ತು ಗೊತ್ತಾ?

0

Rajkumar talked about leelavati : ಕನ್ನಡ ಚಿತ್ರರಂಗ ಕಂಡ ಮೇರು ನಟ, ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ಅವರು ಗಳಿಸಿದ ಅಭಿಮಾನಿಗಳಿಗೆ, ಅನುಯಾಯಿಗಳಿಗೆ ಲೆಕ್ಕವೇ ಇಲ್ಲ. ಅವರ ಮೇಲಿನ ಚಿಕ್ಕ ಅಪವಾದದ ಮಾತನ್ನು ಕೂಡ ಯಾರು ನಂಬಲು ಸಾಧ್ಯವಿಲ್ಲ. ಏಕೆಂದರೆ ಆದರ್ಶ ಪೂರ್ಣವಾದ ಉತ್ತಮ ಗುಣನಡತೆಯೊಂದಿಗೆ ಎಲ್ಲರಿಗೂ ಮಾದರಿಯಾಗುವಂತೆ ಸರಳ ಜೀವನವನ್ನು ನಡೆಸಿದವರು ರಾಜಕುಮಾರ್ ಅವರು.

ಲೀಲಾವತಿ ವಿನೋದ್ ಅವರು, ರಾಜಕುಮಾರ್ ಮಗನೆನ್ನುವ ವಿವಾದವೆದ್ದು ದಶಕಗಳೇ ಕಳೆದರೂ ಸ್ಪಷ್ಟವಾದ ಉತ್ತರ ದೊರಕಿರಲಿಲ್ಲ. ವಿನೋದ್(Vinod Rajkumaar) ಇವರು ರಾಜಕುಮಾರ್ ಅವರ ಮಗ ಹೌದೊ? ಅಲ್ಲವೋ? ಎಂಬುದು ಇಡೀ ಕರ್ನಾಟಕಕ್ಕೆ ಇರುವ ಒಂದು ಪ್ರಶ್ನೆ. ಇನ್ನು ಲೀಲಾವತಿಯವರು ಈ ಕುರಿತಾಗಿ ಯಾವುದೇ ಸ್ಪಷ್ಟ ಉತ್ತರ ನೀಡದೆ ವಿವಾದವನ್ನೇ ನಿಜ ಮಾಡಲು ಹೊರಟಂತಿದೆ ಎಂಬುದು ಹಲವರ ಅಭಿಪ್ರಾಯ. ಅಭಿಮಾನಿಗಳು ಇದನ್ನು ಕಟ್ಟುಕಥೆಯೆಂದೆ ಪರಿಗಣಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಪಟ್ಟ ಹಾಗೆ ರವಿ ಬೆಳಗೆರೆ ಅವರು ‘ರಾಜ್ ಲೀಲಾ ವಿನೋದ’ ಎಂಬ ಪುಸ್ತಕವನ್ನು ಕೂಡ ಬರೆದಿದ್ದರು. ಅಲ್ಲದೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿಯೂ ಕೂಡ ಹಲವಾರು ಬರಹಗಳನ್ನು ಪ್ರಕಟಿಸಿದ್ದರು. ಈ ವಿಚಾರವಾಗಿ ರಾಜಕುಮಾರ್ ಅವರ ಕುಟುಂಬಸ್ಥರಾಗಲಿ, ಆಪ್ತರಾಗಲಿ ಯಾವುದೇ ಮಾತನಾಡಿರಲಿಲ್ಲ.

ಆದರೆ ಪ್ರಕಾಶ್ ರಾಜ್ ಮೆಹು ಎನ್ನುವ ಬರಹಗಾರರೊಬ್ಬರು ಡಾಕ್ಟರ್ ರಾಜಕುಮಾರ್ ಅವರಿಗೆ ಗೆಳೆಯರಂತಿದ್ದು, ಅವರನ್ನು ಅರಿತು, ‘ಅಂತರಂಗದಲ್ಲಿ ಅಣ್ಣ’ ಎಂಬ ಪುಸ್ತಕವನ್ನು ಕೂಡ ಬರೆದಿದ್ದಾರೆ. ಈ ಪುಸ್ತಕದಲ್ಲಿ ಹಾಡು, ನೃತ್ಯ, ಆಕ್ಷನ್, ಡೈಲಾಗ್ಸ್ ಎಲ್ಲದರಲ್ಲೂ perfect ಆಗಿರುವ ಒಬ್ಬ ಅದ್ಭುತ ಸಿನಿಮಾ ನಟರಾಗಿ ಕಂಡ ಡಾಕ್ಟರ್ ರಾಜಕುಮಾರ್ ಅವರು, ಅಂತರಂಗದಲ್ಲಿ ಅಂದರೆ ನಿಜ ಜೀವನದಲ್ಲಿ ಬೇರೆಯವರಿಗೆ ಕೆಟ್ಟದ್ದನ್ನು ಮಾಡದೆ, ಒಳ್ಳೆಯದಷ್ಟೇ ಬಯಸುತ್ತಾ, ಉತ್ತಮ ನಡೆ ನುಡಿಗಳಿಂದ ಕೂಡಿದ ಆದರ್ಶಮಯ ನಾಯಕರೇ ಆಗಿದ್ದರು ಎಂಬುದನ್ನು ತಿಳಿಸಲಾಗಿದೆ.

ಪ್ರಕಾಶ್ ರಾಜ್ ಮೆಹು ಅವರು ಅಣ್ಣಾವ್ರೊಂದಿಗೆ ಅತಿಯಾದ ಸಲಿಗೆಯನ್ನು ಹೊಂದಿದ್ದರಿಂದ, ಒಮ್ಮೆ ರಾಜಕುಮಾರ್ ಅವರಲ್ಲಿ ಲೀಲಾವತಿ ವಿನೋದ್(Leelavati Vinod) ಅವರು ನಿಮ್ಮ ಮಗ ಹೌದೋ? ಅಲ್ಲವೋ? ಎಂಬ ಪ್ರಶ್ನೆಯನ್ನು ಕೇಳಿದರಂತೆ. ಅದಕ್ಕೆ ಪ್ರತಿಯಾಗಿ ರಾಜಕುಮಾರ್ ಅವರು ನೀಡಿದ ಉತ್ತರ ಎಲ್ಲರನ್ನೂ ಅಚ್ಚರಿಗೊಳಿಸಿದೆ.

Rajkumar talked about leelavati
Rajkumar talked about leelavati

ಇದನ್ನೂ ಓದಿ : ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜೋತೆ ನಿಂತಿರುವ ಈ ವ್ಯಕ್ತಿ ಯಾರು ಗೊತ್ತಾ? ಹೊಸದಾಗಿ ಕೇಳಿ ಬರ್ತಿದೆ ವಿಚಿತ್ರ ಸುದ್ದಿ

ಹೌದು ಅಂದು ಪ್ರಕಾಶ ಅವರು ಕೇಳಿದ ಪ್ರಶ್ನೆಗೆ ಡಾಕ್ಟರ್ ರಾಜಕುಮಾರ್ ಅವರು ‘ಮನುಷ್ಯರೆಂದ ಮೇಲೆ ಕೆಲವು ತಪ್ಪುಗಳಾಗುವುದು ಸಹಜ; ಆದರೆ ಲೀಲಾವತಿಯವರಿಗೆ ವಿನೋದ್ ಜನಿಸುವ ಮೂರ್ನಾಲ್ಕು ವರ್ಷಗಳ ಹಿಂದೆಯೇ ನಮ್ಮ ಸಂಬಂಧ ಮುಗಿದು ಹೋಗಿತ್ತು. ಇನ್ನು ನನ್ನ ಹೆಸರು ಹೇಳಿಕೊಂಡು ಹೋಗುವುದರಿಂದ ಆಕೆಗೂ ಮತ್ತು ಆ ಮಗುವಿಗೂ ಒಳ್ಳೆಯದಾಗುವುದಾದರೆ ಆಗಲಿ ಬಿಡಿ’ ಎಂದಿದ್ದರಂತೆ.

ಆ ಕಾಲದ ಕೆಲವು ಕಲಾವಿದರು ಹೇಳುವ ಹಾಗೆ ವಿನೋದ್ ಅವರು ಮಹಾಲಿಂಗ ಭಾಗವತ್ ಅವರ ಮಗ. ಭಕ್ತ ಕುಂಬಾರ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಮಹಾಲಿಂಗ ಭಾಗವತ್ ಅವರೇ ಪುಟಾಣಿ ಮಗುವನ್ನು ಕೈಲೆತ್ತುಕೊಂಡು ಬಂದು ತನ್ನ ಮಗುವೆಂದು ಪರಿಚಯಿಸಿರುವ ಕುರಿತಾಗಿ ಹೇಳಿದ್ದಾರೆ. ‘ಡಾನ್ಸ್ ರಾಜಾ ಡಾನ್ಸ್ ಸಿನಿಮಾದ ಬಿಡುಗಡೆಯ ಪ್ರಚಾರದ ವೇಳೆಯಲ್ಲಿ ವಿನೋದ್ ಅವರು ರಾಜಕುಮಾರ್ ಅವರ ಮಗನೆಂದು ಸುದ್ದಿಯನ್ನು ಹಬ್ಬಿಸಿದ್ದಾರೆ’ ಎಂಬುದು ಅನೇಕರ ಅಭಿಪ್ರಾಯ. ಅಭಿಮಾನಿಗಳು ಕೂಡ ಇದನ್ನು ಸುಳ್ಳು ಕಥೆ ಎಂದೇ ಭಾವಿಸಿದ್ದಾರೆ.

Rajkumar talked about leelavati

Rajkumar talked about leelavati
Leave A Reply

Your email address will not be published.