ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವ ಹುಡುಗಿಯ ಒಟ್ಟಾರೆ ಆಸ್ತಿಯ ವಿವರ ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ!

0

Abhishek ambareesh fiance networth : ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ಈಗಾಗಲೇ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಅಮರ್ ಚಿತ್ರದ ಮೂಲಕ ಕಾಲಿಟ್ಟು ಈಗಾಗಲೇ ಕೈಯಲ್ಲಿ ಮೂರರಿಂದ ನಾಲ್ಕು ಸಿನಿಮಾಗಳನ್ನು ಹೊಂದಿರುವ ಬಹು ಬೇಡಿಕೆಯ ಯುವ ಉದಯೋನ್ಮುಖ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮೆರೆಯುತ್ತಿರುವ ಸಂದರ್ಭದಲ್ಲಿಯೇ ಅವರ ಬಗ್ಗೆ ಕೆಲವೊಂದು ಗಾಳಿ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಡಿದ್ದವು.

ಅದೇನೆಂದರೆ ಅಭಿಷೇಕ್ ಅಂಬರೀಶ್ (Abhishek ambareesh) ಅವರು ಅತಿ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಎಂಬುದಾಗಿ. ಮೊದಲಿಗೆ ಅಭಿಷೇಕ್ ಅಂಬರೀಶ್ ಅವರು ಈ ವಿಚಾರವನ್ನು ದೂರ ತಳ್ಳುತ್ತಲೇ ಬಂದಿದ್ದರು. ಆದರೆ ನಂತರ ಅಧಿಕೃತವಾಗಿಯೇ ಅಭಿಷೇಕ್ ಅಂಬರೀಶ್ ಅವರು ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ಅವರ ಮಗಳಾಗಿರುವ ಅವಿವಾ ಬಿದ್ದಪ್ಪ (aviva bidapa) ಅವರನ್ನು ಮದುವೆಯಾಗಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಕಾರ್ಯಕ್ರಮ ಜರುಗಲಿದೆ ಎಂಬುದಾಗಿ ತಿಳಿದು ಬಂದಿದೆ.

Abhishek ambareesh and aviva bidaoa
Aviva bidapa

ಕೇವಲ ಇಷ್ಟು ಮಾತ್ರವಲ್ಲದೆ ಅಭಿಷೇಕ್ ಅಂಬರೀಶ್ ಅವರಿಗಿಂತ ಅವಿವಾ ಬಿದ್ದಪ್ಪ ಅವರು ವಯಸ್ಸಿನಲ್ಲಿ ಮೂರು ವರ್ಷ ದೊಡ್ಡವರು ಎಂಬುದಾಗಿ ಕೂಡ ತಿಳಿದುಬಂದಿದೆ. ಇಬ್ಬರೂ ಕೂಡ ಸಾಕಷ್ಟು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದು ಸೈಲೆಂಟ್ ಆಗಿಯೇ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು ಅವಿವ ಬಿದ್ದಪ್ಪ ಮಾಡಲಿಂಗ್ ಕ್ಷೇತ್ರದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರನ್ನು ಮಾಡಿರುವಾಕೆ. ಇನ್ನು ಅವರ ಆಸ್ತಿಯ ಒಟ್ಟಾರೆ ಮೌಲ್ಯವನ್ನು ತಿಳಿದುಕೊಳ್ಳೋಣ ಬನ್ನಿ.

Abhishek ambareesh fiance networth

ಶ್ರೀಮಂತ ತಂದೆಯ ಮಗಳಾಗಿರುವ ಅವಿವಾ ಬಿದ್ದಪ್ಪ ಅವರ ಹೆಸರಿನಲ್ಲಿ ಒಟ್ಟಾರೆಯಾಗಿ 230 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಇದೆ. ಡಿಸೆಂಬರ್ ಎರಡನೇ ವಾರದಲ್ಲಿ ಎಂಗೇಜ್ಮೆಂಟ್ ನಡೆಯಲಿದ್ದು ವರ್ಷದ ಆರಂಭದಲ್ಲಿಯೇ ಮದುವೆ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇವರಿಬ್ಬರ ಮದುವೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತಾ ಅಬ್ಬಬ್ಬ ಇಷ್ಟೊಂದಾ?

Leave A Reply

Your email address will not be published.