ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹರಿಪ್ರಿಯ ಹಾಗೂ ವಶಿಷ್ಟ ಸಿಂಹ ಅವರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

0

Vasishta simha and haripriya age difference : ನಟ ವಸಿಷ್ಠ ಸಿಂಹ ರವರು ಕನ್ನಡ ಚಿತ್ರರಂಗದ ವಿಭಿನ್ನ ಪ್ರತಿಭೆಯನ್ನು ಹೊಂದಿರುವ ಹಾಗೂ ಗರುಡ ಕಂಠವನ್ನು ಹೊಂದಿರುವಂತಹ ಪ್ರತಿಭೆ. ಇನ್ನು ನಟಿ ಹರಿಪ್ರಿಯಾ ಅವರು ಈಗಾಗಲೇ ಬಹುಭಾಷಾ ತಾರೆಯಾಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಇಬ್ಬರೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಬ್ಬರ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಾಳಿ ಸುದ್ದಿಗಳು ಓಡಾಡುತ್ತಿದ್ದವು.

ಎಲ್ಲರೂ ಕೂಡ ಇವರಿಬ್ಬರ ಎಂಗೇಜ್ಮೆಂಟ್ ಅತಿ ಶೀಘ್ರದಲ್ಲೇ ನಡೆಯಲಿದೆ. ಆದಷ್ಟು ಬೇಗ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಓಡಾಡುತ್ತಿದ್ದವು. ಕೊನೆಗೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದ ಗಾಳಿ ಸುದ್ದಿಗಳು ನಿಜವಾಗಿವೆ. ಇಬ್ಬರೂ ಕೂಡ ತಮ್ಮ ಆಪ್ತರು ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಪೂರೈಸಿದ್ದಾರೆ.

ನಟಿ ಹರಿಪ್ರಿಯಾ ಅವರು ಕೂಡ ಇದನ್ನು ಸೂಚಿಸುವಂತಹ ಫೋಟೋವನ್ನು ಪರೋಕ್ಷವಾಗಿ ಕ್ಯಾಪ್ಶನ್ ನೀಡುವ ಮೂಲಕ ಪೋಸ್ಟ್ ಮಾಡಿದ್ದಾರೆ. ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಕೂಡ ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮದ ಕುರಿತಂತೆ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿ ಯಾಗುತ್ತಿದೆ.

Vasishta simha and haripriya age difference
Vasishta simha and haripriya age difference

Vasishta simha and haripriya age difference

ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಕುರಿತಂತೆ ಕೂಡ ಜೋರಾಗಿ ಚರ್ಚೆ ನಡೆಯುತ್ತಿದೆ. ಸಿಕ್ಕಿರುವ ಮಾಹಿತಿಗಳ ಪ್ರಕಾರ ಹರಿಪ್ರಿಯಾ ಅವರು ವಸಿಷ್ಟ ಸಿಂಹ ಅವರಿಗಿಂತ ವಯಸ್ಸಿನಲ್ಲಿ ಮೂರು ವರ್ಷ ಚಿಕ್ಕವರು. ಎಂಗೇಜ್ಮೆಂಟ್ ಈಗಾಗಲೇ ನಡೆದಿದ್ದು ಇವರಿಬ್ಬರ ಮದುವೆ ದಿನಾಂಕ ಇನ್ನೂ ಕೂಡ ನಿಗದಿಯಾಗಿಲ್ಲ. ಅತಿ ಶೀಘ್ರದಲ್ಲೇ ಇವರಿಬ್ಬರೂ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿ ಎಂಬುದಾಗಿ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇದನ್ನ ಓದಿ: ಮಗಳು ಐರಾ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ

Leave A Reply

Your email address will not be published.