ಅಪ್ಪುವಿನ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್‌ಕುಮಾರ್

0

Ashwini about appu next films : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ಕನ್ನಡದ ಸ್ಟಾರ್ ನಟನಾಗಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಒಂದು ಶಕ್ತಿಯಾಗಿ ಕಾಣಿಸಿಕೊಂಡಿದ್ದರು. ಅವರು ಮಾಡಿರುವ ಜನಪರ ಕಾರ್ಯಗಳು ಯಾವ ಮಟ್ಟಿಗೆ ಇದ್ದವು ಎಂಬುದು ಅವರನ್ನು ಕಂಠೀರವ ಸ್ಟುಡಿಯೋದಲ್ಲಿ ಅವರ ಕೊನೆಯ ದರ್ಶನ ಮಾಡಲು ಬಂದಂತಹ 25 ಲಕ್ಷಕ್ಕೂ ಅಧಿಕ ಜನರ ಪ್ರೀತಿಯಲ್ಲಿ ಕಾಣುತ್ತಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಹಗಲಿರಬಹುದು ಆದರೆ ನಮ್ಮ ಒಳ್ಳೆಯ ಕಾರ್ಯಗಳಲ್ಲಿ ಹಾಗೂ ದೈನಂದಿನ ಜೀವನದಲ್ಲಿ ಅವರ ನೆನಪು ಸದಾ ಅಜರಾಮರವಾಗಿರುತ್ತದೆ.

ಅಪ್ಪು ಅವರು ನಾಯಕನಟನಾಗಿ ನಟಿಸಿದ ಕೊನೆಯ ಕಮರ್ಷಿಯಲ್ ಸಿನಿಮಾ ಜೇಮ್ಸ್ ಅವರ ಜನ್ಮದಿನದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಇನ್ನು ಅವರು ಬೆಳ್ಳಿ ಪರದೆ ಮೇಲೆ ಕೊನೆಯದಾಗಿ ಕಾಣಿಸಿಕೊಂಡಿದ್ದು ಗಂಧದಗುಡಿಯನ್ನುವ ಡಾಕ್ಯುಮೆಂಟರಿ ಸಿನಿಮಾದ ಮೂಲಕ. ಗಂಧದಗುಡಿ ಸಿನಿಮಾದ ಮೂಲಕ ನಮ್ಮ ಕರ್ನಾಟಕ ರಾಜ್ಯದ ಪ್ರಾಕೃತಿಕ ಸೌಂದರ್ಯವನ್ನು ಯುವ ಪೀಳಿಗೆಗೆ ದರ್ಶನ ಮಾಡುವಂತಹ ಸುಯೋಗವನ್ನು ಅಪ್ಪು ಅವರು ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾವನ್ನು ಎಲ್ಲರೂ ಕೂಡ ನೋಡಬೇಕು ಎನ್ನುವ ದೃಷ್ಟಿಯಲ್ಲಿ ಈ ಸಿನಿಮಾದ ಮೇಲೆ ಸರ್ಕಾರ ತೆರಿಗೆ ವಿನಾಯಿತಿಯನ್ನು ಮಾಡಿತ್ತು.

Ashwini about appu next films
Ashwini about appu next films

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾ ರಂಗದ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಅತ್ಯುನ್ನತ ಪ್ರಶಸ್ತಿ ಗೌರವ ಆಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರಧಾನ ಮಾಡಿದೆ. ಗಂಧದ ಗುಡಿ ಸಿನಿಮಾ ಅಪ್ಪು ಅವರ ಕೊನೆಯ ಸಿನಿಮಾ ಎಂಬುದಾಗಿದೆ ಎಲ್ಲರೂ ಕೂಡ ಭಾವಿಸಿದ್ದರು. ಆದರೆ ಅಭಿಮಾನಿಗಳಿಗೆ ಆಶ್ಚರ್ಯ ಹಾಗೂ ಸಂತೋಷವನ್ನು ಎರಡು ವಿಚಾರವನ್ನು ನೀಡುವಂತಹ ಒಂದು ಸುದ್ದಿ ಈಗ ಹೊರಬಂದಿದೆ.

ಇದನ್ನೂ ಓದಿ : ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜೋತೆ ನಿಂತಿರುವ ಈ ವ್ಯಕ್ತಿ ಯಾರು ಗೊತ್ತಾ? ಹೊಸದಾಗಿ ಕೇಳಿ ಬರ್ತಿದೆ ವಿಚಿತ್ರ ಸುದ್ದಿ

ಹೌದು ಮಿತ್ರರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಮರುಕ್ರಿಯೆಟ್ ಮಾಡಿ ಒಂದು ಸಿನಿಮಾವನ್ನು ಬಿಡುಗಡೆ ಮಾಡುವಂತಹ ಕಾರ್ಯ ತೆರೆಮರೆಯಲ್ಲಿ ಈಗ ನಡೆಯುತ್ತಿದೆ ಎಂಬುದಾಗಿ ಸುದ್ದಿ ಲೇಟೆಸ್ಟ್ ಆಗಿ ಕೇಳಿ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದನ್ನು ಮುಂದಿನ ದಿನಗಳಲ್ಲಿ ಇದರ ಕುರಿತಂತೆ ಅಧಿಕೃತ ಘೋಷಣೆಗಳು ಕೇಳಿ ಬಂದಾಗ ನಾವು ಕಾದು ನೋಡಬೇಕಾಗುತ್ತದೆ. ಒಂದು ವೇಳೆ ಈ ರೀತಿ ಸಿನಿಮಾ ಮೂಡಿಬರುವುದಾದರೆ ಮಾತ್ರ ಕೇವಲ ಕನ್ನಡ ಪ್ರೇಕ್ಷಕರಿಗೆ ಮಾತ್ರವಲ್ಲದೆ ಪರಭಾಷೆ ಪ್ರೇಕ್ಷಕರಿಗೂ ಕೂಡ ಅಪ್ಪು ಅವರನ್ನು ವಿಭಿನ್ನ ರೀತಿಯಲ್ಲಿ ನೋಡುವಂತಹ ಭಾಗ್ಯ ಕೂಡಿ ಬರುತ್ತದೆ.

Leave A Reply

Your email address will not be published.