ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳಿಗೆ ದೊರೆತಿದೆ ಮೆಗಾ ಆಫರ್! ದೊಡ್ಮನೆ ಮೊಮ್ಮಗನೊಂದಿಗೆ ಜೋಡಿಯಾಗುವ ಅವಕಾಶ

0

Upendra daughter aishwarya upendra and yuvarajkumar movie : ಇದೀಗ ಚಂದನವನದ ಸ್ಟಾರ್ ನಟ, ನಟಿಯರ ಮಕ್ಕಳೆಲ್ಲರೂ ಕಲಾದೇವತೆಯನ್ನು ಒಲಿಸಿಕೊಂಡು, ಚಿತ್ರರಂಗವನ್ನು ಪ್ರವೇಶ ಮಾಡಿ ಜನರೆದುರು ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಹೊಸದೇನಲ್ಲ. ಅಂಬರೀಶ್ ಅವರ ಪುತ್ರ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಕ್ಕಳು, ಮಾಲಾಶ್ರೀ ಅವರ ಮಗಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಬಹಳ ದಿನಗಳಾಯ್ತು.

ಇತ್ತೀಚಿಗಷ್ಟೇ ಕೇಳಿದ ಹಾಗೆ ಲವ್ಲಿ ಸ್ಟಾರ್ ಪ್ರೇಮ್ (loveley star prem) ವರ ಪುತ್ರಿ ಅಮೃತ ಪ್ರೇಮ್ (amrutya prem ) ‘ಟಗರು ಪಲ್ಯ’ ಚಿತ್ರದ ಮೂಲಕ ನಾಯಕಿಯಾಗಿ ಮಿಂಚಲಿದ್ದಾರೆ. ಇದೆ ಸಾಲಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರಿ ಐಶ್ವರ್ಯ ಅವರು ಕೂಡ ಸೇರಲಿದ್ದಾರೆ.

ಟಗರು ಪಲ್ಯ ಚಿತ್ರದ ಲಾಂಚ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಅವರು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಾಗಿ ಹೇಳುತ್ತಾ ಚಿತ್ರದಲ್ಲಿ ಪ್ರೇಮ್ ಅವರ ಮಗಳು ಅಮೃತಾ ಅಭಿನಯಿಸುವ ಬಗ್ಗೆ ಹೇಳಿದ್ದರು. ಅಮೃತ ಕೂಡ ‘ಒಳ್ಳೆಯ ಸಂದೇಶ ಸಾರುವ ಮತ್ತು ಹಳ್ಳಿಯ ಸೊಗಡನ್ನು ಬಿಂಬಿಸುವ ಚಿತ್ರವಾದ್ದರಿಂದ ಒಪ್ಪಿಕೊಂಡೆ’ ಎಂದಿದ್ದಾರೆ. ಅಲ್ಲದೆ ಪ್ರೇಮ್ ಅವರು ತಮ್ಮ ಮಗಳು ಪುನೀತ್ ರಾಜಕುಮಾರ್ ಅವರ ಅಭಿಮಾನಿ ಮತ್ತು ಅವರ ಆಶೀರ್ವಾದದಿಂದಲೇ ಇವರಿಗೆ ಅವಕಾಶ ದೊರೆಯಿತು ಎಂದಿದ್ದರು.

Upendra daughter aishwarya upendra and yuvarajkumar movie
Upendra daughter aishwarya upendra and yuvarajkumar movie

Upendra daughter aishwarya upendra and yuvarajkumar movie

ಇದರ ಬೆನ್ನಲ್ಲೇ ಮುದ್ದು ಹುಡುಗಿ ಐಶ್ವರ್ಯ (aishwarya upendra) ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದೊಡ್ಮನೆಯ ಮೊಮ್ಮಗ ಅಂದರೆ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವರಾಜಕುಮಾರ್ ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಗುಸು-ಗುಸು ಹಬ್ಬಿದೆ. ಐಶ್ವರ್ಯಾಳ ತಂದೆ ತಾಯಿಗಳಾದ ರಿಯಲ್ ಸ್ಟಾರ್ ಉಪೇಂದ್ರ (upendra) ಹಾಗೂ ಸುಂದರ ತಾರೆ ಪ್ರಿಯಾಂಕ ಇಬ್ಬರೂ ಕೂಡ ನಟನೆಯಲ್ಲಿ ಪಳಗಿ, ಬೆಳೆದು ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿದವರು. ಇದೀಗ ಅವರ ಪುತ್ರಿ ಐಶ್ವರ್ಯ ಸಿನಿಮಾದಲ್ಲಿ ನಟಿಸುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ನಟಿಸಲಿರುವ ಚಿತ್ರಕ್ಕೆ ಉಪ್ಪಿ ಮಗಳು ಐಶ್ವರ್ಯ ಆಯ್ಕೆಯಾಗಿರುವುದು ಸುದ್ದಿಯಾಗಿದೆ. ಯುವರಾಜ್ ನೊಂದಿಗೆ ಚಿತ್ರದಲ್ಲಿ ಜೋಡಿಯಾಗಿ ಐಶ್ವರ್ಯ ಕಾಣಿಸಿಕೊಳ್ಳಲಿದ್ದು, ನವ ಕಲಾವಿದರ ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರಂತೆ. ಐಶ್ವರ್ಯ ಅವರಿಗೆ ಹೊಂಬಾಳೆ ಫಿಲಂಸ್ ನೀಡಿರುವ ಈ ಮೆಗಾ ಆಫರ್ ಗೆ ಉಪ್ಪಿಯವರು ಒಪ್ಪಿಗೆ ನೀಡುತ್ತಾರಾ ಎಂಬುದಷ್ಟೇ ಪ್ರಶ್ನೆಯಾಗಿ ಉಳಿದಿದೆ.

ಇದನ್ನೂ ಓದಿ : ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವ ಹುಡುಗಿಯ ಒಟ್ಟಾರೆ ಆಸ್ತಿಯ ವಿವರ ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ!

Leave A Reply

Your email address will not be published.