ಲಂಡನ್ ನಲ್ಲಿ ತಿಂಗಳಿಗೆ ಎರಡು ಲಕ್ಷ ಸಂಬಳ ಸಿಗುತ್ತಿದ್ದ ಕೆಲಸವನ್ನು ಬಿಟ್ಟು ಕೋಮಲ್ ಪತ್ನಿ ಇಂಡಿಯಾಗೆ ಬಂದಿದ್ದೇಕೆ

0

Actor komal wife : ಕನ್ನಡದಲ್ಲಿ ಹೆಸರಾಂತ ಹಾಸ್ಯ ಕಲಾವಿದ ಜಗ್ಗೇಶ್ ಹಾಗೂ ಕೋಮಲ್ ಜೋಡಿ. ಸಹೋದರರಾದ ಜಗ್ಗೇಶ್ ಹಾಗೂ ಕೋಮಲ್ ಅವರು ಹಲವು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾ ಸೇವೆಯಲ್ಲಿ ತೊಡಗಿದ್ದು, ಜನರ ಮೆಚ್ಚಿನ ನಟರು ಎನಿಸಿದ್ದಾರೆ. ಆದರೆ ಕೋಮಲ್ ಜಗ್ಗೇಶ್ ಅವರಷ್ಟು ಸಿನಿಮಾ ರಂಗದಲ್ಲಿ ಸಕ್ರಿಯರಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೋಮಲ್ ಅವರ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಆದರೆ ಇದೀಗ ಬಹಳ ಸಮಯದ ನಂತರ ನಟ ಕೋಮಲ್ ಕಂಬ್ಯಾಕ್ ಮಾಡಿದ್ದಾರೆ.

ಹೌದು ಸುಮಾರು ಏಳು ವರ್ಷಗಳ ಕಾಲ ಕೋಮಲ್ ಚಿತ್ರರಂಗದಿಂದ ದೂರ ಇದ್ದರು ಸಾಡೇಸಾತ್ ದೋಷ ಇದ್ದ ಕಾರಣ ಸಿನಿಮಾದಿಂದ ದೂರ ಇದ್ದರು ಎಂದು ತಿಳಿಯಲ್ಪಟ್ಟಿದೆ. ಇನ್ನು ಸಾಡೇಸಾತ್ ಇರುವಾಗ ಸಿನಿಮಾ ಮಾಡಿದರೆ ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ಜಗ್ಗೇಶ್ ಅವರೇ ಕೋಮಲ್ ಅವರಿಗೆ ತಿಳಿಸಿದರಂತೆ. ಇನ್ನು ದೀರ್ಘ ಬ್ರೇಕ್ ನಂತರ ಕೋಮಲ್ ಅವರು ಹೊಸ ಕಥೆಯೊಂದಿಗೆ ಮತ್ತೆ ಬಂದಿದ್ದಾರೆ. ಹೌದು ಕಾಲಾಯ ತಸ್ಮೈ ನಮಃ ಎನ್ನುವ ಸಿನಿಮಾದಲ್ಲಿ ಕೋಮಲ್ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾಕ್ಕೆ ಬಂಡವಾಳ ಹಾಕ್ತಾ ಇರೋದೇ ಕೋಮಲ್ ಅವರ ಪತ್ನಿ ಅನಸೂಯ. ಇನ್ನು ಈ ಸಿನಿಮಾದ ಪತ್ರಿಕಾಗೋಷ್ಠಿ ಸಮಯದಲ್ಲಿ ಮಾತನಾಡಿದ ಜಗ್ಗೇಶ್ ಕೋಮಲ್ ಅವರ ಪತ್ನಿಯ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಕೋಮಲ್ ಅವರ ಪತ್ನಿ ಅನಸುಯಾ ತುಂಬಾ ಒಳ್ಳೆಯವಳು. ಮೃದು ಸ್ವಭಾವದವಳು. ಅವಳು ವಿದೇಶದಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು ಅವಳಿಗೆ ತಿಂಗಳಿಗೆ 1.7 ಲಕ್ಷ ರೂಪಾಯಿ ಸಂಬಳ ಇತ್ತು, ಆದರೆ ಗಂಡ ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಅಷ್ಟು ದೊಡ್ಡ ಕೆಲಸವನ್ನು ಬಿಟ್ಟು ಬಂದಿದ್ದಾಳೆ ನಿಜಕ್ಕೂ ಅವಳ ತ್ಯಾಗವನ್ನು ಮೆಚ್ಚಲೇಬೇಕು. ಇದೀಗ ಕೋಮಲ್ ನಟಿಸುತ್ತಿರುವ ಸಿನಿಮಾಕ್ಕೆ ಅವಳೇ ನಿರ್ಮಾಪಕೀಯಾಗಿರುವುದು ನಿಜಕ್ಕೂ ಸಂತೋಷದ ವಿಚಾರ. ಎಂದಿದ್ದಾರೆ.

Actor komal wife
Actor komal wife

ಇನ್ನು ಕೋಮಲ್ ಬಗ್ಗೆ ಮಾತನಾಡಿದ ಜಗ್ಗೇಶ್ ಅವರು, ಒಂದು ಉತ್ತಮ ಸ್ಕ್ರಿಪ್ಟ್ ಜೊತೆಗೆ ಕೋಮಲ್ ಮತ್ತೆ ಬಂದಿದ್ದಾರೆ ನಿಮ್ಮೆಲ್ಲರ ಆಶೀರ್ವಾದ ಅವನ ಮೇಲೆ ಇರಬೇಕು ಕಷ್ಟಪಡುತ್ತಾನೆ ಯಾವುದೇ ಕೆಲಸ ಇದ್ರೂ ಅದರ ಬಗ್ಗೆ ಹೆಚ್ಚು ಗಮನವಿಟ್ಟು ನಿರ್ವಹಿಸುತ್ತಾನೆ. ಕಲೆ ತಸ್ಮಯಿ ಸಿನಿಮಾದ ಮೂಲಕ ಮತ್ತೆ ಸಿನಿಮಾ ಇಂಡಸ್ಟ್ರಿಗೆ ಬಂದಿರುವುದು ನನಗೂ ಖುಷಿ ಇದೆ’ ಎಂದಿದ್ದಾರೆ.

ಇದನ್ನೂ ಓದಿ :- ಡಿ ಬಾಸ್ ದರ್ಶನ್ ಪ್ರತಿದಿನ ಬೆಳಿಗ್ಗೆ ಎದ್ದು ಎಷ್ಟು ಸಿ-ಗರೇಟ್ ಸೇದುತ್ತಾರೆ ಗೊತ್ತಾ?

ಕೊಮಲ್ ಅವರು ಒಬ್ಬ ಹಾಸ್ಯ ನಟನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು ಜೊತೆಗೆ ಖಳನಾಯಕನಾಗಿ ನಾಯಕನಾಗಿ ಕೂಡ ಅಭಿನಯಿಸಿದ್ದಾರೆ. ಅವರು ಹಾಸ್ಯ ನಟನಾಗಿ ಅಭಿನಯಿಸಿದಷ್ಟು ಯಶಸ್ಸು ನಾಯಕರಾಗಿ ಮಾಡಿದ ಸಿನಿಮಾಗಳಲ್ಲಿ ಸಿಗಲಿಲ್ಲ ಆರಂಭದಲ್ಲಿ ಕೋಮಲ್ ಅವರನ್ನು ಇಷ್ಟಪಟ್ಟ ಜನ ನಂತರ ಅವರ ಸಿನಿಮಾಗಳ ಬಗ್ಗೆ ಹೆಚ್ಚು ಅಭಿಮಾನ ತೋರಿಸಲಿಲ್ಲ. ಈ ಕಾರಣಕ್ಕೆ ಕೋಮಲ್ ಅವರಿಗೆ ಸೋಲು ಆಗಿರಬಹುದು ಆದರೆ ಇದೀಗ ಹೊಸ ಸಿನಿಮಾದ ಮೂಲಕ ಕೋಮಲ್ ಮತ್ತೆ ಅಭಿನಯಿಸಿದ ಇರೋದು ಹೊಸದೊಂದು ಹೋಪ್ ಮೂಡಿಸಿದೆ.

Leave A Reply

Your email address will not be published.