ನಟ ರವಿಚಂದ್ರನ್ ಅಳಿಯ ಕೋಟಿ ಕೋಟಿಗೆ ಒಡೆಯ? ಇವರ ಬ್ಯಾಗ್ರೌಂಡ್ ಕೇಳಿದರೆ ನೀವು ನಡುಗಿ ಹೋಗ್ತೀರಿ

0

Ravichandran son-in-law net worth amd background details : ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕ್ರೇಜಸ್ಟಾರ್ ರವಿಚಂದ್ರನ್ ಸಿನಿಮಾ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಮಾಡಿದವರು. ಕ್ರೇಜಿಸ್ಟಾರ್ ಸಿನಿಮಾ ಅಂದ್ರೆ ಸಿನಿಪ್ರಿಯರಿಗೆ ಇನ್ನಷ್ಟು ಕ್ರೇಜ್. ರವಿ ಸರ್ ನಿರ್ಮಾಣ ಮಾಡಿದ ಸಿನಿಮಾಗಳನ್ನು ಯಾರು ಮರೆಯುವುದೇ ಇಲ್ಲ. ಒಬ್ಬ ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ರವಿಚಂದ್ರನ್ ಅವರು ಸಿನಿಮಾ ನೋಡುವ ರೀತಿಯೇ ಬೇರೆ.

ಇವರಿಗೆ ಹಲವಾರು ಸಿನಿಮಾಗಳನ್ನ ಮಾಡಿ ಗೆದ್ದ ರವಿಚಂದ್ರನ್ ಕಳೆದು ಕೆಲವು ವರ್ಷಗಳಿಂದ ಮಾತ್ರ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಸೋಲನ್ನ ಅನುಭವಿಸುತ್ತಿದ್ದಾರೆ. ರವಿಚಂದ್ರನ್ ಇತ್ತೀಚಿಗೆ ಮಾಡುತ್ತಿರುವ ಎಲ್ಲಾ ಸಿನಿಮಾಗಳು ಸೋಲನ್ನ ಕಂಡಿವೆ. ಸೋಲು ಗೆಲುವು ಎನ್ನುವುದು ರವಿಚಂದ್ರನ್ ಅವರಿಗೆ ಇಂದು ನೆನ್ನೆಯದಲ್ಲ. ಈ ಹಿಂದೆಯೂ ಅವರು ಇಂತಹ ಸಾಕಷ್ಟು ಅನುಭವ ಹೊಂದಿದ್ದಾರೆ. ಆದರೆ ಇತ್ತೀಚಿಗೆ ಮಾತ್ರ ರವಿಚಂದ್ರನ್ ಅವರು ಆರ್ಥಿಕವಾಗಿಯೂ ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನುವುದು ಅವರ ಕೆಲವು ಭಾವುಕ ಮಾತುಗಳಿಂದ ಅರಿವಾಗುತ್ತದೆ.
ಹೌದು ರವಿಚಂದ್ರನ್ ಅವರು ಇತ್ತೀಚಿಗೆ ಕೆಲವು ಸಭೆ ಸಮಾರಂಭಗಳಲ್ಲಿ ಭಾವುಕರಾಗಿ ಮಾತನಾಡುತ್ತಾರೆ ತಾನು ಮಗಳ ಮದುವೆಗೆ ಹಣ ಹೊಂದಿಸುವುದಕ್ಕೆ ಎಷ್ಟು ಕಷ್ಟಪಟ್ಟಿದ್ದೇನೆ ಹಾಗೂ ನನ್ನ ಕಷ್ಟದಲ್ಲಿ ಸ್ನೇಹಿತರು ಹೇಗೆ ಸಹಾಯಕ್ಕೆ ನಿಂತರು ಎಂಬುದನ್ನು ಆಗಾಗ ವಿವರಿಸುತ್ತಾರೆ. ಇನ್ನು ರವಿಚಂದ್ರನ್ ಇತ್ತೀಚಿಗೆ ಮಗನ ಮದುವೆ ಮಾಡಿ ಮುಗಿಸಿದ್ದಾರೆ. ಈ ಸಮಯದಲ್ಲಿ ಇದು ಅವರಿಗೆ ಸಹಾಯಕ್ಕೆ ನಿಂತವರೇ ಅವರ ಸ್ನೇಹಿತರು.

ರವಿಚಂದ್ರನ್ ಅವರು ಇದ್ದ ಒಬ್ಬಳೇ ಮಗಳನ್ನ ಬಹಳ ಪ್ರೀತಿಯಿಂದ ಬೆಳೆಸಿದವರು ಹಾಗಾಗಿ ಆಕೆಯ ಮದುವೆಯನ್ನು ಅದ್ದೂರಿಯಾಗಿ ಮಾಡುವುದು ಅವರ ಕನಸಾಗಿತ್ತು. ರವಿಚಂದ್ರನ್ ಅವರ ಇಬ್ಬರು ಗಂಡು ಮಕ್ಕಳು ಸಿನಿಮಾ ಇಂಡಸ್ಟ್ರಿಯೊಂದಿಗೆ ಇದ್ದಾರೆ ಆದರೆ ರವಿ ಸರ್ ಮಗಳು ಮಾತ್ರ ಸಿನಿಮಾರಂಗದಿಂದ ದೂರ ಇದ್ದವರು ಹಾಗಾಗಿ ಅವರಿಗೆ ಶ್ರೀಮಂತ ಉದ್ಯಮಿ ಜೊತೆಗೆ ಮದುವೆ ಮಾಡಿಕೊಡಲಾಗಿದೆ.

Ravichandran son-in-law net worth amd background details
Ravichandran son-in-law ajay

Ravichandran son-in-law net worth amd background details

ರವಿಚಂದ್ರನ್ ಅವರ ಮಗಳ ಪತಿ ಹೆಸರು ಅಜಯ್. ಇವರು ಮೆಕಾನಿಕಲ್ ಇಂಜಿನಿಯರ್ ಆಗಿದ್ದು ತಮ್ಮದೇ ಆದ ಸ್ವಂತ ಸಾಕಷ್ಟು ಇಂಡಸ್ಟ್ರಿಗಳನ್ನ ಹೊಂದಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿ ಬಹುತೇಕ ಎಲ್ಲಾ ಇಂಡಸ್ಟ್ರಿಗಳು ಅಜಯ್ ಅವರದೇ ಅಂದ್ರೆ ನಿಮಗೆ ಆಶ್ಚರ್ಯವಾಗಬಹುದು. ಅಷ್ಟೇ ಅಲ್ಲ ಬಿಸಿನೆಸ್ ವಿದೇಶದಲ್ಲಿಯೂ ಕೂಡ ಇದೆ. ಅಜಯ್ ತಿಂಗಳಿಗೆ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುವ ಕೋಟ್ಯಾಧಿಪತಿ. ಇನ್ನು ಅಜಯ್ ಅವರ ಮನೆ ಯಾವ ಅರಮನೆಗೂ ಕಮ್ಮಿ ಇಲ್ಲ. ರವಿಚಂದ್ರನ್ ಅವರೇ ಹೇಳುವಂತೆ ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕು ಗೋವಾ ಗೆ ಹೋಗಬೇಕು ಅಂದ್ರೆ ನನ್ನ ಅಳಿಯನ ವಿಲ್ಲಾಗೆ ಹೋದರೆ ಸಾಕು ಅಲ್ಲಿ ಎಲ್ಲಾ ಸೌಕರ್ಯಗಳು ಇದೆ ಎಂದು ಹೇಳಿದ್ದರು.

ಇನ್ನು ರವಿ ಚಂದ್ರನ್ ಅವರ ಮಗಳು ಕೂಡ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ ಅವರದ್ದೇ ಆದ ಸೀರೆ ತಯಾರಿಸುವ ಉದ್ಯಮ ಇದೆ. ತನ್ನ ಸ್ವಂತ ದುಡ್ಡಿನಲ್ಲಿ ಬಹುದೊಡ್ಡ ಕಂಪನಿಯೊಂದನ್ನು ಕಟ್ಟಿ ಬೆಳೆಸಿದ್ದಾರೆ ರವಿಚಂದ್ರನ್ ಅವರ ಮಗಳು.

ಸದ್ಯ ರವಿಚಂದ್ ಅವರ ಸಿನಿಮಾಗಳು ಸೋಲುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಂಕಷ್ಟ ಎದುರಿಸುವ ಪರಿಸ್ಥಿತಿ ಇದೆ ಆದರೆ ರವಿಚಂದ್ರನ್ ಅವರ ಮಗಳು ಅಳಿಯ ಚೆನ್ನಾಗಿದೆ ರವಿಚಂದ್ರನ್ ಅವರ ಆಸೆಯಂತೆ ಅವರ ಮಗಳು ಉತ್ತಮ ಜೀವನ ನಡೆಸುತ್ತಿದ್ದಾರೆ ಕೋಟ್ಯಾಧಿಪತಿಯನ್ನು ಅಳಿಯನಾಗಿ ಸ್ವೀಕರಿಸಿದ ರವಿಚಂದ್ರನ್, ಮಗಳನ್ನು ಉತ್ತಮ ಮನೆಗೆ ಮದುವೆ ಮಾಡಿಕೊಟ್ಟ ನೆಮ್ಮದಿ ಅವರಲ್ಲಿದೆ. ತಂದೆ ತಾಯಿಗೆ ಮಕ್ಕಳು ಸಂತೋಷವೇ ಮುಖ್ಯ ಅಲ್ವೇ?

ಇದನ್ನೂ ಓದಿ :- 22 ವರ್ಷಗಳ ನಂತರ ಮತ್ತೆ ವೈರಲ್ ಆಯ್ತು ಅಪ್ಪು ಹಾಗೂ ಅಶ್ವಿನಿ ಅವರ ಮದುವೆ ಕಾರ್ಡ್. ಹೇಗಿತ್ತು ಗೊತ್ತಾ ಮದುವೆ ಕಾರ್ಡ್?

Leave A Reply

Your email address will not be published.