ಯಾವನೂ ನನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿಲ್ಲ. ಗಿಮಿಕ್ ನ್ಯೂಸ್ ಹಾಕಬೇಡಿ ಎಂದು ಜನತೆ ಮುಂದೆ ಕಣ್ಣೀರಿಟ್ಟ ರವಿ ಮಾಮ !

0

Ravichandran about his house loan : ಇತ್ತಿಚೀಗೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೆಸರು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ, ಆದರೆ ಸಿನಿಮಾದಿಂದ ಅಲ್ಲ, ಬದಲಿಗೆ ಅವರಿಗೆ ಕಷ್ಟ ಇದೆ, ಹಣಕ್ಕಾಗಿ ಸಿಕ್ಕಾಪಟ್ಟೆ ತೊಂದರೆ ಅನುಭವಿಸುತ್ತಿದ್ದಾರೆ, ಹಾಗಾಗಿ ಅವರಿಗೆ ಸಾಕಷ್ಟು ಜನ ಸಹಾಯ ಮಾಡಿದ್ದಾರೆ ಮನೆ, ಕಾರು ಎಲ್ಲವನ್ನು ಮಾರಾಟ ಮಾಡಿದ್ದಾರೆ.. ಹೀಗೆ ರವಿ ಚಂದ್ರನ್ ಅವರ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡುತ್ತಿವೆ. ಇದರಲ್ಲಿ ಕೆಲವು ಸತ್ಯವೂ ಇರಬಹುದು ಆದರೆ, ಸ್ಯಾಂಡಲ್ ವುಡ್ ಕಂಡ ಅತ್ಯದ್ಭುತ ಪ್ರತಿಭೆ ರವಿಚಂದ್ರನ್ ಅವರು ಇಂದು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಮಾತ್ರ ಸುಳ್ಳು. ಇಷ್ಟು ವರ್ಷ ಅವರು ಸಿನಿಮಾ ಕಾಗೆ ಜೀವನವನ್ನು ಮುಡುಪಾಗಿಟ್ಟವರು ಅಂದಮೇಲೆ ಸಿನಿಮಾ ಅನ್ನುವುದು ಅವರನ್ನು ಅಷ್ಟು ತಳಕ್ಕೆ ತಳ್ಳಲು ಸಾಧ್ಯವಿಲ್ಲ ಅಲ್ವೇ?!

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಒಬ್ಬ ಅತ್ಯದ್ಭುತ ಕಲಾಕಾರ. ಅವರಲ್ಲಿ ಒಬ್ಬ ನಟನಿದ್ದಾನೆ, ನಿರ್ದೇಶಕನಿದ್ದಾನೆ, ನಿರ್ಮಾಪಕನಿದ್ದಾನೆ, ತಂತ್ರಜ್ಞನಿದ್ದಾನೆ. ಇವರಿಗೆ ಕನ್ನಡದಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳನ್ನು ತಂದ ಕೀರ್ತಿ ಇವರದ್ದು ಬಾಲಿವುಡ್ ನಟಿಯರನ್ನ ಕನ್ನಡ ಸಿನಿಮಾಕ್ಕೆ ತರುವುದು ಆಗಿರಬಹುದು ಅಥವಾ ಪಾನ್ ಇಂಡಿಯಾ ಸಿನಿಮಾಕ್ಕೆ ಹಾಕುವ ದೊಡ್ಡ ಬಜೆಟ್ ಸಿನಿಮಾ ನಿರ್ಮಾಣ ಮಾಡುವುದಿರಬಹುದು, ಇವೆಲ್ಲವನ್ನು ರವಿಚಂದ್ರನ್ ಬಹಳ ವರ್ಷಗಳ ಹಿಂದೆಯೇ ಮಾಡಿದ್ದಾರೆ 90ರ ದಶಕದಲ್ಲಿ ಅವರು ಸಾಕಷ್ಟು ಸಿನಿಮಾಗಳನ್ನ ಮಾಡಿ ಗೆದ್ದಿದ್ದಾರೆ. ಆದರೆ ಇತ್ತೀಚಿಗೆ ಅವರಿಗೆಲ್ಲ ಕೈ ಕೊಡುತ್ತಿದೆ ಅಥವಾ ಅಭಿಮಾನಿಗಳು ರವಿಚಂದ್ರನ್ ಅವರಿಂದ ಬೇರೇನನ್ನೋ ನಿರೀಕ್ಷೆ ಮಾಡುತ್ತಿದ್ದಾರೆ ಹಾಗಾಗಿ ಅವರ ಇತ್ತೀಚಿಗಿನ ಸಿನಿಮಾಗಳು ಸೋಲುತ್ತಿವೆ.

Ravichandran about his house loan

ಒಂದಾದ ಮೇಲೆ ಒಂದು ಸಿನಿಮಾ ಸೋಲುತ್ತಿರುವ ಹಿನ್ನೆಲೆಯಲ್ಲಿ ರವಿಚಂದ್ರನ್ ಅವರು ಆರ್ಥಿಕವಾಗಿ ಸ್ವಲ್ಪ ಕಷ್ಟಪಟ್ಟಿದ್ದು ನಿ.ಜ ಆಗ ಅವರ ಹಿಂದೆ ನಿಂತಿದೆ ಸಾಕಷ್ಟು ಸ್ನೇಹಿತರು ಹಾಗೂ ಅಭಿಮಾನಿಗಳು ಅವರು ಸಾಕಷ್ಟು ಸಲ ಹೇಳಿದ್ದಾರೆ. ’ನನಗೆ ದುಡ್ಡು ಕೊಟ್ಟವರು ವಾಪಸ್ ಕೇಳುವುದು ಇಲ್ಲ ಅಷ್ಟರಮಟ್ಟಿಗೆ ಅಭಿಮಾನ ಬೆಳೆಸಿಕೊಂಡಿದ್ದಾರೆ ನನ್ನ ಜೊತೆಗೆ ಕೆಲಸ ಮಾಡುತ್ತಿದ್ದವರು ಕೂಡ ಇಂದು ಹಣ ಕೊಟ್ಟು ಸಿನಿಮಾ ಮಾಡಿ ಎಂದು ಹೇಳುತ್ತಾರೆ. ಇದಕ್ಕಿಂತ ನನಗೆ ಇನ್ನೇನು ಬೇಕು ರವಿಚಂದ್ರನ್ ಎಲ್ಲವನ್ನು ಕಳೆದುಕೊಂಡಿದ್ದಾರೆ ಅವರಿಗೆ ಅಷ್ಟು ಸಹಾಯ ಮಾಡಿದ್ದಾರೆ ಇಷ್ಟು ಸಹಾಯ ಮಾಡಿದ್ದಾರೆ ಎಂದೆಲ್ಲ ಹೇಳುತ್ತಾ.ರೆ ಅದೆಲ್ಲವೂ ಸುಳ್ಳು. ನನಗೆ ಸ್ನೇಹಿತರು ಇದ್ದಾರೆ ಬೇಕಾದಾಗ ಸಹಾಯ ಮಾಡುತ್ತಾರೆ ನಿಜ ಆದರೆ ಇಂದು ಎಲ್ಲವನ್ನ ಕಳೆದುಕೊಂಡು ನಾನು ನಿಂತಿಲ್ಲ.

ಅಂತ ಪರಿಸ್ಥಿತಿ ಬರುವುದು ಬೇಡ, ಅಂತ ಪರಿಸ್ಥಿತಿಯಲ್ಲಿ ನಾನಿಲ್ಲ. ಇಷ್ಟು ವರ್ಷ ನಾನು ಸಂಪಾದನೆ ಮಾಡಿದ್ದು ಹಣವನಲ್ಲ. ನಿಮ್ಮೆಲ್ಲರ ನಂಬಿಕೆ ಈ ಜೀವನಕ್ಕೆ ಅದು ಸಾಕು ಅಷ್ಟೇ, ಬೇರೇನು ಬೇಡ’ ಹೀಗೆ ಭಾವುಕವಾಗಿ ಕಾರ್ಯಕ್ರಮ ಒಂದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿದ್ದಾರೆ. ಅವರ ಮಾತುಗಳನ್ನು ಕೇಳಿ ಅಭಿಮಾನಿಗಳು ಚಪ್ಪಾಳೆಯ ಸುರಿಮಳೆ ಗೈದಿದ್ದಾರೆ. ರವಿಚಂದ್ರನ್ ಅವರ ಸಿನಿಮಾ ಸೋಲುತ್ತಿರಬಹುದು ಆದರೆ ಅವರಿಗೆ ಸೋಲಿಲ್ಲ ಅವರು ಇಷ್ಟು ವರ್ಷ ಕನ್ನಡದಲ್ಲಿ ಮೂಡಿಸಿದ ಇಂಪ್ರೆಶನ್ ಯಾವಾಗಲೂ ಹಾಗೆ ಇರುತ್ತದೆ.

ಇದನ್ನೂ ಓದಿ : ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹರಿಪ್ರಿಯ ಹಾಗೂ ವಶಿಷ್ಟ ಸಿಂಹ ಅವರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

Leave A Reply

Your email address will not be published.