ಖೈದಿಗಳಿಗೂ ಸಹಾಯ ಮಾಡಿದ್ದರು ಅಪ್ಪು? ಹಲವು ದಿನಗಳ ಬಳಿಕ ಬದಲಾಯಿತು ಅಚ್ಚರಿ ಮೂಡಿಸಿದ ವಿಷಯ

0

Appu helped prisoners : ಸಿನಿಮಾದಲ್ಲಿ ಒಬ್ಬ ನಾಯಕನಾಗಿ ನಟಿಸುವುದು ಅಷ್ಟು ಕಷ್ಟವೇನು ಅಲ್ಲ. ಸ್ಕ್ರಿಪ್ಟ್ ಗೆ ತಕ್ಕ ಹಾಗೆ, ನಿರ್ದೇಶಕರು ಹೇಳಿದ ಹಾಗೆ ನಟನೆ ಮಾಡುವುದು, ಪ್ರತಿಭೆ ಹೊಂದಿದ್ರೆ ನಾಯಕನಾಗಿ ನಟಿಸಬಹುದು. ಆದರೆ ಸಿನಿಮಾದ ಜೊತೆಗೆ ನಿಜ ಜೀವನದಲ್ಲಿಯೂ ಒಬ್ಬ ನಾಯಕನಾಗಿ ಜನರ ಎದುರು ನಿಲ್ಲುವುದು ಅಷ್ಟು ಸುಲಭವಲ್ಲ. ಅಂತಹ ಏಕೈಕ ನಟ ಅಂದ್ರೆ ಅದು ನಮ್ಮ ನಿಮ್ಮ ಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಅಪ್ಪು ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ. ಅವರ ಸದಾ ಮುಗುಳ್ನಗೆಯ ಮುಖ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮನೋಭಾವ ಇವೆಲ್ಲವೂ ಒಬ್ಬ ನಿಜವಾದ ನಾಯಕನ ಗುಣಲಕ್ಷಣ ಅವೆಲ್ಲವೂ ನಮ್ಮ ಅಪ್ಪುವಿನಲ್ಲಿ ಹಾಸು ಹೊಕ್ಕಾಗಿತ್ತು.

ಹೌದು ನಾವಿಂದು ಅಪ್ಪು ಅನ್ನು ಕಳೆದುಕೊಂಡಿದ್ದೇವೆ ಆದರೆ ಪುನೀತ್ ಅವರ ನೆನಪು ಮಾತ್ರ ಅಜರಾಮರ ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಅಷ್ಟೇ ಅಲ್ಲದೆ ಅವರು ತಮ್ಮ ಅದ್ಭುತ ವ್ಯಕ್ತಿತ್ವದಿಂದಲೂ ಕೂಡ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡು ಬಿಟ್ಟಿದ್ದಾರೆ ಅಪ್ಪು ತಾನು ಯಾರಿಗೆ ಸಹಾಯ ಮಾಡಿದರು ಅದನ್ನ ಎಂದಿಗೂ ಹೇಳಿಕೊಂಡವರಲ್ಲ. ಯಾವ ಸೋಶಿಯಲ್ ಮೀಡಿಯಾದಲ್ಲಿಯೂ ಅಪ್ಲೋಡ್ ಮಾಡಿದವರಲ್ಲ. ಆದರೆ ಅವರಿಂದ ಸಹಾಯ ಪಡೆದವರು ಇದೀಗ ಆ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಅಪ್ಪು ಎಷ್ಟು ಮಂದಿಗೆ, ಸಹಾಯ ಮಾಡಿದರು ಎನ್ನುವುದು ಈಗ ಬೆಳಕಿಗೆ ಬರುತ್ತಿದೆ.

Appu helped prisoners
Appu helped prisoners

ಹಲವಾರು ವರ್ಷಗಳ ನಂತರ ವೈರಲ್ ಆಯ್ತು ಅಣ್ಣಾವ್ರ ಮದುವೆ ಪತ್ರಿಕೆ. ಮದುವೆ ಕಾರ್ಡ್ ನಲ್ಲಿ ಏನಿತ್ತು ಗೊತ್ತಾ?

ಅಪ್ಪು ಅವರ ಒಳ್ಳೆಯತನಕ್ಕೆ ಸಾಕ್ಷಿಯಾಗಿರುವಂಥ ಒಂದು ಘಟನೆಯನ್ನು ನಾವಿಂದು ಹೇಳುತ್ತೇವೆ. ಅಪ್ಪು ಅವರು ದೊಡ್ಮನೆ ಹುಡುಗ ಚಿತ್ರದ ಶೂಟಿಂಗ್ ನಲ್ಲಿ ಇದ್ದರು. ಈ ವೇಳೆ ಜೈಲು ಆವರಣದಲ್ಲಿ ಒಂದು ಸೀನ್ ಶೂಟ್ ಆಗಬೇಕಿತ್ತು. ಅಂಬರೀಷ್ ಅವರು ಜೈಲು ಸೇರುತ್ತಾರೆ ಆಗ ಅಂಬರೀಷ್ ಅವರನ್ನು ಮಾಡೋದಕ್ಕೆ ಪುನೀತ್ ಹೋಗುತ್ತಾರೆ ಇದು ಸಿನಿಮಾ ಕಥೆ ಆಗಿತ್ತು ಸಿನಿಮಾ ಚಿತ್ರೀಕರಣದ ನಂತರ ಅಪ್ಪು ಮಾಡಿದ್ದೇನು ಗೊತ್ತಾ?

ಜೈಲಿನಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಹಲವು ಖೈದಿಗಳು ಹಲವಾರು ವರ್ಷಗಳಿಂದ ಜೈಲಿನಲ್ಲಿಯೇ ಇದ್ದರು ಅವರ ಜೈಲುವಾಸದ ಅವಧಿಯು ಮುಗಿದಿತ್ತು ಆದರೂ ಅವರು ಜೈಲಿನಲ್ಲಿಯೇ ಇದ್ದರು ಇದಕ್ಕೆ ಕಾರಣ ಅವರಿಗೆ ನ್ಯಾಯಾಲಯದಿಂದ ದಂಡ ವಿಧಿಸಲಾಗಿದ್ದು ಆ ದಂಡವನ್ನು ಭರಿಸುವ ಶಕ್ತಿ ಅವರಲ್ಲಿ ಇರಲಿಲ್ಲ. ಈ ವಿಷಯ ತಿಳಿದ ಅಪ್ಪು ಅಂತಹ ಖೈದಿಗಳ ದಂಡವನ್ನು ತಾವೇ ಬೆರೆಸಿ ಅವರೆಲ್ಲರೂ ಮನೆಗೆ ಹೋಗುವಂತೆ ಮಾಡಿದ್ದರು. ಕೈದಿಗಳಲ್ಲಿಯೂ ಇರುವ ಒಳ್ಳೆತನವನ್ನು ಗುರುತಿಸಿ ಅವರಿಗೂ ಸಹಾಯ ಮಾಡುವ ಮನಸ್ಥಿತಿ ಇದೆ ಅಂದ್ರೆ ಪುನೀತ್ ಅವರು ನಿಜಕ್ಕೂ ಗ್ರೇಟ್ ಅಲ್ವಾ!

Leave A Reply

Your email address will not be published.