ಕೆ. ಎಲ್. ರಾಹುಲ್ ಮತ್ತು ಅತಿಯಾ ಶೆಟ್ಟಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಈ ದಿನವನ್ನು ಸಂಭ್ರಮಿಸುವುದು ಯಾವಾಗ ಗೊತ್ತಾ?

0

Kl rahul marraige with athiya shetty : ಕ್ರಿಕೆಟ್ ಆಟಗಾರರಿಗೂ ಚಲನಚಿತ್ರರಂಗದ ನಟಿಯರಿಗೂ ಪ್ರೀತಿಯಾಗಿ ಡೇಟಿಂಗ್ ನಲ್ಲಿ ಬ್ಯುಸಿಯಾಗಿ ಹಾರ ಬದಲಾಗಿ ದಾಂಪತ್ಯ ಜೀವನ ನಡೆಸಿರುವುದಕ್ಕೆ ಹಲವು ಜೋಡಿಗಳು ಸಾಕ್ಷಿಯಾಗಿದ್ದು ಹೊಸದಾಗಿ ಕೇಳಿದ ಸಂಗತಿ ಏನಲ್ಲ ಮೈದಾನದಲ್ಲಿ ಬ್ಯಾಟ್ ಹಿಡಿದು ರನ್ ಮೇಲೆ ರನ್ ಗಳಿಸುವ ಆಟಗಾರರಿಗೂ ಆಟವನ್ನು ವೀಕ್ಷಿಸಲು ಬಿಡುವು ಮಾಡಿಕೊಂಡು ಬಂದು ಕುಳಿತುಕೊಳ್ಳುವ ಮೋಹಕ ತಾರೆಯರಿಗೂ ಅನಿರೀಕ್ಷಿತವಾಗಿ ಒಡನಾಟ ಬೆಳೆದು ಹಸೆಮಣೆ ಏರುವುದು ಹೊಸದೇನಲ್ಲ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಯುವರಾಜ್ ಸಿಂಗ್ ಮತ್ತು ಹಜೆಲ್ ಕಿಚ್, ಹರ್ಭಜನ್ ಸಿಂಗ್ ಮತ್ತು ಗೀತಾ ಹೀಗೆ ನೋಡುತ್ತಾ ಹೋದರೆ ಹಲವಾರು ಉದಾಹರಣೆಗಳಿವೆ. ಇದೀಗ ಇದೇ ಸಾಲಿನಲ್ಲಿ ಕೆ ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಸೇರಿದ್ದಾರೆ. ಕೆ ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಇಬ್ಬರು ಒಟ್ಟಾಗಿ ಕಾಣಿಸಿಕೊಂಡ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದು, ನೆಟ್ಟಿಗರು ಇವರಿಬ್ಬರ ಡೇಟಿಂಗ್ ಬಗ್ಗೆ ಗುಸು ಗುಸು ಎಂದು ಬಿಸಿಯಾದ ಚರ್ಚೆ ನಡೆಸಿದ್ದರು.

ಕೆ ಎಲ್ ರಾಹುಲ್ ಅವರು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಆಗಿ ಸದ್ಯದ ಆಟಗಳಲ್ಲಿ ಸ್ವಲ್ಪ ಎಡವಿದ್ದರೂ ಕೂಡ ಪ್ರೀತಿಯ ವಿಚಾರದಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು, ಗೆಲುವಿನ ಸಂಭ್ರಮದಲ್ಲಿದ್ದಾರೆ. ಕ್ರಿಕೆಟ್ ಲೋಕವು ಕೆ ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ವಿವಾಹದ ಸಂಭ್ರಮವನ್ನು ಆಚರಿಸಲು ಕಾಯುತ್ತಿದೆ. ಸದ್ಯದಲ್ಲೇ ಪುಷ್ಪ ಹಾರಗಳನ್ನು ಬದಲಿಸಿಕೊಂಡು ಸಂಸಾರಿಕ ಜೀವನಕ್ಕೆ ನಾಂದಿ ಹಾಡಲಿದ್ದಾರೆ ಎನ್ನಲಾಗುತ್ತಿದೆ.

 Kl rahul marraige
Kl rahul marraige

ಟಿ20 ವಿಶ್ವಕಪ್ 2022ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಸದ ಇವರನ್ನು ಸದ್ಯ ತಂಡದಿಂದ ಹೊರಕ್ಕೆ ಇಡಲಾಗಿದೆ ಎನ್ನುತ್ತಿದ್ದು, ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ ಟ್ವೆಂಟಿ ಏಕದಿನ ಸರಣಿಯಲ್ಲಿ ಕೆ ಎಲ್ ರಾಹುಲ್ ಆಡುವುದಿಲ್ಲ ಎನ್ನಲಾಗುತ್ತಿದೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಮುಗಿದಾಗಿನಿಂದ ರಾಹುಲ್ ಬಿಸಿಸಿಐ ನಿಂದ ಚಿಕ್ಕ ಬ್ರೇಕ್ ಪಡೆದಿದ್ದಾರಂತೆ.

Kl rahul marraige with athiya shetty

ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಅವರ ಮಗಳಾದ ಅತಿಯಾ ಶೆಟ್ಟಿಯನ್ನು ಜನವರಿ 2023ರ ಮೊದಲ ವಾರದಲ್ಲೇ ಕೈ ಹಿಡಿಯುವ ಸಮಾರಂಭವನ್ನು ಆಚರಿಸಲು ನಿರ್ಧರಿಸಿ, ಕೆ ಎಲ್ ರಾಹುಲ್ ಅವರು ಕ್ರಿಕೆಟ್ ಆಟದಿಂದ ಸಣ್ಣದೊಂದು ಬ್ರೇಕ್ ತೆಗೆದುಕೊಂಡಿದ್ದು, ಸ್ವತಃ ತಾವೇ ಬಿಸಿಸಿಐನಿಂದ ವಿರಾಮಕ್ಕಾಗಿ ಒಪ್ಪಿಗೆ ಪಡೆದಿದ್ದು, ಅಧಿಕಾರಿಯೊಬ್ಬರಿಂದ ಖಚಿತವಾಗಿದೆ. 2018 ರಿಂದ ಕೆ ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿಯವರು ಡೇಟಿಂಗ್ ನಲ್ಲಿದ್ದು ಈ ಜೋಡಿಯನ್ನು ಒಂದೇ ಚೌಕಟ್ಟಿನಲ್ಲಿ ನೋಡಲು ಅಭಿಮಾನಿಗಳಿಗೂ ಸಂತಸವಂತೆ. ಅತಿಯಾ ಶೆಟ್ಟಿಯವರನ್ನು ವಿವಾಹವಾದ ಬಳಿಕ ನಡೆವ ಕ್ರಿಕೆಟ್ ಆಟದಲ್ಲಿ ಟೀಮ್ ಇಂಡಿಯಾದ ಉಪನಾಯಕ ಕೆಎಲ್ ರಾಹುಲ್ ಅವರು ಆಡಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ನರೇಂದ್ರ ಮೋದಿ ಧರಿಸುವ ಶಾಲಿನ ಬೆಲೆ ಎಷ್ಟು ಗೊತ್ತಾ! ಗೊತ್ತಾದ್ರೆ ನೀವು ಶಾಕ್ ಆಗ್ತೀರಿ!

Leave A Reply

Your email address will not be published.