ಮಗಳು ಐರಾ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ

0

Yash daughter ayra birthday : ರಾಕಿಂಗ್ ಸ್ಟಾರ್ ಯಶ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ವರ್ಷ ಕೆಜಿಎಫ್ ಚಾಪ್ಟರ್ 2 ಚಿತ್ರದ ಗೆಲುವಿನೊಂದಿಗೆ ಸೂಪರ್ ಖುಷ್ ಆಗಿದ್ದಾರೆ. ಇದರ ಜೊತೆಯಲ್ಲಿಯೇ ಈಗ ಅವರ ಮುಂದಿನ ಸಿನಿಮಾದ ಬಗ್ಗೆ ಕೂಡ ಅಭಿಮಾನಿಗಳಲ್ಲಿ ಕಾತುರತೆ ಹೆಚ್ಚಾಗಿದೆ ಎಂದು ತಪ್ಪಾಗಲಾರದು.

ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯಕ್ಕೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವ ನಟ ಆಗಿದ್ದಾರೆ. ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಒಬ್ಬ ಫ್ಯಾಮಿಲಿ ಮ್ಯಾನ್ ಆಗಿಯೂ ಕೂಡ ಅವರು ಪರ್ಫೆಕ್ಟ್ ಆಗಿದ್ದಾರೆ. ಚಿತ್ರರಂಗದ ಆರಂಭದಲ್ಲಿ ಪರಿಚಿತರಾಗಿ ಪ್ರೀತಿಸಿದ್ದ ರಾಧಿಕಾ ಪಂಡಿತ್ ಅವರನ್ನೇ ಮದುವೆಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬೆಸ್ಟ್ ಜೋಡಿಗಳಲ್ಲಿ ಮಿಸ್ಟರ್ ಅಂಡ್ ಮಿಸ್ಸೆಸ್ ಯಶ್ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಐರಾ ಎನ್ನುವ ಹೆಣ್ಣು ಮಗಳು ಹಾಗೂ ಯಥರ್ವ್ ಎನ್ನುವ ಗಂಡು ಮಗ ಕೂಡ ಇದ್ದಾನೆ. ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ ಎನ್ನುವಂತೆ ಸ್ವೀಟ್ ಅಂಡ್ ಸಿಂಪಲ್ ಕುಟುಂಬವನ್ನು ರಾಕಿಂಗ್ ಸ್ಟಾರ್ ಯಶ್ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ಇತ್ತೀಚಿಗಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಗಳಾಗಿರುವ ಐರಾ ಅವರ ಜನ್ಮದಿನವನ್ನು ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಿದ್ದಾರೆ.

Yash daughter ayra birthday celebration

Ayra bbirthday video

ತಮ್ಮ ಮಗಳ ಜನ್ಮದಿನಾಚರಣೆಯನ್ನು ಕುಟುಂಬಸ್ಥರು ಸ್ನೇಹಿತರು ಹಾಗೂ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಯಶ್ ಅವರು ಅದ್ಧೂರಿಯಾಗಿ ಆಚರಿಸಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಎಲ್ಲರೂ ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ತಮ್ಮ ಮೆಚ್ಚುಗೆಯನ್ನು ಸಲ್ಲಿಸುತ್ತಿದ್ದಾರೆ. ನೀವು ಕೂಡ ಈ ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಗಳ ಜನ್ಮ ದಿನಾಚರಣೆಯನ್ನು ಹೇಗೆ ಅದ್ದೂರಿಯಾಗಿ ಆಚರಿಸಿದ್ದಾರೆ ಎಂಬ ಝಲಕ್ ಅನ್ನು ನೋಡಬಹುದಾಗಿದೆ.

ಇದನ್ನು ಓದಿ : ವಿಷ್ಣು ದಾದಾ ಅವರ ಮತ್ತೋರ್ವ ಪುತ್ರಿ ಯಾರು ? ಎಲ್ಲಿದ್ದಾರೆ ? ಆಕೆಗೆ ಮದುವೆಯಾಗಿದೆಯೇ?

Leave A Reply

Your email address will not be published.