ಒಂದೇ ತಾರೀಖಿನಲ್ಲಿ ಜನಿಸಿದ ಮೂರು ಕನ್ನಡದ ಸ್ಟಾರ್ ನಟರ ಸತತ ಸಾವಿನ ಸುದ್ದಿ. ಈ ಸಂಖ್ಯೆಯಲ್ಲಿ ದೋಷ ಇದೆಯಾ?

0

Puneet rajkumar chiru sarja and sanchari vijay : ಲಾಕ್ ಡೌನ್ ಗೂ ಮುನ್ನ ನಮ್ಮ ಕನ್ನಡ ಚಿತ್ರರಂಗ ಯಾವುದೇ ಸಮಸ್ಯೆ ಇಲ್ಲದೆ ಯಾವುದೇ ದುಃಖದ ಸುದ್ದಿ ಇಲ್ಲದೆ ಸಂತೋಷವಾಗಿ ಒಳ್ಳೆಯ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿತ್ತು ಎಂದರು ತಪ್ಪಾಗಲಾರದು. ನಂತರ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಂದೊಂದೇ ಸ್ಟಾರ್ ನಟರ ಮರಣದ ಸುದ್ದಿಗಳು ಕನ್ನಡ ಚಿತ್ರರಂಗದ ಪ್ರೇಕ್ಷಕರು ಹಾಗೂ ಕನ್ನಡಿಗರನ್ನು ಇನ್ನಿಲ್ಲದಂತೆ ಕಾಡಿತು. ಅದರಲ್ಲಿಯೂ ವಿಶೇಷವಾಗಿ ಮೂರು ಕನ್ನಡ ಚಿತ್ರರಂಗದ ಸ್ಟಾರ್ ನಟರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತು.

ಮೊದಲಿಗೆ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟ ಆಗಿದ್ದ ಚಿರು ಸರ್ಜಾ ಅವರನ್ನು ಕನ್ನಡ ಚಿತ್ರರಂಗ ಮೊದಲಿಗೆ ಕಳೆದುಕೊಂಡಿತು. ಅದಾದ ನಂತರ ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾನ್ವಿತ ಕಲಾವಿದ ಆಗಿದ್ದ ಸಂಚಾರಿ ವಿಜಯ್ ಅವರನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತು. ಅದಾಗಿ ಕೆಲವೇ ಸಮಯಗಳ ನಂತರ ಅಂದರೆ ಕಳೆದ ವರ್ಷದ ಅಕ್ಟೋಬರ್ 29ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಮೂರು ಜನ ಸ್ಟಾರ್ ನಟರನ್ನು ವರ್ಷಗಳ ಅಂತರದಲ್ಲಿ ನಾವು ಕಳೆದುಕೊಂಡಿದ್ದೇವೆ.

Puneet rajkumar chiru sarja and sanchari vijay
Puneet rajkumar chiru sarja and sanchari vijay

ಈ ಮೂರು ಸ್ಟಾರ್ ನಟರ ಮರಣದ ವಿಚಾರದಲ್ಲಿ ಒಂದು ಸ್ವಾಮ್ಯತೆ ಇದೆ ಎನ್ನುವುದಾಗಿ ಹೇಳಬಹುದಾಗಿದೆ. ಅದೇನೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿರು ಸರ್ಜಾ ಹಾಗೂ ಸಂಚಾರಿ ವಿಜಯ್ ಅವರ ಮರಣದ ಸಮಯ ಕೂಡ ಸಾಕಷ್ಟು ಹತ್ತಿರದ ಅಂತರವನ್ನು ಹೊಂದಿದೆ. ಕೇವಲ ಇಷ್ಟು ಮಾತ್ರವಲ್ಲದೆ ಮೂವರ ಜನ್ಮ ದಿನಾಂಕದ ಸಂಖ್ಯೆ ಕೂಡ ಒಂದೇ ಆಗಿದೆ. ಅಪ್ಪು 1975ರ ಮಾರ್ಚ್ 17ರಂದು ಜನಿಸಿದ್ದಾರೆ. ಚಿರು ಸರ್ಜಾ 1984ರ ಅಕ್ಟೋಬರ್ 17ರಂದು ಜನಿಸಿದ್ದಾರೆ. ಸಂಚಾರಿ ವಿಜಯ್ 1983 ಜುಲೈ 17ರಂದು ಜನಿಸಿದ್ದಾರೆ.

ಅಂದರೆ ಒಟ್ಟಾರೆಯಾಗಿ ನಾವು ಸೂಕ್ಷ್ಮವಾಗಿ ಗಮನಿಸುವುದಾದರೆ ಮೂರು ಕನ್ನಡದ ಸ್ಟಾರ್ ನಟರು ಕೂಡ 17ನೇ ತಾರೀಖಿನಂದು ಜನಿಸಿದ್ದಾರೆ. ಈ ಸಂಖ್ಯೆಯಲ್ಲಿ ಸಂಖ್ಯಾಶಾಸ್ತ್ರದ ಪ್ರಕಾರ ದೋಷ ಇದೆಯಾ ಎಂಬುದೇ ಎಲ್ಲರ ಪ್ರಶ್ನೆಗೆ ಸಿಗದಂತಹ ಉತ್ತರವಾಗಿದೆ. ಅದೇನೇ ಇರಲಿ ಕನ್ನಡ ಚಿತ್ರರಂಗ ಈ ಮೂರು ಸ್ಟಾರ್ ನಟರನ್ನು ಕಳೆದುಕೊಂಡು ಆ ಸ್ಥಾನವನ್ನು ತುಂಬಲಾಗದಂತಹ ಪರಿಸ್ಥಿತಿಯಲ್ಲಿ ಸಿಲುಕಿದೆ ಎನ್ನಬಹುದಾಗಿದೆ. ಈ ಸಂಖ್ಯೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ಇದನ್ನೂ ಓದಿ : ಯಾವನೂ ನನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿಲ್ಲ. ಗಿಮಿಕ್ ನ್ಯೂಸ್ ಹಾಕಬೇಡಿ ಎಂದು ಕಣ್ಣೀರಿಟ್ಟ ಜನತೆ!

Leave A Reply

Your email address will not be published.