Appu : ಅಪ್ಪು ಮತ್ತು ಶಂಕರ್ ನಾಗ್ ಒಟ್ಟಿಗೆ ಇರುವ ಈ ಅಪರೂಪದ ವಿಡಿಯೋ ನೋಡಿದ್ರೆ ನೀವು ಕಣ್ಣೀರು ಹಾಕೋದು ಗ್ಯಾರಂಟಿ

0

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Appu) ಅವರು ತಾವು ಬದುಕಿದ್ದಷ್ಟು ಕಾಲ ಪರೋಪಕಾರ ಹಾಗೂ ಅಜಾತಶತ್ರುವಾಗಿಯೇ ಜೀವನ ನಡೆಸಿದವರು. ತಾವು ಗಾಯಕನಾಗಿ ಹಾಡಿರುವಂತಹ ಚಿತ್ರಗಳಿಂದ ಪಡೆದಂತಹ ಸಂಭಾವನೆಯನ್ನು ಸಂಪೂರ್ಣವಾಗಿ ವೃದ್ಧಾಶ್ರಮಕ್ಕಾಗಿ ಬಳಸಿಕೊಳ್ಳುತ್ತಿದ್ದ ಏಕೈಕ ಕನ್ನಡದ ನಟ ಎಂದರೆ ಅದು ಅಪ್ಪು ಅವರು ಮಾತ್ರ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬೇರೆ ನಟರಿಗಿಂತ ವಿಭಿನ್ನವಾಗಿ ಸಿನಿಮಾ ಹಾಗೂ ಸಿನಿಮಾ ನಿರ್ಮಾಣದಲ್ಲಿ ಈಗಾಗಲೇ ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದಕ್ಕೆ ಜೀವಂತ ಉದಾಹರಣೆ ಎನ್ನುವಂತೆ ರಾಜ್ಯದ ಪ್ರಾಕೃತಿಕ ಸೌಂದರ್ಯವನ್ನು ತೋರಿಸುವ ಸಾಕ್ಷಿ ಚಿತ್ರವಾಗಿರುವ ಗಂಧದಗುಡಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿರುವುದು. ಹಣವನ್ನು ಗಳಿಸುವ ಅದೆಷ್ಟೋ ಸಿನಿಮಾಗಳನ್ನು ಮಾಡುವ ಸ್ಟಾರ್ ಗಳ ನಡುವೆ ಕನ್ನಡದ ವನ್ಯ ಸಂಪತ್ತನ್ನು ಇಂದಿನ ಯುವ ಪೀಳಿಗೆಗೆ ತೋರಿಸುವಂತಹ ಕೆಲಸವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮರಣದ ನಂತರವೂ ಕೂಡ ಮಾಡುತ್ತಿದ್ದಾರೆ.

ಮರಣದ ನಂತರವೂ ಕೂಡ ಸೂರ್ಯ ಚಂದ್ರರು ಇರುವವರೆಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡಿಗರ ಉಸಿರಿನಲ್ಲಿ ಜೀವಂತವಾಗಿರುವಂತಹ ಕೆಲಸವನ್ನು ತಾವು ಬದುಕಿರುವ ಕೆಲವೇ ಕೆಲವು ಸಮಯಗಳಲ್ಲಿ ಮಾಡಿ ಮುಗಿಸಿದ್ದಾರೆ. ಇಂತಹ ಮಗನನ್ನು ಪಡೆದ ರಾಜಕುಮಾರ್ ಹಾಗೂ ಪಾರ್ವತಮ್ಮನವರೆ ಪುಣ್ಯವಂತರು ಎಂದರು ತಪ್ಪಾಗಲಾರದು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಣ್ಣಾವರ ಗಾಜನೂರಿನ ಹುಟ್ಟಿದ ಮನೆಯನ್ನು ಅವರದೇ ಧ್ವನಿಯಲ್ಲಿ ತೋರಿಸಿರುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಪ್ಪು ಅವರ ಮರಣ ನಂತರ ಇಂತಹ ವಿಡಿಯೋಗಳನ್ನು ನೋಡಲು ಪ್ರತಿಯೊಬ್ಬರೂ ಕೂಡ ಭಾವಕರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆ ಪುನೀತ್ ಮತ್ತು ಶಂಕರ್ ನಾಗ್ ಅವರ ವಿಚಾರ ಕೂಡ ಇದೇ ಹರಿದಾಡುತ್ತಿದೆ.. ಪುನೀತ್ ಅವರು ಚಿಕ್ಕವರಿದ್ದಾಗ ರಾಜಕುಮಾರ್ ಅವರಿಗೆ ಶಂಕರ್ ನಾಗ್ ಅವರು ನಿರ್ದೇಶಿಸಿದ ಒಂದು ಮುತ್ತಿನ ಕಥೆ ಚಿತ್ರದ ಮೂರ್ತದಲ್ಲಿ ತೆಗೆದ ಅಪ್ಪು ಅವರ ಫೋಟೋ ಇದೀಗ ಹರಿದಾಡುತ್ತೆ.. ಅಪ್ಪು ಅವರೇ ಶಂಕರ್ ನಾಗ್ ಮತ್ತು ರಾಜ್ ಕುಮಾರ್ ಅವರ ಚಿತ್ರದ ಮುಹೂರ್ತಕ್ಕೆ ಕ್ಲಾಪ್ ಮಾಡಿದ್ರು..

ಇತ್ತೀಚಿಗೆ ಪುನೀತ್ ರಾಜಕುಮಾರ್ ಮತ್ತು ಶಂಕರ್ ನಾಗ್ ಅವರ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ಶಂಕರ್ ನಾಗ್ ಮತ್ತು ಪುನೀತ್ ರಾಜಕುಮಾರ್ ಅವರು ಹೆಗಲ ಮೇಲೆ ಕೈ ಹಾಕಿಕೊಂಡು ನಿಂತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತೆ ಇದು ಅಭಿಮಾನಿ ಒಬ್ಬರು ಕ್ರಿಯೇಟಿವಾಗಿ ಎಡಿಟ್ ಮಾಡಿ ಕ್ರಿಯೇಟ್ ಮಾಡಿರುವ ಫೋಟೋ ಆಗಿದೆ ಆದರೂ ಕೂಡ ಇದು ನಿಜವಾಗಲೂ ತೆಗೆದಿರುವ ಹಾಗೆ ಕಾಣುತ್ತೆ..

ಇದನ್ನೂ ಓದಿ : Aditi prabhudeva : ಮದುವೆಯಾದ ರಾತ್ರಿಯೇ ಈ ರೀತಿ ಆಗೋದಾ.. ಮದುವೆ ದಿನದ ರಾತ್ರಿಯೇ ಶಾಕ್ ಆದ ಅದಿತಿ ಪ್ರಭುದೇವ ಪತಿ ಯಶಸ್!

Leave A Reply

Your email address will not be published.