Appu :ಮಂಗಳಮುಖಿಯರಿಗೆ ಅದೊಂದು ಸಹಾಯ ಮಾಡಿ ಯಾರಿಗೂ ಹೇಳಬೇಡಿ ಎಂಬುದಾಗಿ ಎಂದು ಹೇಳಿದ್ದ ಅಪ್ಪು. ಏನದು ಗೊತ್ತಾ?

0

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Appu) ಅವರು ಕಳೆದ ವರ್ಷ ಅಂದರೆ 2021ರ ಅಕ್ಟೋಬರ್ 29 ರಂದು ಅಕಾಲಿಕವಾಗಿ ಮರಣ ಹೊಂದಿರುವ ಮೂಲಕ ನಮ್ಮನ್ನೆಲ್ಲ ಅಗಲಿದ್ದಾರೆ. ದೈಹಿಕವಾಗಿ ಅವರು ನಮ್ಮನ್ನೆಲ್ಲ ಅಗಲಿರಬಹುದು ಆದರೆ ಮಾನಸಿಕವಾಗಿ ಇಂದು ಮುಂದೆ ಎಂದೆಂದೂ ಅಜರಾಮರರಾಗಿರುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಪ್ಪು ಅವರನ್ನು ಕಳೆದುಕೊಂಡು ಕೇವಲ ಕನ್ನಡ ಚಿತ್ರರಂಗದ ಒಬ್ಬ ನಟನನ್ನು ಕಳೆದುಕೊಂಡಂತೆ ಮಾತ್ರವಲ್ಲದೆ ತಮ್ಮದೇ ಒಬ್ಬ ಕುಟುಂಬದ ಸದಸ್ಯರನ್ನು ಕಳೆದುಕೊಂಡಂತೆ ಕನ್ನಡಿಗರು ಭಾವಿಸಿಕೊಂಡಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ (appu) ಅವರು ಮಾಡಿರುವಂತಹ ಸಹಾಯಗಳು ಹಾಗೂ ಜನೋಪಕಾರಿ ಕಾರ್ಯಗಳು ಅವರು ಬದುಕಿರುವವರೆಗೂ ಕೂಡ ಎಲ್ಲಿ ಸುದ್ದಿ ಆಗಿರಲಿಲ್ಲ. ಅವರ ಮರಣ ನಂತರ ಅವರು ಮಾಡಿರುವಂತಹ ಒಂದೊಂದೇ ಕಾರ್ಯಗಳ ಕುರಿತಂತೆ ಅವರಿಂದ ಸಹಾಯ ಪಡೆದವರು ಬಿಚ್ಚಿಡುತ್ತಾ ಬಂದು ಅಪ್ಪು ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಒಬ್ಬ ಜವಾಬ್ದಾರಿಯುತ ನಾಗರಿಕ ನಾಗಿಯೂ ಕೂಡ ದೊಡ್ಡ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ.

Appu helped mangala mukhi
Puneet rajkunar help to society

ಇನ್ನು ಮಂಗಳಮುಖಿಯರು ಎಂದರೆ ದೂರ ನಿಲ್ಲುವಂತಹ ಜನರ ನಡುವೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಂಗಳಮುಖಿಯರ ಕುರಿತಂತೆ ಮಾಡಿರುವಂತಹ ಸಾಮಾಜಿಕ ಕಾರ್ಯದ ಕುರಿತಂತೆ ಕೂಡ ಈಗ ತಿಳಿದು ಬಂದಿದೆ. ಮಂಗಳಮುಖಿಯರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆರ್ಥಿಕ ಸಹಾಯ ಮಾಡಿರುವ ಕುರಿತಂತೆ ಅದೇ ಮಂಗಳಮುಖಿಯರು ಈಗ ಹೇಳಿಕೊಂಡಿದ್ದಾರೆ.

ಹೌದು ಮಿತ್ರರೇ, ಮಂಗಳಮುಖಿಯರ ಆಶ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆರ್ಥಿಕವಾಗಿ ಹಾಗೂ ಬೇಕಾಗಿರುವಂತಹ ಸಾಮಗ್ರಿಗಳ ಸಹಾಯವನ್ನು ಕೂಡ ಮಾಡಿದ್ದಾರೆ ಎಂಬುದನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಂದ ಸಹಾಯವನ್ನು ಪಡೆದಿರುವ ಮಂಗಳಮುಖಿಯ ಹೇಳಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಲ್ಲಾ ವರ್ಗದ ಅಸಹಾಯಕ ಜನರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾಡಿರುವ ಸಹಾಯ ನಿಜಕ್ಕೂ ಚಿರಸ್ಮರಣೀಯ ಹಾಗೂ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ನೂರಕ್ಕೆ ನೂರರಷ್ಟು ನ್ಯಾಯವನ್ನು ಒದಗಿಸಿದಂತಾಗಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇದನ್ನೂ ಓದಿ : Puneet rajkumar : ತಮ್ಮ ಅತ್ತೆ ಮಾವನ ಜೊತೆಗೆ ಪವರ್ ಸ್ಟಾರ್ ಹೇಗಿರ್ತಾರೆ ಗೊತ್ತಾ? ವೈರಲ್ ಆಯ್ತು ನೋಡಿ ಅಪರೂಪದ ವಿಡಿಯೋ.

Leave A Reply

Your email address will not be published.