ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲವೆಂದು ಒಬ್ಬನನ್ನೇ ಕಟ್ಟಿಕೊಂಡ ಅವಳಿ ಹೆಣ್ಣು ಮಕ್ಕಳು… ಪತಿಯೊಬ್ಬ ಪತ್ನಿಯರು ಇಬ್ಬರು!!

0

ಜಾತಿ, ಧರ್ಮ, ವಯಸ್ಸು ಎಂಬ ಯಾವುದೇ ಭೇದವಿಲ್ಲದೆ ಉದಯಿಸುವುದು ಪ್ರೀತಿ. ಒಬ್ಬರ ಮೇಲೆ ಇಬ್ಬರಿಗೆ ಆಕರ್ಷಣೆಯಾಗಿ, ಪರಿಚಯವಾಗಿ ಸ್ನೇಹವು ಪ್ರೀತಿಯಾಗಿ ಪರಿವರ್ತನೆಗೊಳ್ಳುವುದು ಹೊಸತೇನಲ್ಲ. ಆದರೆ ಇನ್ನೊಬ್ಬರಿಗೂ ತನ್ನಂತೆ ಒಲವಾಗಿದೆ ಎಂದು ಅರ್ಥ ಮಾಡಿಕೊಂಡು, ಪ್ರೀತಿಯಾದ ಒಬ್ಬರ ಜೊತೆಗೆ ಇಬ್ಬರು ಹೊಂದಿಕೊಂಡು ಬಾಳೋಣ ಎಂದು ಮುಂದಾಗುವುದು ನಿಜಕ್ಕೂ ಅಚ್ಚರಿಯೇ ಸರಿ.

ಇದೊಂದು ವಿಭಿನ್ನ ಮದುವೆಯ ಕಥೆಯಾಗಿದ್ದು, ಅವಳಿ ಸಹೋದರಿಯರು ಒಬ್ಬನೇ ವರನನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷವೇನೆಂದರೆ ಇವರ ವಿವಾಹಕ್ಕೆ ಎರಡು ಕಡೆಯ ಕುಟುಂಬಸ್ಥರ ಒಪ್ಪಿಗೆಯಿದ್ದು, ಗುರು ಹಿರಿಯರ ಸಮ್ಮುಖದಲ್ಲಿಯೇ ನೆರವೇರಿದೆ. ಅಲ್ಲದೆ ವಿವಾಹವು ಅದ್ದೂರಿಯಾಗಿ ಆಗಿದ್ದು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮುಂಬೈನಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಐಟಿ ಇಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿರುವ ಅವಳಿ ಸಹೋದರಿಯರು ನೋಡಲು ಒಂದೇ ರೀತಿಯಾಗಿದ್ದಾರೆ. ಅವರ ಆಪ್ತರು ತಿಳಿಸುವಂತೆ ಇಬ್ಬರು ಹೆಣ್ಣು ಮಕ್ಕಳ ಗುಣ ಮತ್ತು ನಡವಳಿಕೆಗಳು ಕೂಡ ಒಂದೇ ತರನಾಗಿವೆಯಂತೆ. ಈ ಸಹೋದರಿಯರು ಮಹಾರಾಷ್ಟ್ರದ ಸೊಲ್ಲಾಪುರದ ಮಲಿಶಿರಾಸ್ ತಾಲೂಕಿನವನಾದ ಅತುಲ್ ಎಂಬುವವನನ್ನು ಪ್ರೀತಿಸಿ, ಇಬ್ಬರು ಅವನೊಂದಿಗೆ ಕೂಡಿ ಬಾಳೋಣವೆಂದು ಯೋಚಿಸಿ ವಿವಾಹವಾಗಿದ್ದಾರೆ. ಅತುಲ್ ಮುಂಬೈನ ಟ್ರಾವೆಲ್ ಬ್ಯುಸಿನೆಸ್ ಏಜೆನ್ಸಿ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನಂತೆ.

Mumbai man married twins
Man mmarried twins

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಇಬ್ಬರು ಅವಳಿ ಹೆಣ್ಣು ಮಕ್ಕಳನ್ನು ಒಬ್ಬನೇ ವರನನ್ನು ವಿವಾಹವಾಗಿದ್ದರಿಂದ ಯಾವಾಗ? ಹೇಗೆ ಪ್ರೀತಿ ಆಯಿತು? ಎಂದು ಕೇಳಿದಾಗ ಅತುಲ್, ‘ನನ್ನ ಇಬ್ಬರು ಪ್ರಿಯತಮೆಯರು ಸಹೋದರಿಯರು; ಕೆಲ ದಿನಗಳಿಂದ ಅಂದರೆ ಅವರ ತಂದೆ ತೀರಿಕೊಂಡಾಗಿನಿಂದಲೂ ತಾಯಿಯೊಂದಿಗೆ ವಾಸವಾಗಿದ್ದರು. ಹೀಗೆ ಒಂದು ದಿನ ಆ ಮನೆಯ ಮೂರು ಮಂದಿಗೂ ಆರೋಗ್ಯದಲ್ಲಿ ಏರುಪೇರು ಉಂಟಾಗಿ ನನ್ನದೇ ಕಾರಿನಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋದೆ. ಅದೇ ವೇಳೆಯಲ್ಲಿ ಆದ ಅವರಿಬ್ಬರ ಪರಿಚಯ ಪ್ರೀತಿಯಾಗಿ ಬೆಳೆಯಿತು’ ಎಂದಿದ್ದಾನೆ.

ನೆಟ್ಟಿಗರು ಈ ವಿವಾಹದ ಕುರಿತಾಗಿ ಹಲವಾರು ಕಾಮೆಂಟ್ಸ್ಗಳನ್ನು ಮಾಡಿದ್ದು, ಕೆಲವರು ಈ ಮದುವೆಗೆ ಕಾನೂನಾತ್ಮಕವಾಗಿ ಒಪ್ಪಿಗೆಯಿದೆಯೇ ಎಂದು ಪ್ರಶ್ನಿಸಿದ್ದಾರಂತೆ; ಇನ್ನು ಕೆಲವರು ಹಿಂದು ಸಾಂಪ್ರದಾಯವು ಈ ಮದುವೆಯನ್ನು ಸಮ್ಮತಿಸುತ್ತದೆಯೇ? ಎಂದು ಕೇಳಿದ್ದಾರಂತೆ; ಕೆಲವರು ವಿವಾಹದ ವಿಚಾರವಾಗಿ ತಮಾಷೆಯಾಗಿ ಮಾತನಾಡಿದ್ದಾರಂತೆ. ಈ ವಿವಾಹದ ವಿಚಾರಗಳು ಪ್ರಚಾರವಾಗುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆಯ ವತಿಯಿಂದ ತನಿಖೆಗಳು ನಡೆದವಂತೆ. ಆದರೆ ಯಾವುದೇ ಒತ್ತಾಯಕ್ಕೊಳಗಾದ ಅಥವಾ ಸಮಸ್ಯೆಯಿಂದಾದ ವಿವಾಹವೇ? ಎಂಬುದರ ಬಗ್ಗೆ ಸುಳಿವು ಸಿಗಲಿಲ್ಲವಂತೆ.

ಇದನ್ನ ಓದಿ : ಅನಾಥೇ ಎಂದು ಹೇಳಿಕೊಂಡು ನಾಲ್ಕು ಯುವಕರನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾದ ಖತರ್ನಾಕ್ ಲೇಡಿ

Leave A Reply

Your email address will not be published.