Appu in Kantara : ಕಾಂತಾರದ ಕ್ಲೈಮ್ಯಾಕ್ಸ್ ನಲ್ಲಿ ಅಪ್ಪು. ವೈರಲ್ ಆಯ್ತು ನೋಡಿ ಯಾರು ಊಹಿಸಲಾಗದ ವಿಡಿಯೋ

0

ಕೇವಲ 16 ರಿಂದ 19 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವ ಮಟ್ಟಿಗೆ ದಾಖಲೆಯನ್ನು ಸೃಷ್ಟಿಸಿದೆ ಎನ್ನುವುದು ಈಗ ಇಡೀ ಜಗತ್ತೇ ತಿಳಿದಿರುವ ವಿಚಾರವಾಗಿದೆ. ಬಾಲಿವುಡ್ ಕೂಡ ಈ ಸ್ಮಾಲ್ ಬಜೆಟ್ ಸಿನಿಮಾದ ಮುಂದೆ ಮಂಡಿಯೂರಿ ಕುಳಿತಿದೆ ಎಂದರೆ ತಪ್ಪಾಗಲಾರದು. ನಮ್ಮ ಮೂಲ ಸಂಸ್ಕೃತಿಯನ್ನು ಕಾಂತಾರ ಸಿನಿಮಾದ ಮೂಲಕ ಪ್ರತಿಯೊಬ್ಬರಿಗೂ ಕೂಡ ಮನದಟ್ಟು ಮಾಡಬೇಕು ಎನ್ನುವ ರಿಶಬ್ ಶೆಟ್ಟಿ ಅವರ ಪ್ರಯತ್ನ ನಿರೀಕ್ಷೆಗಿಂತಲೂ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ ಎನ್ನಬಹುದಾಗಿದೆ. ಇದೀಗ appu in kantara ಅಂತ ಒಂದು ವಿಡಿಯೋ ಬಿಡುಗಡೆ ಆಗಿದೆ

ರಿಷಬ್ ಶೆಟ್ಟಿ ನಾಯಕನಟನಾಗಿ ಹಾಗೂ ನಿರ್ದೇಶಕನಾಗಿ ಮತ್ತು ಬರಹಗಾರನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಈಗಾಗಲೇ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಲಾಭವನ್ನು ತಂದು ಕೊಟ್ಟಿರುವ ಸಿನಿಮಾಗಳ ಪೈಕಿಯಲ್ಲಿ ಶಾಮೀಲಾಗಿದೆ. ಇದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ರಿಶಬ್ ಶೆಟ್ಟಿ ಅವರ ಸಿನಿಮಾ ಕರಿಯರ್ ಗೂ ದೊಡ್ಡ ಮಟ್ಟದ ಮೈಲೇಜ್ ಅನ್ನು ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಕಾಂತಾರ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದ ಮೂಲೆ ಮೂಲೆಗೂ ಕೂಡ ಪರಿಚಿತರಾಗಿದ್ದಾರೆ ನಮ್ಮ ರಿಷಬ್ ಶೆಟ್ಟಿ.

Appu in kantara movie climax video
Appu in kantara movie

ಈ ಮೂಲಕ ಮುಂದಿನ ದಿನಗಳಲ್ಲಿ ರಿಶಬ್ ಶೆಟ್ಟಿ ನಟನೆಯ ಅಥವಾ ನಿರ್ದೇಶನದಲ್ಲಿ ಮೂಡಿ ಬರುವ ಪ್ರತಿಯೊಂದು ಸಿನಿಮಾಗಳು ಕೂಡ ಪಾನ್ ಇಂಡಿಯಾ ಸಿನಿಮಾಗಳಾಗಿ ಭಾರತದ ಮೂಲೆ ಮೂಲೆಗೂ ಸುಲಭವಾಗಿ ತಲುಪುವುದರಲ್ಲಿ ಹೆಚ್ಚಿನ ಪ್ರಚಾರದ ಅಗತ್ಯ ಬೇಕಾಗಿರುವುದಿಲ್ಲ ಎಂದು ಹೇಳಬಹುದಾಗಿದೆ. ಇನ್ನು ನಿಮಗೆಲ್ಲ ತಿಳಿದಿರಬಹುದು ಕಾಂತಾರ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮುಂಚೆನೇ ಈ ಸಿನಿಮಾದಲ್ಲಿ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (appu) ಅವರು ನಟಿಸಬೇಕಾಗಿತ್ತು. ಆದರೆ ಬೇರೆ ಸಿನಿಮಾಗಳ ಕಮಿಟ್ಮೆಂಟ್ ಕಾರಣದಿಂದಾಗಿ ಅಪ್ಪು ಅವರು ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ.

ಹೇಗಿದ್ದರೂ ಕೂಡ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಜಗತ್ಪ್ರಸಿದ್ಧವಾಗಿರುವ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಗುಳಿಗ ದೇವರ ಆವಾಹನೆ ಆದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರ ಸ್ಥಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದ್ದರೆ ಹೇಗೆ ಕಾಣಿಸಿಕೊಳ್ಳುತ್ತಿದ್ದರು ಎಂಬ ಝಲಕ್ ಅನ್ನು ತೋರಿಸಲಾಗಿದ್ದು ಈಗಾಗಲೇ ಆ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೀವು ಕೂಡ ನೋಡಬಹುದಾಗಿದೆ. ಖಂಡಿತವಾಗಿ ಅಪ್ಪು ಇದ್ದಿದ್ದರೆ ಈ ದೃಶ್ಯ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುತ್ತಿತ್ತು ಎನ್ನಬಹುದಾಗಿದೆ.

Appu in kantara movie climax

ಇದನ್ನೂ ಓದಿ: Puneet rajkumar : ಪ್ರೇಮ್ ಮಗಳು ಮೊದಲ ಸಿನಿಮಾ ಪುನೀತ್ ರಾಜಕುಮಾರ್ ಅವರ ಜೊತೆ ಮಾಡಬೇಕಿತ್ತು. ಆ ಸಿನಿಮಾ ಯಾವುದು ಗೊತ್ತಾ?

Leave A Reply

Your email address will not be published.