Puneet rajkumar : ತಮ್ಮ ಅತ್ತೆ ಮಾವನ ಜೊತೆಗೆ ಪವರ್ ಸ್ಟಾರ್ ಹೇಗಿರ್ತಾರೆ ಗೊತ್ತಾ? ವೈರಲ್ ಆಯ್ತು ನೋಡಿ ಅಪರೂಪದ ವಿಡಿಯೋ.

0

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ( Puneet rajkumar) ಅವರು ಆರು ತಿಂಗಳ ಮಗುವಾಗಿದ್ದಾಗಲೇ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲ ನಟನಾಗಿ ಎಂಟರ ನೀಡುವ ಮೂಲಕ ಮುಂದಿನ ದಿನಗಳಲ್ಲಿ ತಾನು ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ಆಗಿ ಮರೆಯುತ್ತೇನೆ ಎಂಬ ಸುಳಿವನ್ನು ಚಿಕ್ಕವಯಸಿನಲ್ಲೇ ನೀಡಿದ್ದರು. ಆದರೆ ಅತ್ಯಂತ ಕಡಿಮೆ ಸಮಯದಲ್ಲಿ ನಮ್ಮೆಲ್ಲರ ಮನಸ್ಸನ್ನು ಗೆದ್ದ ಅಪ್ಪು ಅಷ್ಟೇ ಕಡಿಮೆ ಸಮಯದಲ್ಲಿ ನಮ್ಮನ್ನೆಲ್ಲ ಬಿಟ್ಟು ಅಗಲಿ ಹೋಗುತ್ತಾರೆ ಎಂಬುದನ್ನು ಯಾರೂ ಕೂಡ ಕನಸಿನಲ್ಲಿ ಕೂಡ ಭಾವಿಸಿರಲು ಸಾಧ್ಯವಿಲ್ಲ.

ಹೌದು ಮಿತ್ರರೇ ಕೇವಲ 46 ವರ್ಷ ವಯಸ್ಸಿನಲ್ಲಿ ಅಕಾಲಿಕವಾಗಿ ನಮ್ಮನ್ನೆಲ್ಲಾ ಬಿಟ್ಟು ಅಪ್ಪು puneet rajkumar ಅವರು ಅಗಲಿರುವುದು ಈಗಾಗಲೇ ಅವರನ್ನು ಕಳೆದುಕೊಂಡು ಒಂದು ವರ್ಷ ಕಳೆದಿದ್ದರೂ ಕೂಡ ಇಂದಿಗೂ ಅವರನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ನಮ್ಮ ಮನಸ್ಸು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರು ನಟ ಎಂಬುದಾಗಿ ಎಲ್ಲರೂ ಕೂಡ ಕರೆಯುತ್ತಾರೆ. ಅಷ್ಟರಮಟ್ಟಿಗೆ ಸೈಲೆಂಟ್ ಆಗಿಯೇ ಒಳ್ಳೆಯ ಕೆಲಸ ಮಾಡಿಕೊಂಡು ಯಾವುದೇ ಕೆಟ್ಟ ವಿಚಾರಗಳಲ್ಲಿ ತಮ್ಮ ಹೆಸರು ಬಾರದಂತೆ ನೋಡಿಕೊಂಡವರು.

ಸಂಪೂರ್ಣ ಶುದ್ಧ ವ್ಯಕ್ತಿತ್ವಕ್ಕೆ ನೇರವಾದ ಹಾಗೂ ನಿಜವಾದ ಉದಾಹರಣೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎನ್ನಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ನೀಡುತ್ತಿದ್ದ ಗೌರವ ಹಾಗೂ ಪ್ರೀತಿ ಆದರಗಳನ್ನು ನಿಜಕ್ಕೂ ಕೂಡ ಮೆಚ್ಚಲೇಬೇಕು. ಅಪ್ಪು ತಮ್ಮ ಮಾವ ಹಾಗೂ ಅತ್ತೆ ಅಂದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪೋಷಕರ ಬಳಿ ಹೇಗೆ ನಡೆದುಕೊಳ್ಳುತ್ತಿದ್ದರು ಎಂಬ ಅಪರೂಪದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Puneet rajkumar with ashwini puneet rajkumar father and mother

ಬಂದ ಕೂಡಲೇ ಇಬ್ಬರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ನಗುನಗುತ್ತಲೇ ಅವರ ಜೊತೆಗೆ ಮಾತನಾಡಿಕೊಂಡಿದ್ದ ಅಪ್ಪು ಅವರ ಅಪರೂಪದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ಸಖತ್ ಆಗಿ ಸದ್ದು ಮಾಡುತ್ತಿದ್ದು ಇದು ಅಪ್ಪು ಅವರನ್ನು ಪಕ್ಕ ಫ್ಯಾಮಿಲಿ ಮ್ಯಾನ್ ಹಾಗೂ ಅತ್ಯಂತ ಸಂಸ್ಕಾರಯುತ ನಡವಳಿಕೆಗಳನ್ನು ನಿಜ ಜೀವನದಲ್ಲಿ ಕೂಡ ಹೊಂದಿರುವ ಮನುಷ್ಯ ಎಂಬುದನ್ನು ಸಾಬೀತುಪಡಿಸುವಂತೆ ಮಾಡಿದೆ. ನೀವು ಕೂಡ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಬಹುದಾಗಿದೆ.

ಪುನೀತ್ ರಾಜಕುಮಾರ್ ಕಾಂತಾರ ಚಿತ್ರವನ್ನು ವೀಕ್ಷಿಸಿ ಹೇಳಿದ್ದೇನು? ಎರಡು ವರ್ಷ ಮುಂಚೆಯೇ ಪುನೀತ್ ರಾಜಕುಮಾರ್ ಭವಿಷ್ಯ ನುಡಿದಿದ್ದರು.

Leave A Reply

Your email address will not be published.