ಹಲವಾರು ವರ್ಷಗಳ ನಂತರ ವೈರಲ್ ಆಯ್ತು ಅಣ್ಣಾವ್ರ ಮದುವೆ ಪತ್ರಿಕೆ. ಮದುವೆ ಕಾರ್ಡ್ ನಲ್ಲಿ ಏನಿತ್ತು ಗೊತ್ತಾ?

0

Rajkumar marraige card : ಕನ್ನಡ ಚಿತ್ರರಂಗ ಕಂಡಂತಹ ಸರ್ವಶ್ರೇಷ್ಠ ನಾಯಕ ನಟರಲ್ಲಿ ಹಾಗೂ ಸರಳ ವ್ಯಕ್ತಿತ್ವಗಳಲ್ಲಿ ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರು ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗ ಎಂದರೆ ರಾಜಕುಮಾರ್ ರಾಜಕುಮಾರ್ ಎಂದರೆ ಕನ್ನಡ ಚಿತ್ರರಂಗ ಎನ್ನುವಷ್ಟರ ಮಟ್ಟಿಗೆ ಅಣ್ಣಾವ್ರು ಸಾಧನೆಯ ಶಿಖರವನ್ನು ಕನ್ನಡ ಚಿತ್ರರಂಗದಲ್ಲಿ ಮಾಡಿದ್ದಾರೆ.

ಅಣ್ಣಾವ್ರು ಕನ್ನಡ ಚಿತ್ರರಂಗದ ಕಲಾ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಂತಹ ಮೂರು ಕಲರತ್ನಗಳಾಗಿರುವ ಕರುನಾಡ ಚಕ್ರವರ್ತಿ ಶಿವಣ್ಣ ರಾಘಣ್ಣ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೀಡಿದ್ದಾರೆ ಎಂಬುದು ಪ್ರತಿಯೊಬ್ಬ ಕನ್ನಡಿಗನು ಕೂಡ ಹೆಮ್ಮೆ ಪಡುವಂತಹ ವಿಚಾರ. ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಅಣ್ಣಾವ್ರು ತಮ್ಮ ಪ್ರಭಾವವನ್ನು ಹೊಂದಿದ್ದಾರೆ.

Rajkumar marraige card
Rajkumar and parvatamma rajkumar marraige

ಲೀಲಾವತಿ ವಿನೋದ್ ಅವರು ನಿಮ್ಮ ಮಗನೇ? ಎಂದು ಕೇಳಿದಾಗ ಡಾಕ್ಟರ್ ರಾಜಕುಮಾರ್ ಅವರು ನೀಡಿದ ಉತ್ತರವೇನಾಗಿತ್ತು ಗೊತ್ತಾ?

ನಾಯಕ ನಟನಾಗಿ ಮಾತ್ರವಲ್ಲದೆ ಒಬ್ಬ ನಾಯಕನಟ ಸಂಗೀತ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವ ಸಾಧನೆಯನ್ನು ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಕೇವಲ ಅಣ್ಣಾವ್ರು ಮಾತ್ರ ಮಾಡಿರುವುದು. ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾವ್ರು ಹಾಗೂ ಪಾರ್ವತಮ್ಮ ರಾಜಕುಮಾರ್ ಅವರಿಗೆ ಸಂಬಂಧಿಸಿದಂತಹ ಒಂದು ವಿಚಾರ ಸಖತ್ ವೈರಲ್ ಆಗುತ್ತಿದೆ.

ಹೌದು ಗೆಳೆಯರೇ ಅಣ್ಣಾವ್ರು ಹಾಗೂ ಪಾರ್ವತಮ್ಮ ಅವರ ಮದುವೆ ಕಾರ್ಡ್ ಫೋಟೋ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸುಮಾರು 69 ವರ್ಷಕ್ಕೂ ಅಧಿಕ ವರ್ಷದಷ್ಟು ಹಳೆಯದಾದ ಈ ಮದುವೆ ಕಾರ್ಡ್ ಇಂದಿಗೂ ಕೂಡ ನವನವೀನವಾದ ನೆನಪನ್ನು ಕಟ್ಟಿಕೊಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Rajkumar marraige card
Rajkumar marraige card
Leave A Reply

Your email address will not be published.