ರೂಪೇಶ್ ಶೆಟ್ಟಿ ಮನೆಯಿಂದ ಬಂದಂತಹ ಮದುವೆ ಪ್ರಪೋಸಲ್ ಗೆ ಸಾನ್ಯಾ ಅಯ್ಯರ್ ಫ್ಯಾಮಿಲಿ ಹೇಳಿದ್ದೇನು ಗೊತ್ತಾ?

0

roopesh sannya marraige proposal : ಈ ಬಾರಿಯ ಬಿಗ್ ಬಾಸ್ ಓ ಟಿ ಟಿ ಹಾಗೂ 9ನೇ ಸೀಸನ್ ಗೆ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ ಅವರು ಸ್ಪರ್ಧಿಯಾಗಿ ಬರುವ ಮೂಲಕ ಮತ್ತೆ ಕನ್ನಡಿಗರಿಗೆ ತಮ್ಮ ಮರು ಪರಿಚಯವನ್ನು ಮಾಡಿಕೊಳ್ಳುತ್ತಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಸಾನ್ಯಾ ಅಯ್ಯರ್ (sannya iyer) ಹಾಗೂ ರೂಪೇಶ್ ಶೆಟ್ಟಿ (roopesh shetty) ಇಬ್ಬರ ಪರಿಚಯವೂ ಕೂಡ ಆಗುತ್ತದೆ. ಇವರಿಬ್ಬರ ಕುರಿತಂತೆ ಬಿಗ್ ಬಾಸ್ ಮನೆಯಲ್ಲಿ ಎಷ್ಟು ದೊಡ್ಡ ಮಟ್ಟಿಗೆ ಸುದ್ದಿಗಳು ಓಡಾಡಿದ್ದವು ಎಂಬುದನ್ನು ನಿಮಗೆ ಹೇಳಬೇಕಾದ ಅವಶ್ಯಕತೆ ಇಲ್ಲ ಎಂಬುದಾಗಿ ಭಾವಿಸುತ್ತೇವೆ.

ಸಾನ್ಯಾ ಅಯ್ಯರ್ ಮುಖ್ಯ ಬಿಗ್ ಬಾಸ್ ಗೆ ಪ್ರವೇಶ ಆದ ಕೆಲವೇ ಸಮಯಗಳ ನಂತರ ಕೂಡಲೇ ಎಲಿಮಿನೇಷನ್ ಕಾಣುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಇವರಿಬ್ಬರ ನಡುವೆ ನಡೆಯುತ್ತಿದ್ದ ಲವ್ವಿ ಡಬ್ಬಿ ಪ್ರಸಂಗಗಳು ನಿಮಗೆಲ್ಲರಿಗೂ ತಿಳಿದಿರುವುದೇ. ಇನ್ನು ವೈಲ್ಡ್ ಕಾರ್ಡ್ ಮೂಲಕ ಮತ್ತೆ ಬಿಗ್ ಬಾಸ್ ಮನೆಗೆ ಇವರು ಎಂಟ್ರಿ ನೀಡುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದು ಮಾತ್ರ ದೀಪಿಕಾ ದಾಸ್.

Saniya iyer biggboss kannada
Saniya iyer biggboss kannada

roopesh sannya marraige proposal

ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಸಾಕಷ್ಟು ಆತ್ಮೀಯತೆಯನ್ನು ಹೊಂದಿರುವುದು ಪ್ರತಿಯೊಬ್ಬ ಬಿಗ್ ಬಾಸ್ ಪ್ರೇಕ್ಷಕನಿಗೂ ಕೂಡ ತಿಳಿದಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತಾನು ಸಿನಿಮಾಗಳಲ್ಲಿ ಕೂಡ ಮುಂದಿನ ದಿನಗಳಲ್ಲಿ ಕಾಣುವ ಸಾಧ್ಯತೆ ಇದೆ ಎಂಬುದಾಗಿ ಕೂಡ ಅಭಿಮಾನಿಗಳಿಗೆ ಸಾನ್ಯಾ ಹಿಂಟ್ ನೀಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಮದುವೆ ಪ್ರಪೋಸಲ್ ಕುರಿತಂತೆ ಕೂಡ ಮಾತನಾಡಿದ್ದಾರೆ.

ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ರೂಪೇಶ್ ಶೆಟ್ಟಿ (roopesh shetty) ಅವರ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ಏನು ಮಾಡುತ್ತಿದೆ ಎಂಬುದಾಗಿ ಸಂದರ್ಶಕರು ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಸಾನ್ಯಾ ಅಯ್ಯರ್ (sannya iyer ) ಅವರು ಒಂದು ಐದು ವರ್ಷದ ಮಟ್ಟಿಗೆ ನಾನು ಈ ವಿಚಾರದ ಕುರಿತಂತೆ ಯೋಚನೆ ಮಾಡುವುದಕ್ಕೆ ಹೋಗುವುದಿಲ್ಲ. ನನಗೆ ನಟಿಯಾಗುವುದು ಮೊದಲ ಪ್ರಶಸ್ತಿದ ಕನಸಾಗಿದೆ ಎಂಬುದಾಗಿ ಹೇಳಿ ಹಾಗೆಂದ ಮಾತ್ರಕ್ಕೆ ನಾನು ರೂಪೇಶ್ ಶೆಟ್ಟಿ ಅವರ ಸ್ನೇಹವನ್ನು ತೊರೆಯುತ್ತೇನೆ ಎಂಬ ಅರ್ಥವಲ್ಲ ಎಂಬುದಾಗಿ ಕೂಡ ಹೇಳಿದ್ದಾರೆ. ಒಟ್ಟಾರೆಯಾಗಿ ಈ ಪ್ರಶ್ನೆಗೆ ಅಡ್ಡಗೋಡೆಯ ಮೇಲೆ ದೀಪ ಇಡುವಂತಹ ಪ್ರಯತ್ನವನ್ನು ಸಾನ್ಯಾ ಅಯ್ಯರ್ ಮಾಡಿದ್ದಾರೆ.

ಇದನ್ನೂ ಓದಿ : ಸಾನಿಯಾ ಅಯ್ಯರ್ ಮೈ ಮೇಲೆ ಆಗಾಗ ದೇವಿ ಬರುವುದು ನಿಜಾನಾ? ಸಾನಿಯಾ ತಾಯಿ ಹೇಳಿದ್ದೇನು ಗೊತ್ತೇ

Leave A Reply

Your email address will not be published.