22 ವರ್ಷಗಳ ನಂತರ ಮತ್ತೆ ವೈರಲ್ ಆಯ್ತು ಅಪ್ಪು ಹಾಗೂ ಅಶ್ವಿನಿ ಅವರ ಮದುವೆ ಕಾರ್ಡ್. ಹೇಗಿತ್ತು ಗೊತ್ತಾ ಮದುವೆ ಕಾರ್ಡ್?

0

Puneet ashwini marriage card : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರೀತಿಸಿ ಮದುವೆ ಆದವರು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅಪ್ಪು ಅವರು ದೈಹಿಕವಾಗಿ ನಮ್ಮನ್ನೆಲ್ಲ ಆಗಲಿ ಈಗಾಗಲೇ ಒಂದು ವರ್ಷ ಕಳೆದಿದ್ದು ಅಪ್ಪು ಅವರು ಇಲ್ಲದೆ ಅಶ್ವಿನಿ ಮೇಡಂ ಅವರು ಒಬ್ಬಂಟಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈಗ ಅಪ್ಪು ಅವರು ನಡೆಸಿಕೊಂಡು ಹೋಗುತ್ತಿದ್ದ ಎಲ್ಲಾ ಕೆಲಸಗಳನ್ನು ಕೂಡ ತಾವೇ ಮುಂದೆ ನಿಂತು ನಡೆಸುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಇಬ್ಬರೂ ಕೂಡ ಒಬ್ಬ ಕಾಮನ್ ಫ್ರೆಂಡ್ ಮೂಲಕ ಪರಿಸ್ತರಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗುತ್ತದೆ. ಅಶ್ವಿನಿ ಅವರು ತಮ್ಮ ಮನೆಯಿಂದ ಒಪ್ಪಿಗೆಯನ್ನು ಪಡೆದುಕೊಳ್ಳುತ್ತಾರೆ. ಇನ್ನು ಈ ಕಡೆ ಅಪ್ಪು ಮೊದಲಿಗೆ ಶಿವಣ್ಣನಿಗೆ ಈ ವಿಚಾರವನ್ನು ತಿಳಿಸಿ ಶಿವಣ್ಣ ಅಣ್ಣಾವ್ರು ಹಾಗೂ ಪಾರ್ವತಮ್ಮ ಅವರಿಗೆ ಈ ವಿಚಾರವನ್ನು ತಿಳಿಸಿ ಎರಡು ಕುಟುಂಬದವರು ಮದುವೆಗೆ ಒಪ್ಪಿ ಮದುವೆ ಅದ್ದೂರಿಯಾಗಿ ನಡೆಯುತ್ತದೆ.

Puneet ashwini marraige card
Puneet ashwini marriage card

Puneet ashwini marriage card

ಪುನೀತ್ ರಾಜಕುಮಾರ್ (Puneet rajkumar) ಹಾಗೂ ಅಶ್ವಿನಿ (ashwini puneet rajkumar) ಅವರ ಮದುವೆ 1999ರ ಡಿಸೆಂಬರ್ 1ನೇ ತಾರೀಖಿನಂದು ಅದ್ದೂರಿಯಾಗಿ ನಡೆಯುತ್ತದೆ. ಈ ಮದುವೆ ಕಾರ್ಡ್ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಂಡು ಬಂದಿದ್ದು ಎಲ್ಲಾ ಕಡೆ ವೈರಲ್ ಆಗಿದ್ದು ಈ ಮದುವೆ ಪತ್ರಿಕೆಯನ್ನು ನೋಡಿ ಎಲ್ಲರೂ ಕೂಡ ಭಾವುಕರಾಗಿದ್ದಾರೆ. ಅಂದರೆ ಅಪ್ಪು ಹಾಗೂ ಅಶ್ವಿನಿ ಅವರ ಮದುವೆ ನಡೆದು ಬರೋಬ್ಬರಿ 22 ವರ್ಷಗಳು ಕಳೆದಿವೆ. ಇವರಿಬ್ಬರ ಪ್ರೀತಿಯ ದಾಂಪತ್ಯದ ಫಲದಿಂದಾಗಿ ಅಪ್ಪು ಹಾಗೂ ಅಶ್ವಿನಿ ದಂಪತಿಗಳು ದೃತಿ ಹಾಗೂ ವಂದಿತಾ ಎನ್ನುವ ಇಬ್ಬರು ಹೆಣ್ಣು ಮಕ್ಕಳನ್ನು ಪಡೆಯುತ್ತಾರೆ.

22 ವರ್ಷಗಳ ದಾಂಪತ್ಯ ಜೀವನದಲ್ಲಿ ಒಂದೇ ಒಂದು ಬಾರಿಯೂ ಕೂಡ ಇವರಿಬ್ಬರ ಕಲಹದ ಸುದ್ದಿ ಯಾವತ್ತೂ ಕೂಡ ಮಾಧ್ಯಮಗಳಲ್ಲಿ ಕೇಳಿಸಿರಲಿಲ್ಲ. ಅಷ್ಟರಮಟ್ಟಿಗೆ ಇವರಿಬ್ಬರು ಎಲ್ಲರಿಗೂ ಮಾದರಿಯಾಗಿ ದಾಂಪತ್ಯ ಜೀವನವನ್ನು ನಡೆಸಿದವರು. ಈ ಆದರ್ಶ ದಂಪತಿಗಳನ್ನು ನೋಡಲಾಗದೆ ಆ ವಿಧಿ ಹೊಟ್ಟೆಕಿಚ್ಚಿನಿಂದ ಅಪ್ಪು ಅವರನ್ನು ದೇವರ ಬಳಿ ಕರೆಸಿಕೊಂಡ ಎನ್ನುವುದಷ್ಟೇ ನಾವೆಲ್ಲರೂ ಹೇಳಬಹುದಾದ ಮಾತಾಗಿದೆ. ನೀವು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮದುವೆ ಪತ್ರಿಕೆಯನ್ನು ಇಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ : ನನ್ನ ಹೆಂಡತಿಗೆ ಶೋಕಿ ಎಂದು ಸಂದರ್ಶನದಲ್ಲಿ ಶಾಕಿಂಗ್ ಹೇಳಿಕೆ ನೀಡಿದ ಡಿ ಬಾಸ್!

Leave A Reply

Your email address will not be published.