ಸಾನಿಯಾ ಅಯ್ಯರ್ ಮೈ ಮೇಲೆ ಆಗಾಗ ದೇವಿ ಬರುವುದು ನಿಜಾನಾ? ಸಾನಿಯಾ ತಾಯಿ ಹೇಳಿದ್ದೇನು ಗೊತ್ತೇ

0

Saniya iyer spirtual moment : ಬಿಗ್ ಬಾಸ್ ಸೀಸನ್ 9ರ ಸ್ಪರ್ದಿ ಆಗಿದ್ದ ಸಾನಿಯಾ ಅಯ್ಯರ್, ಸದ್ಯ ವೈಯಕ್ತಿಕ ಕಾರಣಕ್ಕೆ ಸುದ್ದಿಯಲ್ಲಿ ಇದ್ದಾರೆ. ಹೌದು ಇತ್ತೀಚಿಗೆ ಮಾಧ್ಯಮದಲ್ಲಿ ಇವರು ದೇವಿ ವೇಷ ಹಾಕಿ ನೃತ್ಯ ಮಾಡಲು ಸಿದ್ಧರಾಗಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಡಿಯೋ ನೋಡಿದವರಿಗೆ ಖಂಡಿತ ಶಾಕ್ ಆಗುತ್ತೆ ಯಾಕಂದ್ರೆ ಸಾನಿಯಾ ದೇವಿಯ ಸ್ವರೂಪಿಣಿಯಾಗಿಯೇ ಕುಳಿತುಬಿಟ್ಟಿದ್ದರು.

ಸಾನಿಯಾ ಅಯ್ಯರ್ ಈಗಾಗಲೇ ತುಂಬಾನೇ ಫೇಮಸ್ ಆಗಿದ್ದಾರೆ. ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಬಾಲ ನಟಿಯಾಗಿ ಅಭಿನಯಿಸಿ ಕನ್ನಡಿಗರ ಮನ ಗೆದ್ದ ನಟಿ ಇವರು. ಅದಾದ ಬಳಿಕ ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನವಹಿಸಿದ ಸಾನಿಯಾ ಪತ್ರಿಕೋದ್ಯಮ ಪದವಿ ಕೂಡ ಪಡೆದಿದ್ದಾರೆ. ಇನ್ನು ಹಲವಾರು ಡ್ಯಾನ್ಸ್ ಶೋಗಳಲ್ಲಿ ನೃತ್ಯ ಸ್ಪರ್ಧಿಆಗಿಯೂ ಕೂಡ ಸಾನಿಯಾ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ನ ಓ ಟಿ ಟಿ ಎಲ್ಲಿ ಸ್ಪರ್ಧಿ ಆಗಿ ಎಂಟ್ರಿ ಕೊಟ್ಟ ಸಾನಿಯಾ ಅಯ್ಯರ್, ಟಾಪ್ ಫೋರ್ ನಲ್ಲಿಯು ಕೂಡ ಇದ್ದರು. ಕೊನೆಗೆ ಅಲ್ಲಿಂದಲೇ ಬಿಗ್ ಬಾಸ್ ಸೀಸನ್ 9 ಕೂಡ ಸ್ಪರ್ಧಿಯಾಗಿ ಆಯ್ಕೆಯಾದರು.

ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಮನೋರಂಜನೆ ನೀಡಿದ ಸಾನಿಯಾ ಇನ್ನೊಬ್ಬ ಸ್ಪರ್ಧೆ ಹಾಗೂ ಒಟಿಪಿ ವಿನ್ನರ್ ರೂಪೇಶ್ ಶೆಟ್ಟಿ ಜೊತೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ರೂಪೇಶ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ನಡುವೆ ಸ್ನೇಹಕ್ಕಿಂತ ಮಿಗಿಲಾಗಿದ್ದು ಇನ್ನೇನು ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ ನಮ್ಮಿಬ್ಬರ ನಡುವೆ ಇರೋದು ಕೇವಲ ಸ್ನೇಹ ಅಂತ ಊಹಾಪೋಹಗಳಿಗೆ ಸದ್ಯಕ್ಕೆ ವಿರಾಮ ಘೋಷಿಸಿದ್ದಾರೆ.

ಇದೀಗ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಸಾನಿಯಾ ಅಯ್ಯರ್ ಅವರ ಸಂದರ್ಶನ ಎಲ್ಲಾ ಮಾಧ್ಯಮಗಳಲ್ಲಿಯೂ ಮಾಡಲಾಗುತ್ತಿದೆ ಇದಕ್ಕೆ ಇನ್ನೊಂದು ಕಾರಣ ಅಂದ್ರೆ, ಸಾನಿಯಾ ಮೇಲೆ ದೇವಿ ಬರ್ತಾಳೆ ಅನ್ನುವ ವಿಷಯ. ಸಾನಿಯಾ ಅಯ್ಯರ್ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಭಾಗವಹಿಸಿದ್ದರು ಸಾನ್ಯ ಆ ಸಮಯದಲ್ಲಿ ದೇವಿಯೇ ಆಕೆಯ ಮೈಮೇಲೆ ಬಂದಿತ್ತಂತೆ.

Saniya iyer spirtual moment
Saniya iyer spirtual moment

ದೇವಿಯಂತೆ ಅಲಂಕಾರ ಮಾಡಿಕೊಂಡು ಕುಳಿತ ಸಾನಿಯಾ ಅಯ್ಯರ್ ಇನ್ನೇನು ನೃತ್ಯ ಮಾಡಲು ಹೋಗಬೇಕು ಎನ್ನುವಷ್ಟರಲ್ಲಿ ದೇವಿಯಂತೆ ಹಾವಭಾವ ಮಾಡಲು ಶುರು ಮಾಡಿದ್ದಾರೆ. ಇದಕ್ಕೆ ಮಾತನಾಡಿರುವ ಸಾನಿಯಾ, ನಾನು ನೃತ್ಯ ಮಾಡುವಾಗ ನಾನು ನಿನ್ನ ಪಾತ್ರ ಮಾಡುತ್ತಿದ್ದೇನೆ. ನೀನು ನನ್ನ ಮೈ ಮೇಲೆ ಬರಲೇಬೇಕು ಅದಕ್ಕಾಗಿ ಸಾಕಷ್ಟು ಜಪ ಮಾಡಿದೆ ಎಂದು ಸಾನಿಯಾ ಹೇಳಿದ್ದಾರೆ ಇದೇ ಕಾರಣಕ್ಕೆ ದುರ್ಗಾದೇವಿ ಸಾನಿಯಾ ಮೈ ಮೇಲೆ ಬಂದಿದ್ದಳಂತೆ.

ಸಾನಿಯಾ ಅಯ್ಯರ್ ದೇವಿಯಂತೆ ನಡೆದುಕೊಳ್ಳುತ್ತಿದ್ದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಡ್ಯಾನ್ಸು ಮಾಡುವಾಗ ಮನಸ್ಸಿನಲ್ಲಿ ಮೊದಲು ಬದಲಾವಣೆ ಶುರುವಾಯಿತು. ಆಮೇಲೆ ಅಳುವುದಕ್ಕೆ ಶುರುಮಾಡಿದೆ ಎನರ್ಜಿ ಆಗ ಡಬಲ್ ಆಯ್ತು ಕಂಟ್ರೋಲ್ ಮಾಡುವುದಕ್ಕೆ ಸಾಧ್ಯ ಇರಲಿಲ್ಲ ಎಂದು ಸಾನಿಯಾ ಹೇಳಿದ್ದಾರೆ.

ಸಾನಿಯಾ ಅಯ್ಯರ್ ಹಾಗೂ ಅವರ ಕುಟುಂಬ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿದ್ದಾರೆ. ಅತಿಯಾಗಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಳ್ಳುತ್ತಾರೆ ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹಾಗಾಗಿ ದೇವರು ನನಗೆ ಸ್ನೇಹಿತರು ಇದ್ದಂತೆ ಹಾಗಾಗಿ ದೇವಿ ಮೈಮೇಲೆ ಬಂದಿದ್ದು ಎಂದು ಸಾನಿಯಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 9ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಪುಟ್ಟಗೌರಿ ಮದುವೆ ಕಾವ್ಯಶ್ರೀ ಗೌಡ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

Leave A Reply

Your email address will not be published.