9ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಪುಟ್ಟಗೌರಿ ಮದುವೆ ಕಾವ್ಯಶ್ರೀ ಗೌಡ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

0

Biggboss kavyashree gowda remuneration : ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮ ಇನ್ನೇನು ಅಂತಿಮ ಘಟ್ಟವನ್ನು ತಲುಪುವಂತಹ ಹಂತದಲ್ಲಿದೆ. ಈಗಲೂ ಕೂಡ ಈ ದೊಡ್ಡಣ್ಣನ ಪಟ್ಟವನ್ನು ಯಾರು ಪಡೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇಂದಿಗೂ ಕೂಡ ಇದೆ. ಕಾರ್ಯಕ್ರಮ ಕೊನೆಯ ಹಂತವನ್ನು ತಲುಪಲು ಪ್ರಾರಂಭ ಆಗುತ್ತಿದ್ದಂತೆ ಕಾಂಪಿಟೇಶನ್ ಕೂಡ ಸ್ಪರ್ಧಿಗಳ ನಡುವೆ ಹೆಚ್ಚಾಗಿದೆ.

ಪ್ರವೀಣರು ಹಾಗೂ ನವೀನರ ನಡುವೆ ನಡೆಯುತ್ತಿರುವಂತಹ ಈ ಬಿಗ್ ಬಾಸ್ ಕಾಳಗ ಎನ್ನುವುದು ಪ್ರೇಕ್ಷಕರಲ್ಲಿ ಇನ್ನಷ್ಟು ರೋಚಕತೆಯನ್ನು ಸೃಷ್ಟಿಸಿದೆ ಎಂದು ಹೇಳಬಹುದಾಗಿದೆ. ಇನ್ನೂ ಇದರ ನಡುವೆ ಈ ವಾರಾಂತ್ಯದಲ್ಲಿ ಈಗ ಪುಟ್ಟಗೌರಿ ಮದುವೆ ಖ್ಯಾತಿಯ ನಟಿ ಆಗಿರುವ ಕಾವ್ಯಶ್ರೀ ಗೌಡ ಅವರು ಎಲಿಮಿನೇಟ್ ಆಗಿ ಹೋಗಿದ್ದಾರೆ. ಕಾವ್ಯಶ್ರೀ ಗೌಡ ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಯಾರು ಕೂಡ ಊಹಿಸಿರಲಿಲ್ಲ.

Biggboss kavyashree gowda
Biggboss kavyashree gowda remuneration

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಆಗಿರುವ ಪುಟ್ಟಗೌರಿ ಮದುವೆಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆಯನ್ನು ಪಡೆದಿದ್ದ ಕಾವ್ಯಶ್ರೀ ಗೌಡ ಅವರು ಈ ಬಾರಿಯ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 9ರ 9ನೇ ವಾರದಂದು ಕಾವ್ಯಶ್ರೀ ಗೌಡ ಅವರು ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಕಾವ್ಯಶ್ರೀ ಗೌಡ ಅವರು ಪಡೆದುಕೊಂಡಿರುವ ಒಟ್ಟಾರೆ ಸಂಭಾವನೆ ಎಷ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

Biggboss kavyashree gowda remuneration

9ನೇ ವಾರದಂದು ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಕಾವ್ಯಶ್ರೀ ಗೌಡ ಅವರು ವಾರಕ್ಕೆ ಮೂರು ಲಕ್ಷ ರೂಪಾಯಿ ಅಂತೆ ಒಟ್ಟಾರೆಯಾಗಿ 9 ವಾರಗಳಿಗೆ 27 ಲಕ್ಷ ಸಂಭಾವನೆಯನ್ನು ಎಲಿಮಿನೇಷನ್ ಆಗಿ ಸಂಪಾದಿಸಿದ್ದಾರೆ. ನಿಜಕ್ಕೂ ಕೂಡ ಇದೊಂದು ದೊಡ್ಡ ಮೊತ್ತವೇ ಸರಿ ಎಂದು ಹೇಳಬಹುದಾಗಿದೆ. ಇನ್ನು ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ಅನ್ನು ಯಾರು ಗೆಲ್ಲಬಹುದು ಎಂಬುದನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಇದನ್ನೂ ಓದಿ : ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತಾ ಅಬ್ಬಬ್ಬ ಇಷ್ಟೊಂದಾ?

Leave A Reply

Your email address will not be published.