ಪುನೀತ್ ಅವರು ಕೊನೆಯದಾಗಿ ದರ್ಶನ ಪಡೆದ ಆಂಜನೇಯ ಸ್ವಾಮಿಯ ದೇವಸ್ಥಾನ ಎಲ್ಲಿದೆ ಗೊತ್ತಾ?

0

ನಮಸ್ತೆ ಸ್ನೇಹಿತರೇ.. ಕಹಿಯಾದ ಘಟನೆಯೊಂದು ನಡೆದು ವರ್ಷವೇ ಕಳೆಯುತ್ತಾ ಬಂದರು ಯಾರಿಗೂ ಇನ್ನು ದುಃಖ ಮಾಸಿಲ್ಲ. ಪುನೀತ್ ರಾಜಕುಮಾರ್ ಅವರು ಎಲ್ಲವನ್ನು ತೊರೆದು ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ತೆರಳಿದಾಗ ಇಡೀ ಕರ್ನಾಟಕದಲ್ಲಿ ಮೌನ ಆವರಿಸಿತ್ತು. ಇಂದಿಗೂ ಪುನೀತ್ ಅವರು ದೈಹಿಕವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗದೆ ಹೊಸದೊಂದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಎಂದುಕೊಂಡೆ ಬದುಕುತ್ತಿರುವವರಿದ್ದಾರೆ.

ವರ್ಷಾನುಗಟ್ಟಲೆ ಒಬ್ಬ ನಟನ ಸಿನಿಮಾಗಳು ಬಾರದೇ ಇದ್ದಲ್ಲಿ ಜನರು ಆತನನ್ನು ಮರೆಯುತ್ತಾರೆ ಎನ್ನಲಾಗುತ್ತಿತ್ತು. ಆದರೆ ಆ ಮಾತು ಸುಳ್ಳು ಎಂಬುದು ಖಚಿತವಾಗಿದೆ; ಡಾ. ರಾಜ್‌ಕುಮಾರ್, ಶಂಕರ್ ನಾಗ್, ವಿಷ್ಣು ದಾದಾ, ಅಂಬರೀಶ್ ಇವರ ಸಿನಿಮಾಗಳು ಬಾರದೆ ಎಷ್ಟೋ ವರ್ಷಗಳು ಕಳೆದರೂ ಅಭಿಮಾನಿಗಳು ಇವರ ಚಿಕ್ಕ ನೆನಪನ್ನು ಕೂಡ ಮರೆತಿಲ್ಲ.

ಅಭಿಮಾನಿಗಳು ಒಮ್ಮೆ ಮನಸ್ಸು ನೀಡಿದರೆ ಮುಗಿಯಿತು ಆ ಕಲಾವಿದರನ್ನು ಮರೆಯುವ ಮಾತೇ ಇಲ್ಲ. ಪುನೀತ್ ರಾಜಕುಮಾರ್ ಅವರ ವಿಚಾರವಾಗಿ ಅಭಿಮಾನಿಗಳಿಗಿನ್ನು ಅಪ್ಪು ಸರ್ ಚಿರ ನಿದ್ರೆಗೆ ಜಾರಿದ್ದಾರೆ ಎಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಪುನೀತ್ ರಾಜಕುಮಾರ್ ಅವರು ಬಾಲ್ಯ ನಟನಾಗಿ ಚಿತ್ರಗಳಲ್ಲಿ ಕಾಣಿಸಿಕೊಂಡಾಗಲೇ ಇವರೊಬ್ಬ ಸ್ಟಾರ್ ನಟನಾಗಬಹುದು ಎಂದು ಊಹಿಸಿದ್ದರಂತೆ. ಅಂತಯೇ ಪುನೀತ್ ರಾಜಕುಮಾರ್ ಅವರು ಅಪ್ಪು ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡು ಕೋಟಿ ಕೋಟಿ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಮಕ್ಕಳಿಂದ ಮುದುಕರವರೆಗೂ ಇಷ್ಟಪಡುವಂತಹ ಚಿತ್ರಕಥೆಗಳಲ್ಲಿ ನಾಯಕನಾಗಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದರು. ಒಬ್ಬ ಯಶಸ್ವಿ ನಟನಾಗಿ ಬೆಳೆದು ಇಂದು ಕಣ್ಮರೆಯಾಗಿರುವುದು ಅತ್ಯಂತ ನೋವಿನ ಸಂಗತಿ.

ಪುನೀತ್ ರಾಜಕುಮಾರ್ ಅವರಿಗೆ ದೇವರಲ್ಲಿ ಅಪಾರ ಭಕ್ತಿಯಿತ್ತು. ದೇವಸ್ಥಾನಗಳಿಗೆ ಭೇಟಿ ನೀಡಿ ತಂದೆಯಂತೆಯೇ ಹಾಡುಗಳನ್ನು ಹಾಡಿ ಮೈಮರೆತ ಉದಾಹರಣೆಗಳು ಇವೆ. ಇವರು ಭೇಟಿ ನೀಡಿದಂತ ಆಂಜನೇಯ ಸ್ವಾಮಿಯ ದೇವಸ್ಥಾನವು ಧಾರವಾಡದ ನುಗ್ಗೆಕೇರಿಯಲ್ಲಿದೆ.

When Puneet rajkumar visited hanuman temple

ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಆಂಜನೇಯ (hanuman) ಸ್ವಾಮಿಯಲ್ಲಿ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಬರುವ ಹರಕೆಯನ್ನು ಹೊರುತ್ತಾರೆ. ಅಂತೆಯೇ ಪುನೀತ್ ರಾಜಕುಮಾರ್ (Puneet rajkumar) ಅವರು ಯುವರತ್ನ ಚಿತ್ರದಲ್ಲಿ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದು, ಚಿತ್ರದ ಯಶಸ್ವಿಗಾಗಿ ಬೇಡಿಕೊಂಡು ಆಂಜನೇಯ ಸ್ವಾಮಿ ದೇವರ ದರ್ಶನಕ್ಕೆ ಪತ್ನಿ ಅಶ್ವಿನಿ ಅವರೊಂದಿಗೆ ಬಂದಿದ್ದರು. ವಿಶೇಷ ಪೂಜೆ ಮಾಡಿಸಿ ಪ್ರಸಾದ ಪಡೆದುಕೊಂಡು ಮರಳಿದ್ದರು. ಪುನೀತ್ ರಾಜಕುಮಾರ್ ಅವರು ಧಾರವಾಡದ ನುಗ್ಗೆಕೇರಿಯಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಪುನೀತ್ ಅವರ ಭಕ್ತಿಯನ್ನು ನೋಡಿ ಹರ್ಷಗೊಂಡಿದ್ದಾರೆ.

ಇದನ್ನು ಓದಿ : Appu movies : ಅಪ್ಪು ಬದುಕಿದ್ದರೆ ಮಾಡಬೇಕಾಗಿದ್ದ ಸಿನಿಮಾಗಳು ಯಾವುವು ಗೊತ್ತಾ?

Leave A Reply

Your email address will not be published.