Puneet rajkumar : ಪ್ರೇಮ್ ಮಗಳು ಮೊದಲ ಸಿನಿಮಾ ಪುನೀತ್ ರಾಜಕುಮಾರ್ ಅವರ ಜೊತೆ ಮಾಡಬೇಕಿತ್ತು. ಆ ಸಿನಿಮಾ ಯಾವುದು ಗೊತ್ತಾ?

0

ಸ್ಟಾರ್ ನಟರ ಪುತ್ರ ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಈಗಾಗಲೇ ಅಭಿನಯಿಸಿ ಅನುಭವ ಇರುವ ಸ್ಟಾರ್ ನಟರ ಮಕ್ಕಳು ಕೂಡ ಸಿನಿಮಾ ವೃತ್ತಿಯನ್ನೇ ಆಯ್ದುಕೊಳ್ಳುವುದು ವಾಡಿಕೆ. ರಾಜಕುಮಾರ್ ಮಕ್ಕಳು puneet rajkumar, shivarajkumar, raghavendra rajkumar ಇವರೆಲ್ಲ ತಂದೆಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಕನ್ನಡದಲ್ಲಿ ಇತ್ತೀಚಿಗೆ ತೆರೆಕಂಡ ಶರಣ್ ಅಭಿನಯದ ಗುರು ಶಿಷ್ಯರು ಸಿನಿಮಾದಲ್ಲಿ ಈ ರೀತಿಯ ಒಂದು ಗುಂಪನ್ನೇ ಕಾಣಬಹುದು. ನೆನಪಿರಲಿ ಖ್ಯಾತಿಯ ಪ್ರೇಮ್ ಮಗ ಬುಲೆಟ್ ಪ್ರಕಾಶ್ ಮಗ ಮೊದಲಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗೆ ಮಾಲಾಶ್ರೀ ಅವರ ಮಗಳು ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತ ಅವರ ಸರದಿ.

ಇಂಜಿನಿಯರಿಂಗ್ ಪದವಿ ಓದುತ್ತಿರುವ ಅಮೃತ ನೆನಪಿರಲಿ ಪ್ರೇಮ್ ಅವರ ಪುತ್ರಿ ಸದ್ಯ ಸ್ಟಡಿ ಮುಗಿಸುವವರೆಗೂ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದರಂತೆ ಅಮೃತ. ಆದರೆ ನಿರ್ಮಾಣದ ಹೊಸ ಸಿನಿಮಾ ಒಂದಕ್ಕೆ ಅಮೃತ ಅವರನ್ನು ಆಯ್ಕೆ ಮಾಡಿದಾಗ ಅವರು ಸ್ಕ್ರಿಪ್ಟ್ ಕೇಳಿ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಹೌದು, ಖ್ಯಾತ ನಟ ನಿರ್ಮಾಪಕ ಡಾಲಿ ಧನಂಜಯ್ (dali dhananjay) ಇದೀಗ ಕನ್ನಡದಲ್ಲಿ ಹೆಚ್ಚು ಸಿನಿಮಾ ನಿರ್ಮಾಣದ ಕಡೆಗೆ ಒಲವು ತೋರಿಸುತ್ತಿದ್ದಾರೆ. ಅದೇ ರೀತಿ ಅವರ ನಿರ್ಮಾಣದಲ್ಲಿ ಟಗರು ಪಲ್ಯ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾಕ್ಕೆ ಸರಿಯಾದ ನಾಯಕಿಯನ್ನು ಹುಡುಕುತ್ತಿರುವಾಗ ನೆನಪಿರಲಿ ಪ್ರೇಮ್ (nenapirali prem) ಅವರ ಪುತ್ರಿ ಅಮೃತ ನಿರ್ದೇಶಕರ ಕಣ್ಣಿಗೆ ಬೀಳುತ್ತಾರೆ. ಕೂಡಲೇ ಪ್ರೇಮ್ ಅವರನ್ನು ಸಂಪರ್ಕಿಸಿದ ನಿರಂಜನ್ ನಮ್ಮ ಸ್ಕ್ರಿಪ್ಟ್ ಗೆ ಹೊಂದಾಣಿಕೆಯಾಗುವಂತಹ ಫೇಸ್ ಕಟ್ ಅಮೃತ ಅವರದ್ದು. ಹಾಗಾಗಿ ಅವರು ಈ ಸಿನಿಮಾದಲ್ಲಿ ನಟಿಸಿದರೆ ಚೆನ್ನಾಗಿ ಇರುತ್ತೆ ಎಂದು ಹೇಳಿದರಂತೆ. ಪ್ರೇಮ್ ಸ್ಕ್ರಿಪ್ಟ್ ಅನ್ನು ಓದಿ ಅಮೃತಾ ಅವರ ಬಳಿ ಕೇಳಿದಾಗ ಅಮೃತ ಕೂಡ ಇದನ್ನ ಒಪ್ಪಿದ್ದಾರೆ ಒಟ್ಟಾರೆ ಇದೀಗ ಸ್ಟಾರ್ ನಟನ ಮಗ ಹಾಗೂ ಮಗಳು ಇಬ್ಬರು ಸಿನಿಮಾದಲ್ಲಿ ನಟಿಸುವುದಕ್ಕೆ ಮುಂದಾಗಿದ್ದಾರೆ.

Puneet rajkumar movie with amrutha prem?

ನಟ ಪ್ರೇಮ್ ಅವರಿಗೆ ಪುನೀತ್ ರಾಜಕುಮಾರ್ ಅವರು ಎಂದರೆ ಬಹಳಷ್ಟು ಅಚ್ಚು ಮೆಚ್ಚು ಪುನೀತ್ ರಾಜಕುಮಾರ್ ರವರು ನಟ ಪ್ರೇಮ್ ಅವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಾಗ ನಿಂದಲೂ ಕೂಡ ಅವರಿಗೆ ಸಪೋರ್ಟ್ ಮಾಡಿಕೊಂಡೆ ಬಂದಿದ್ದರು. ಅಷ್ಟೇ ಅಲ್ಲದೆ ಪ್ರೇಮ್ ಅವರ ಮಗಳು ಅಮೃತ ಪ್ರೇಮ್ ಗೆ ಕೂಡ ಪುನೀತ್ ರಾಜಕುಮಾರ್ ಅವರೆಂದರೆ ತುಂಬಾ ಅಚ್ಚುಮೆಚ್ಚು ಸ್ವತಹ ಪುನೀತ್ ರಾಜಕುಮಾರ್ (Puneet rajkumar) ಅವರೇ ಪ್ರೇಮ್ ಮಗಳ ಸೌಂದರ್ಯವನ್ನು ನೋಡಿ ಹಾಡಿ ಹೊಗಳಿದ್ದರು..

Puneet rajkumar with amrutha prem
Puneet rajkumar with amrutha prem

ಅಷ್ಟೇ ಅಲ್ಲದೆ ಸಿನಿಮಾದಲ್ಲಿ ಯಾಕೆ ಹೀರೋಯಿನ್ ಆಗಬಾರದು? ಎಂದು ಪ್ರೇಮ್ ಮಗಳ ಬಳಿ ಮೊದಲ ಬಾರಿಗೆ ಹೇಳಿದ್ದರು. ಹಾಗೆ ತಮ್ಮ ನಿರ್ಮಾಣ ಸಂಸ್ಥೆಯಿಂದಲೇ ಒಂದು ಸಿನಿಮಾಗೆ ಅವಕಾಶ ಕೂಡ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಅಷ್ಟೇ ಅಲ್ಲದೆ ಪುನೀತ್ ( Puneet rajkumar ) ಅವರು ದ್ವಿತ್ವ ಎಂಬ ಚಿತ್ರದಲ್ಲಿ ಅಮೃತ ಪ್ರೇಮ್ ಅವರನ್ನು ಎರಡನೇ ಹೀರೋಯಿನ್ ಆಗಿ ಆಯ್ಕೆ ಮಾಡುವ ಭರವಸೆ ನೀಡಿದ್ದರು.. ಆದರೆ ದುರದೃಷ್ಟವಶಾತ್ ನಟ ಪ್ರೇಮ್ ಅವರ ಮಗಳಿಗೆ ಪುನೀತ್ ಅವರ ಜೊತೆ ನಟಿಸುವ ಅದೃಷ್ಟ ಸಿಗಲಿಲ್ಲ.

ಇನ್ನು ಈ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್ (nenapirali prem ) ಅವರು ನಾನು ನನ್ನ ಮಕ್ಕಳು ಎಲ್ಲರೂ ಕ್ಯಾಮರಾ ಎದುರಿಸಿದ್ದೇವೆ.. ಅದೇ ರೀತಿ ನನ್ನ ಮಕ್ಕಳನ್ನು ಕೂಡ ನೀವು ಸೆರೆ ಹಿಡಿಯುವಂತಾಗಲಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಜೊತೆಗೆ ಬಡವರ ಮಕ್ಕಳು ಬೆಳೆಯಬೇಕು ಅದಕ್ಕೆ ಸಾಕ್ಷಿ ಡಾಲಿ ಧನಂಜಯ್ (daali dhananjya) ಸಾಕಷ್ಟು ಕಷ್ಟಪಟ್ಟು ಇದೀಗ ಸಿನಿಮಾ ನಿರ್ಮಾಣದ ಹಂತದವರೆಗೆ ಬಂದಿದ್ದಾರೆ. ಇನ್ನು ಇಷ್ಟು ದಿನ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ ಅಮೃತ ಇದೀಗ ತಕ್ಷಣ ಈ ಸ್ಕ್ರಿಪ್ಟ್ ಕೇಳಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾಳೆ. ಆಕೆಗೆ ಯೋಗ್ಯತೆ ಇದ್ರೆ ಅವಳನ್ನ ನೀವು ಸಿನಿಮಾರಂಗದಲ್ಲಿ ಬೆಳೆಸಿ ಎಂದು ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ ಪ್ರೇಮ್. ಟಗರು ಪಲ್ಯ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಹೊರಟ ಅಮೃತ ಅವರಿಗೆ ಲಕ್ ಕೈಹಿಡಿಯುತ್ತಾ ಕಾದು ನೋಡಬೇಕು.

Appu :ಮಂಗಳಮುಖಿಯರಿಗೆ ಅದೊಂದು ಸಹಾಯ ಮಾಡಿ ಯಾರಿಗೂ ಹೇಳಬೇಡಿ ಎಂಬುದಾಗಿ ಎಂದು ಹೇಳಿದ್ದ ಅಪ್ಪು. ಏನದು ಗೊತ್ತಾ?

Leave A Reply

Your email address will not be published.