ರಶ್ಮಿಕಾ ಮಂದಣ್ಣಳನ್ನ ಬ್ಯಾನ್ ಮಾಡಬೇಕು ಅಂತ ಹೇಳಿದ್ದಕ್ಕೆ ಡಾಲಿ ಧನಂಜಯ್ ಗರಂ ಆಗಿದ್ದು ಯಾಕೆ ಗೊತ್ತಾ?

0

Dhananjay about rashmika ban : ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ವೈಯಕ್ತಿಕ ಪರಿಶ್ರಮದಿಂದ ತನ್ನದೇ ಆದ ಪ್ರತಿಭೆಯಿಂದ ಮೇಲೆ ಬಂದವರು ಡಾಲಿ ಧನಂಜಯ್. ಒಬ್ಬ ಖಳನಾಯಕನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಧನಂಜಯ್ ಅವರು ನಾಯಕನಾಗಿ ಕನ್ನಡಿಗರ ಮನೆ ಗೆದ್ದರು. ಇದೀಗ ನಿರ್ದೇಶಕರಾಗಿ, ನಿರ್ಮಾಪಕನಾಗಿ ಕೂಡ ಡಾಲಿ ಧನಂಜಯ್ ಕನ್ನಡದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಾಲಿ ಧನಂಜಯ್ ಹೆಚ್ಚು ಫೇಮಸ್ ಆಗುತ್ತಿದ್ದಾರೆ. ಹಾಗಾಗಿ ಅವರ ಬಹುತೇಕ ಎಲ್ಲಾ ಸಿನಿಮಾಗಳು ಕಾಣುತ್ತಿವೆ. ಜೊತೆಗೆ ಸಿನಿಮಾಕ್ಕೆ ಸಂಬಂಧಪಟ್ಟ ಹಾಗೆ ಪ್ರಚಾರಕ್ಕಾಗಿ ಸಂದರ್ಶನಗಳಲ್ಲಿ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಡಾಲಿ ಧನಂಜಯ್.

ಡಾಲಿ ಧನಂಜಯ್ ಅವರು ಇತ್ತೀಚಿಗೆ ಸಿನಿಮಾ ಪ್ರಮೋಷನ್ ಸಂದರ್ಭದಲ್ಲಿ ಮೀಡಿಯಾದವರು ಕೇಳಿದ ಪ್ರಶ್ನೆ ಒಂದಕ್ಕೆ ಸ್ವಲ್ಪ ಗರಂ ಆಗಿ ಉತ್ತರ ನೀಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ರಶ್ಮಿಕಾ ಮಂದಣ್ಣ ಅವರನ್ನು ಕನ್ನಡದಿಂದ ಬ್ಯಾನ್ ಮಾಡುತ್ತಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಸಂದರ್ಶನಕಾರರು ಡಾಲಿ ಧನಂಜಯ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಡಾಲಿ ಧನಂಜಯ್ ಇಂತಹ ಪ್ರಶ್ನೆಗಳನ್ನೆಲ್ಲ ಯಾಕೆ ಸುಮ್ಮನೆ ಕೇಳ್ತೀರಾ? ಇಷ್ಟಕ್ಕೂ ಅವರನ್ನ ಯಾಕೆ ಬ್ಯಾನ್ ಮಾಡಬೇಕು?..

Dhananjay about rashmika ban
Dhananjay about rashmika ban

ಆಕೆ ಒಬ್ಬ ನಟಿ ಅವರು ಅವರಿಗೆ ಬೇಕಾದ ಹಾಗೆ ಬದುಕುತ್ತಿದ್ದಾರೆ ಬ್ಯಾನ್ ಮಾಡುವುದಕ್ಕೆ ಏನು ಕಾರಣ ಅಂತ ಮರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪಕ್ಕದಲ್ಲಿಯೇ ಇದ್ದ ನಟಿ ಭಾವನಾ ಖಡಕ್ ಆಗಿ ಉತ್ತರಿಸಿದ್ದು, ನಾವು ಕಲಾವಿದರು ನಮ್ಮ ವೈಯಕ್ತಿಕ ಜೀವನಕ್ಕೂ ಸಿನಿಮಾಕ್ಕೂ ಸಂಬಂಧ ಇಲ್ಲ. ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಗೂ ಕೂಡ ಬ್ಯಾನ್ ಮಾಡುತ್ತಾರೆ ಇದು ಖಂಡಿತವಾಗಿಯೂ ತಪ್ಪು. ನಿಜವಾಗಿ ಹೇಳಬೇಕು ಅಂದ್ರೆ.. ನಾವು ಹೆಮ್ಮೆ ಪಡಬೇಕು ಕನ್ನಡದ ಒಬ್ಬ ಹುಡುಗಿ ಬೇರೆ ಭಾಷೆಯಲ್ಲಿ ಇಷ್ಟು ಚೆನ್ನಾಗಿ ಹೆಸರು ಮಾಡಿದ್ದಾಳೆ, ದೇಶದಲ್ಲಿ ಫೇಮಸ್ ಆಗಿದ್ದಾಳೆ. ಒಬ್ಬ ಕಲಾವಿದ ನಟ ಆಗಿರಲಿ ಅಥವಾ ನಟಿ ಆಗಿರಲಿ ಬೇರೆ ಭಾಷೆಗೆ ಹೋದರು ಯಾರು ರೆಡ್ ಕಾರ್ಪೆಟ್ ಹಾಕಿ ಕರೆಯುವುದಿಲ್ಲ. ಅಲ್ಲಿ ನಾವು ನಮ್ಮನ್ನ ಪ್ರೂಫ್ ಮಾಡಿಕೊಂಡರೆ ಮಾತ್ರ ನಮ್ಮ ಹತ್ತಿರ ಬರುತ್ತಾರೆ. ಆ ದೃಷ್ಟಿಯಲ್ಲಿ ರಶ್ಮಿಕ ಮಾಡಿರುವ ಸಾಧನೆ ದೊಡ್ಡದು. ಈ ರೀತಿ ಹೇಳಿದ ಭಾವನ ಕಡೆಗೆ ಆಕೆ ನೋಡೋದಕ್ಕೆ ಕ್ಯೂಟ್ ಆಗಿದ್ದಾಳೆ ಬ್ಯಾನ್ ಮಾಡಬೇಡಿ ಅಂತ ನಗುತ್ತಲೇ ಉತ್ತರ ನೀಡಿದ್ದಾರೆ.

ಡಾಕ್ಟರ್ ರಾಜಕುಮಾರ್ ವಿಷ್ಣು ದಾದಾ ರಿಜೆಕ್ಟ್ ಮಾಡಿದ ಸಿನಿಮಾವನ್ನು ರವಿಚಂದ್ರನ್ ಕೈಗೆತ್ತಿಕೊಂಡು ಬ್ಲಾಕ್ ಬಾಸ್ಟರ್ ಮಾಡಿದ ಆ ಸಿನಿಮಾ ಯಾವುದು ಗೊತ್ತಾ?

ಕೊನೆಯಲ್ಲಿ ಇದೇ ಪ್ರಶ್ನೆಗೆ ಮತ್ತೆ ಉತ್ತರಿಸಿದ ಡಾಲಿ ಧನಂಜಯ್, ಇಂತ ಪ್ರಶ್ನೆಯನ್ನು ಕೇಳುವಾಗ ನೀವು ಕೂಡ ಯೋಚನೆ ಮಾಡಬೇಕು. ನಿಮ್ಮ ಮನೆಯ ಮಗಳೇ ಯಾವುದಾದರೂ ಸಮಸ್ಯೆ ಎದುರಿಸಿದರೆ ಆಕೆಗೆ ಏನಾದರೂ ಪ್ರಾಬ್ಲಮ್ ಆದರೆ ಅವಳನ್ನ ಮನೆಯಿಂದ ಹೊರಹಾಕಿ ಬಿಡ್ತೀರಾ? ಇಲ್ಲ ಅಲ್ವಾ.. ಆಕೆಯು ಕನ್ನಡದವಳೇ, ಅವಳನ್ನು ನಾವು ಕಲಾವಿದೆಯಾಗಿ ಗೌರವಿಸಬೇಕು ಹೇಗೆ ಬದುಕಬೇಕು ಎಂಬುದು ಅವರ ಇಷ್ಟ ಹಾಗೆ ಬದುಕಲು ಬಿಡಬೇಕೇ ಹೊರತು ಬ್ಯಾನ್ ಮಾಡುವ ಅಗತ್ಯ ಇಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.

ಡಾಲಿ ಧನಂಜಯ್ ನೇರವಾಗಿ ಮಾತನಾಡುತ್ತಾರೆ. ಬಡವರ ಮಕ್ಕಳು ಬೆಳೆಯಬೇಕು ಅಂತ ಹೇಳುವ ಡಾಲಿ ಧನಂಜಯ್ ಟಗರು ಪಲ್ಯ ಎನ್ನುವ ಸಿನಿಮಾದ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ಸಿನಿಮಾಕ್ಕೆ ನಾಯಕನಾಗಿ ನಾಗಭೂಷಣ್ ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬಿಸಿ ಆಗಿರುವ ವ್ಯಕ್ತಿ ಡಾಲಿ ಧನಂಜಯ್.

Leave A Reply

Your email address will not be published.